ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಕೇವಲ 1000 ರೂ. ದೇಣಿಗೆ ನೀಡಿದ ಮೋದಿ, ಶಾ! ಕಾರಣ ಏನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ತಮ್ಮದೇ ಪಕ್ಷಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ಜನ ಮುಖಂಡರು ಸಾವಿರ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.

ಹೌದು, ಈ ವಿಷಯವನ್ನು ಅವರುಗಳೇ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಮೋದಿ ಮತ್ತು ಅಮಿತ್ ಶಾ ಮಾತ್ರವಲ್ಲ ರಾಜ್ಯದ ಯಡಿಯೂರಪ್ಪ, ಸೇರಿ ಹಲವು ಕೇಂದ್ರ ಮಂತ್ರಿಗಳು ರಾಜ್ಯದ ಮಂತ್ರಿಗಳು ಸಹ ಬಿಜೆಪಿಗೆ 1000 ರೂಪಾಯಿ ದೇಣಿಗೆಯನ್ನು ನೀಡಿ ರಸೀದಿಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಖಾಲಿ ಆಗುತ್ತಿದೆ ಕಾಂಗ್ರೆಸ್ ಖಜಾನೆ, ದುಂದು ವೆಚ್ಚ ಕಡಿತಕ್ಕೆ ಸೂಚನೆ ಖಾಲಿ ಆಗುತ್ತಿದೆ ಕಾಂಗ್ರೆಸ್ ಖಜಾನೆ, ದುಂದು ವೆಚ್ಚ ಕಡಿತಕ್ಕೆ ಸೂಚನೆ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಪಕ್ಷಕ್ಕಾಗಿ ದೇಣಿಗೆ ಸಂಗ್ರಹಿಸಲು ಬಿಜೆಪಿ ಈ ತಂತ್ರ ಅನುಸರಿಸುತ್ತಿದೆ. ಜೊತೆಗೆ ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವಲ್ಲಿ ಪಾರದರ್ಶಕತೆ ಇರಬೇಕೆಂಬ ದೃಷ್ಠಿಯಿಂದ ರಶೀದಿಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಲಾಗುತ್ತಿದೆ.

ನರೇಂದ್ರ ಮೋದಿ ಆಪ್‌ ಮೂಲಕ ದೇಣಿಗೆ

'ನರೇಂದ್ರ ಮೋದಿ ಆಪ್‌' ಮೂಲಕವೇ ಈ ಎಲ್ಲ ನಾಯಕರು ದೇಣಿಗೆ ನೀಡಿದ್ದಾರೆ. ಮೋದಿ ಆಪ್‌ನಲ್ಲಿ ಬಿಜೆಪಿಗೆ ದೇಣಿಗೆ ನೀಡುವ ಆಯ್ಕೆ ಇದ್ದು, ಬಹಳ ಸರಳವಾದ ಈ ಆಯ್ಕೆಯನ್ನು ಬಳಸಿಕೊಂಡು ಹೆಚ್ಚು ಜನ ದೇಣಿಗೆ ನೀಡಲೆಂಬುದು ಬಿಜೆಪಿಯ ಬಯಕೆ. ಹಾಗಾಗಿ ದೇಣಿಗೆ ನೀಡಿದ ನಾಯಕರೆಲ್ಲರೂ ರಸೀದಿಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿ ದೇಣಿಗೆ ನೀಡಲು ಮನವಿ ಮಾಡುತ್ತಿದ್ದಾರೆ.

ಎಲ್ಲ ಬಿಜೆಪಿ ಮುಖಂಡರು ದೇಣಿಗೆ ನೀಡಿದ್ದಾರೆ

ನರೇಂದ್ರ ಮೋದಿ ಆಪ್‌ನಲ್ಲಿ ರೂ 5 ರಿಂದ 1000 ದ ವರೆಗೆ ದೇಣಿಗೆ ನೀಡಬಹುದಾಗಿ. 1000 ರೂಪಾಯಿಗಿಂತಲೂ ಹೆಚ್ಚಿನ ದೇಣಿಗೆ ನೀಡುವುದು ಸಾಧ್ಯವಿಲ್ಲ ಹಾಗಾಗಿ ಎಲ್ಲ ಬಿಜೆಪಿ ಮುಖಂಡರು 1000 ರೂಪಾಯಿ ದೇಣಿಗೆಯನ್ನು ನರೇಂದ್ರ ಮೋದಿ ಆಪ್‌ ಮೂಲಕ ನೀಡಿದ್ದಾರೆ.

ರುಚಿಯಾದ ಮೀನೂಟ ಬಡಿಸಿದವನಿಗೆ ಭರ್ಜರಿ ಗಿಫ್ಟ್‌ ನೀಡಿದ ಜಮೀರ್‌ ಅಹ್ಮದ್‌ ರುಚಿಯಾದ ಮೀನೂಟ ಬಡಿಸಿದವನಿಗೆ ಭರ್ಜರಿ ಗಿಫ್ಟ್‌ ನೀಡಿದ ಜಮೀರ್‌ ಅಹ್ಮದ್‌

2016-17 ರಲ್ಲಿ 532 ಕೋಟಿ ದೇಣಿಗೆ ಬಿಜೆಪಿಗೆ!

ಬಿಜೆಪಿಯು 2016-17ರ ಹಣಕಾಸು ವರ್ಷದಲ್ಲಿ 532.27 ಕೋಟಿ ದೇಣಿಗೆಯನ್ನು ಸ್ವೀಕರಿಸಿದೆ ಎಂದು ಲೆಕ್ಕಪತ್ರದಲ್ಲಿ ಹೇಳಲಾಗಿದೆ. ಇದೇ ಪಕ್ಷವು 2015-16 ರಲ್ಲಿ ಕೇವಲ 74 ಕೋಟಿ ದೇಣಿಗೆ ಸ್ವೀಕರಿಸಿತ್ತು. ಈ ಹಣಕಾಸು ವರ್ಷದಲ್ಲಿ ದೇಣಿಗೆ ಸಂಗ್ರಹ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್‌

ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್‌

ಕಾಂಗ್ರೆಸ್‌ ಪಕ್ಷವು ತನ್ನ ಬಳಿ ಸಂಪನ್ಮೂಲ ಕಡಿಮೆ ಆಗಿದೆ ಎಂದು ಇತ್ತೀಚೆಗಷ್ಟೆ ಹೇಳಿಕೊಂಡಿತ್ತು. ಅದಕ್ಕಾಗಿ ದೇಣಿಗೆ ಸಂಗ್ರಹಿಸಲು ಮುಂದಾಗಿತ್ತು ಅಲ್ಲದೆ ಖರ್ಚು ವೆಚ್ಚಗಳಿಗೆ ಕಡಿತ ಹಾಕಿತ್ತು. ಬಿಜೆಪಿಯು ದೇಣಿಗೆ ಸಂಗ್ರಹಿಸಲು ಹೊಸ ಡಿಜಿಟಲ್‌ ದಾರಿಯನ್ನು ಹುಡುಕಿದೆ. ಆಮ್ ಆದ್ಮಿ ಪಕ್ಷ ಸಹ ಪಕ್ಷಕ್ಕಾಗಿ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಅದು ಸಹ ಪಕ್ಷದ ಬ್ಯಾಂಕ್‌ ಖಾತೆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಜಾವಗಲ್ ಶ್ರೀನಾಥ್‌ಗೆ ಬಿಜೆಪಿ ಆಹ್ವಾನ, ಹಾಸನದಿಂದ ಟಿಕೆಟ್ ಸಾಧ್ಯತೆ ಜಾವಗಲ್ ಶ್ರೀನಾಥ್‌ಗೆ ಬಿಜೆಪಿ ಆಹ್ವಾನ, ಹಾಸನದಿಂದ ಟಿಕೆಟ್ ಸಾಧ್ಯತೆ

English summary
Prime minister Narendra Modi contribute 1000 rs to BJP party through Narendra Modi app and call to all people and supporters of BJP to contribute to BJP from Narendra Modi app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X