ಆಗಸ್ಟ್ 29; ನರೇಂದ್ರ ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು
ನವದೆಹಲಿ, ಆಗಸ್ಟ್ 29; ಭಾರತದ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆಗಸ್ಟ್ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮ ಇದಾಗಿತ್ತು.
ಈ ಬಾರಿಯ 'ಮನ್ ಕೀ ಬಾತ್'ನಲ್ಲಿ ನರೇಂದ್ರ ಮೋದಿ ಒಲಂಪಿಕ್ಸ್‌ನಲ್ಲಿ ಕ್ರೀಡಾಪಟುಗಳ ಸಾಧನೆ, ಕೃಷ್ಣ ಜನ್ಮಾಷ್ಠಾಮಿ, ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿದರು. ದೇಶದ ಜನರಿಗೆ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳನ್ನು ನರೇಂದ್ರ ಮೋದಿ ಕೋರಿದರು.
"ಒಲಿಂಪಿಕ್ಸ್ ಹಾಕಿಯಲ್ಲಿ ನಾವು 40 ವರ್ಷಗಳ ಬಳಿಕ ಪದಕ ಗೆದ್ದೆವು. ಮೇಜರ್ ಧ್ಯಾನ್ ಚಂದ್ ಅವರು ಇದ್ದಿದ್ದರೆ ಇಂದು ಎಷ್ಟು ಖುಪಿಪಡುತ್ತಿದ್ದರು ಎಂದು ಯಾರಾದರೂ ಊಹಿಸಬಲ್ಲಿರಾ?" ಎಂದು ನರೇಂದ್ರ ಮೋದಿ ಪ್ರಶ್ನಿಸಿದರು.

"ಒಲಂಲಿಕ್ಸ್‌ನಲ್ಲಿನ ಸಾಧನೆ ಬಳಿಕ ದೇಶದಲ್ಲಿ ಕ್ರೀಡಾ ಕ್ಷೇತ್ರದ ಬಗ್ಗೆ ಅಪಾರವಾದ ಚರ್ಚೆ ನಡೆಯುತ್ತಿದೆ. ಯುವಕರು ಈ ಕ್ಷೇತ್ರದತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಹಳ್ಳಿ, ಪಟ್ಟಣ, ನಗರದ ಮೈದಾನಗಳು ಕ್ರೀಡಾಪಟುಗಳಿಂದ ತುಂಬಿರಬೇಕು. ಸರ್ವರ ಒಗ್ಗೂಡುವಿಕೆಯಿಂದ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿದೆ" ಎಂದು ಮೋದಿ ಹೇಳಿದರು.
This year we won an Olympic medal in hockey after 40yrs. You can imagine how happy Major Dhyan Chand must be today. We're seeing love for sports in the youth today. This passion for sports is the greatest tribute to Major Dhyan Chand: PM Modi during 'Mann Ki Baat' pic.twitter.com/SgADr9nGhW
— ANI (@ANI) August 29, 2021
ಮೋದಿ ಭಾಷಣದ ಮುಖ್ಯಾಂಶಗಳು
* ಕಳೆದ ಹಲವು ವರ್ಷಗಳಿಂದ ಮಧ್ಯಪ್ರದೇಶದ ಇಂಧೋರ್ ನಗರ ಸ್ವಚ್ಛತಾ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. ನಗರದ ಜನರು ಈ ಕೈಕಟ್ಟಿ ಕುಳಿತಿಲ್ಲ. ನದಿ ಮತ್ತು ಜಲಮೂಲಗಳ ಸ್ವಚ್ಛತೆಗಾಗಿ ನೀಡಲಾಗುವ ಪ್ರಮಾಣ ಪತ್ರವನ್ನು ಪಡೆಯಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ.
* ಗುಜರಾತ್ ರಾಜ್ಯದಲ್ಲಿ ಸಂಸ್ಕೃತ ಭಾಷೆ ಉಳಿಸುವ ಕೆಲಸ ಮಾಡಲಾಗುತ್ತಿದೆ. ರೇಡಿಯೊ ಯೂನಿಟಿ 90 ಎಫ್‌ಎಂನಲ್ಲಿ ರೇಡಿಯೊ ಜಾಕಿಗಳು ಕೇಳುಗರ ಜೊತೆ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ.
ರಾಷ್ಟ್ರೀಯ ಕ್ರೀಡಾ ದಿನವಾದ ಇಂದು, ಪ್ರಧಾನಿ ಶ್ರೀ@narendramodi ತಮ್ಮ @mannkibaat ನಲ್ಲಿ ಧ್ಯಾನ್ ಚಂದ್ ಅವರನ್ನು ನೆನಪಿಸಿಕೊಂಡರು.
— B Y Raghavendra (@BYRBJP) August 29, 2021
ಯುವಕರ ಭವಿಷ್ಯದ ಬಗ್ಗೆ ಮಾತನಾಡಿದ ಪ್ರಧಾನಿ, ಶ್ರೀಕೃಷ್ಣನ ಬೋಧನೆಗಳ ಮಹತ್ವವನ್ನೂ ಪ್ರಸ್ತಾಪಿಸಿದರು. ತಂದೆ @BSYBJP ಅವರ ಜೊತೆಯಲ್ಲಿ ಕುಳಿತು ಇಂದಿನ ಮನ್ ಕೀ ಬಾತ್ ಕಾರ್ಯಕ್ರಮವನ್ನು ಕೇಳಿಸಿಕೊಂಡೆ. pic.twitter.com/kojbMekiVC
* ನಾಳೆ ಜನ್ಮಾಷ್ಟಮಿಯ ದೊಡ್ಡ ಹಬ್ಬವಿದೆ. ಜನ್ಮಾಷ್ಟಮಿಯ ಈ ಹಬ್ಬ ಭಗವಾನ್ ಶ್ರೀ ಕೃಷ್ಣನ ಜನ್ಮದಿನವಾಗಿದೆ. ತುಂಟ ಕೃಷ್ಣನಿಂದ ಹಿಡಿದು ವಿರಾಟ ರೂಪವನ್ನು ತಾಳುವ ಕೃಷ್ಣನವರೆಗೆ, ಶಾಸ್ತ್ರಗಳ ಜ್ಞಾನವುಳ್ಳ ಕೃಷ್ಣನಿಂದ ಶಸ್ತ್ರಾಸ್ತ್ರಗಳಿಂದ ಸಮರ್ಥನಾದ ಭಗವಂತನ ಎಲ್ಲ ರೂಪಗಳ ಪರಿಚಯ ನಮಗಿದೆ.
* ಜನ್ಮಾಷ್ಟಮಿಗೆ ಕೆಲ ದಿನಗಳ ಹಿಂದೆ ನಾನು ಅಂತಹ ಆಸಕ್ತಿಕರ ಅನುಭವವನ್ನು ಹೊಂದಿದ್ದೇನೆ. ಹಾಗಾಗಿ ನಾನು ನಿಮಗೆ ಈ ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ಈ ತಿಂಗಳ 20 ರಂದು, ಸೋಮನಾಥ ದೇವಾಲಯದ ನಿರ್ಮಾಣ ಕಾರ್ಯವನ್ನು ಲೋಕಾರ್ಪಣೆಗೊಳಿಸಲಾಯಿತು ಎಂಬುದು ನಿಮಗೆ ನೆನಪಿರಬಹುದು.
* ಸೋಮನಾಥ ದೇವಸ್ಥಾನದಿಂದ 3-4 ಕಿಲೋಮೀಟರ್ ದೂರದಲ್ಲಿಯೇ ಭಾಲ್ಕ ತೀರ್ಥವಿದೆ, ಈ ಭಾಲ್ಕ ತೀರ್ಥವು ಭೂಮಿಯ ಮೇಲೆ ಶ್ರೀಕೃಷ್ಣನು ಅಂತಿಮ ಕ್ಷಣಗಳನ್ನು ಕಳೆದ ಸ್ಥಳವಾಗಿದೆ. ಒಂದು ರೀತಿಯಲ್ಲಿ, ಈ ಪ್ರಪಂಚದಲ್ಲಿ ಭಗವಂತನ ಲೀಲೆಗಳು ಇಲ್ಲಿ ಮುಕ್ತಾಯಗೊಂಡಿದ್ದವು. ಸೋಮನಾಥ ಟ್ರಸ್ಟ್ ನಿಂದ ಈ ಸಂಪೂರ್ಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
* ಇತ್ತೀಚಿನ ದಿನಗಳಲ್ಲಿ ಆಗಿರುವ ಪ್ರಯತ್ನಗಳಿಂದಾಗಿ ಸಂಸ್ಕೃತ ಭಾಷೆಯ ಕುರಿತು ಹೊಸದೊಂದು ಅರಿವು ಮೂಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಬೇಕಾದ ಸಮಯ ಇದಾಗಿದೆ. ನಮ್ಮ ಪರಂಪರೆಯ ಪಾಲನೆ ಮಾಡುವುದು, ಅವುಗಳನ್ನು ನಿರ್ವಹಿಸುವುದು, ಹೊಸ ಪೀಳಿಗೆಗೆ ನೀಡುವುದು ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿರುವ ಇಂತಹ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದಿದ್ದಲ್ಲಿ, ಅಂತಹ ಯಾವುದೇ ಮಾಹಿತಿ ತಮ್ಮ ಬಳಿ ಇದ್ದಲ್ಲಿ ದಯವಿಟ್ಟು #CelebratingSanskrit ನೊಂದಿಗೆ social media ದಲ್ಲಿ ಅಂತಹ ಸಂಬಂಧಿತ ಮಾಹಿತಿಯನ್ನು ಖಂಡಿತವಾಗಿಯೂ ಹಂಚಿಕೊಳ್ಳಿ.
* ತಮಿಳುನಾಡಿನಲ್ಲಿ ಶಿವಗಂಗಾ ಜಿಲ್ಲೆಯ ಕಾಂಜೀರಂಗಾಲ್ ಪಂಚಾಯಿತ್ ನೋಡಿ. ಈ ಚಿಕ್ಕ ಪಂಚಾಯಿತ್ ಏನು ಮಾಡಿದೆಯೆಂದು ನೋಡಿ, ಇಲ್ಲಿ ನಿಮಗೆ ಕಸದಿಂದ ರಸದ ಮತ್ತೊಂದು ಮಾದರಿ ನೋಡಲು ಸಿಗುತ್ತದೆ. ಇಲ್ಲಿ ಗ್ರಾಮ ಪಂಚಾಯಿತಿಯು ಸ್ಥಳೀಯ ಜನತೆಯೊಂದಿಗೆ ಒಗ್ಗೂಡಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಒಂದು ಸ್ಥಳೀಯ ಯೋಜನೆಯನ್ನು ತಮ್ಮ ಗ್ರಾಮದಲ್ಲಿ ಆರಂಭಿಸಿಬಿಟ್ಟಿದೆ. ಸಂಪೂರ್ಣ ಗ್ರಾಮದಿಂದ ಸಂಗ್ರಹವಾಗುವ ತ್ಯಾಜ್ಯದಿಂದ ವಿದ್ಯುತ್ ತಯಾರಾಗುತ್ತದೆ ಮತ್ತು ಬಾಕಿ ಉಳಿದಿರುವ ಉತ್ಪನ್ನಗಳನ್ನು ಕೀಟನಾಶಕದ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರತಿ ದಿನ ಎರಡು ಟನ್ ತ್ಯಾಜ್ಯದ ವಿಲೇವಾರಿ ಮಾಡುವುದು ಗ್ರಾಮದ ಈ ವಿದ್ಯುತ್ ಸ್ಥಾವರದ ಸಾಮರ್ಥ್ಯವಾಗಿದೆ.












Click it and Unblock the Notifications