Justasking Vs Justsaying: ನರೇಂದ್ರ ಮೋದಿ ಅಲ್ಗಾರಿದಮ್ ರಾಜ ಎಂದ ಕೆ. ಅಣ್ಣಾಮಲೈ; ಪ್ರಯೋಜನವೇನ್ರಿ ಎಂದ ಪ್ರಕಾಶ್ ರಾಜ್
ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮತ್ತು ಆರ್ಎಸ್ಎಸ್ನ ಬಗ್ಗೆ ಕೊಡುವ ಕೆಲವು ಹೇಳಿಕೆಗಳು ಭಾರಿ ಸಂಚಲ ಸೃಷ್ಟಿ ಮಾಡುವುದು ಇದೆ. ಅಲ್ಲದೆ ಅವರ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡುವ ಟ್ವೀಟ್ಗಳು ಪರ - ವಿರೋಧ ಚರ್ಚೆಗಳಿಗೆ ಕಾರಣವಾಗುವುದು ಇದೆ. ಇದೀಗ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇನ್ಸ್ಟಾಗ್ರಾಮ್ ದಾಖಲೆಯ ಬಗ್ಗೆ ಪ್ರಶ್ನೆ ಮಾಡಿದ್ದು, ಈ ಟ್ವೀಟ್ ವೈರಲ್ ಆಗುತ್ತಿದೆ. ಇದಕ್ಕೆ ತಮಿಳುನಾಡಿನ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಸೇರಿದಂತೆ ಹಲವರು ರಿಯಾಕ್ಟ್ ಮಾಡಿದ್ದಾರೆ. ಇಷ್ಟಕ್ಕೂ ನಟ ಪ್ರಕಾಶ್ ರಾಜ್ ಟ್ವೀಟ್ ಏನು ಇದಕ್ಕೆ ನೆಟ್ಟಿಗರ ರಿಯಾಕ್ಷನ್ ಹೇಗಿದೆ ಎನ್ನುವುದನ್ನು ನೋಡೋಣ.
ಪ್ರಧಾನಿ ನರೇಂದ್ರ ಇನ್ಸ್ಟಾಗ್ರಾಮ್ ಖಾತೆಯು ಹೊಸ ದಾಖಲೆ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್ಸ್ ಇದ್ದಾರೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಅಲ್ಲದೆ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಸ್ಗಳನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೂ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ.

ಈ ವಿಷಯವನ್ನು ಮೋದಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಆದರೆ, ಇದರಿಂದ ಏನಾದರೂ ಪ್ರಯೋಜನವಿದೆಯೇ, ಭಾರತೀಯರಿಗೆ ಗೊತ್ತಾಗಬೇಕಾಗಿದೆ. #justasking ಎಂದು ನಟ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಪ್ರಕಾಶ್ ರಾಜ್ ಅವರನ್ನು ಬೆಂಬಲಿಸಿದರೆ, ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ನಟ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದೇನು, ಇದಕ್ಕೆ ಕೆ. ಅಣ್ಣಾಮಲೈ ರಿಪ್ಲೈ ಕೊಡುತ್ತಿರುವುದು ಯಾಕೆ ಎನ್ನುವುದನ್ನು ನೋಡೋಣ.
ನಟ ಪ್ರಕಾಶ್ ರಾಜ್ ಟ್ವೀಟ್ನಲ್ಲಿ ಏನಿದೆ
ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಕೆ. ಅಣ್ಣಾಮಲೈ ಅವರು, ಇತರರು ಆಲ್ಗೋರಿದಮ್ನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂದು ನಿದ್ದೆ ಬಿಟ್ಟು ಪ್ರಯತ್ನಿಸುತ್ತಾರೆ. ಆದರೆ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ Narendra Modi ಅವರು ಆಲ್ಗೋರಿದಮ್ನ್ನು ಅರ್ಥಮಾಡಿಕೊಳ್ಳುವುದಿಲ್ಲ - ಅವರೇ ಆಲ್ಗೋರಿದಮ್. ಅವರು ದಾರಿ ತೋರಿಸುತ್ತಾರೆ, ಜಗತ್ತು ಅದನ್ನು ಅನುಸರಿಸುತ್ತದೆ. ನಮ್ಮ ಪ್ರಧಾನಮಂತ್ರಿಗೆ Instagram ನಲ್ಲಿ 100 ಮಿಲಿಯನ್ ಫಾಲೋವರ್ಸ್ಗಳನ್ನು ದಾಟಿದ ಸಾಧನೆ ಎಂದು ಬರೆದುಕೊಂಡಿದ್ದರು. ಇದಕ್ಕೆ ನಟ ಪ್ರಕಾಶ್ ರಾಜ್ ಅವರು, ಇದರಿಂದ ಏನಾದರೂ ಪ್ರಯೋಜನವಿದೆಯೇ ಎಂದು ಕೇಳಿದ್ದರು. #justasking
ಕೆ. ಅಣ್ಣಾಮಲೈ ಅವರು ಹೇಳಿದ್ದೇನು
ಪ್ರಕಾಶ್ ರಾಜ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಕೆ. ಅಣ್ಣಾಮಲೈ ಅವರು ಅಣ್ಣಾ, ಬೇಡವಾದ ಸಲಹೆ! ಅಸಿಡಿಟಿಗೆ ಜೆಲುಸಿಲ್, ಬೆಂದ ಗಾಯಕ್ಕೆ ಬರ್ನೋಲ್ ಇದೆ. ಈಗ ಕೆಲವರಿಗೆ ಎರಡೂ ಬೇಕಾಗುವ ಸಮಯ ಬಂದಂತಿದೆ! ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ #justsaying ಎಂದೂ ಹೇಳಿದ್ದಾರೆ.
Any use ??? The Nation wants to know #justasking https://t.co/SFSxhLLzav
— Prakash Raj (@prakashraaj) February 26, 2026
ನೆಟ್ಟಿಗರು ಹೇಳಿದ್ದೇನು
ಇನ್ನು ನಟ ಪ್ರಕಾಶ್ ರಾಜ್ ಹಾಗೂ ಕೆ. ಅಣ್ಣಾಮಲೈ ಅವರ ಟ್ವೀಟ್ ವಾರ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಪ್ರಕಾಶ್ ರಾಜ್ ಅವರು ಈ ಹಿಂದೆ ತಮ್ಮ ಫೇಸ್ಬುಕ್ ಫಾಲೋವರ್ಸ್ಗಳ ಸಂಖ್ಯೆ 4 ಕೋಟಿಯಾದಾಗ ಥ್ಯಾಂಕ್ಸ್ ಹೇಳಿದ್ದರು ಎಂದು ಕೆಲವರು ಸ್ಕ್ರೀನ್ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಪ್ರಕಾಶ್ ರಾಜ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. 10 ವರ್ಷಗಳಲ್ಲಿ 100 ಮಿಲಿಯನ್ ಅನುಯಾಯಿಗಳು ಆದರೆ 0 ಪತ್ರಿಕಾಗೋಷ್ಠಿಗಳು. ಅಲ್ಗಾರಿದಮ್ ರಾಜ ಮತ್ತು ಹೊಣೆಗಾರಿಕೆ ನಿಜಕ್ಕೂ ಶೂನ್ಯ. ರಾಷ್ಟ್ರ ಇನ್ನೂ ಕಾಯುತ್ತಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications