• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಹೂಡಿಕೆಗೆ ಅಪಾರ ಅವಕಾಶಗಳಿವೆ: ಮೋದಿ

|

ನವದೆಹಲಿ, ಸೆಪ್ಟೆಂಬರ್ 03: "ಭಾರತದಲ್ಲಿ ಹೂಡಿಕೆ ಮಾಡಲು ಕಂಪನಿಗಳ ವಿಶ್ವಾಸ ಹೆಚ್ಚುತ್ತಿದೆ. ಅಮೆರಿಕ ಸೇರಿದಂತೆ ಬೇರೆ ದೇಶಗಳಿಂಗಿಂತ ನಮ್ಮಲ್ಲಿ ಹೂಡಿಕೆಗೆ ಅಪಾರವಾದ ಅವಕಾಶಗಳಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

   PM Care Fund ಗೆ ಪ್ರಧಾನಿ ಮೋದಿ ನೀಡಿದ ದೇಣಿಗೆ ಎಷ್ಟು? | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಗುರುವಾರ ರಾತ್ರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ-ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆಯ 3ನೇ ವಾರ್ಷಿಕ ನಾಯಕತ್ವ ಶೃಂಗಸಭೆ ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು.

   ಭಾರತದ ಸ್ಟಾರ್ಟ್‌ ಅಪ್‌ಗಳಲ್ಲಿ ಚೀನಾದ ಹೂಡಿಕೆ ಇಳಿಕೆ

   ಯುಎಸ್‌ಐಎಸ್‌ಪಿಎಫ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಭಾರತ ಮತ್ತು ಅಮೆರಿಕಾ ನಡುವಿನ ಪಾಲುದಾರಿಕೆಗಾಗಿ ಕೆಲಸ ಮಾಡುತ್ತದೆ. ಆಗಸ್ಟ್ 31ರಂದು ಆರಂಭವಾಗಿರುವ 5 ದಿನಗಳ ಶೃಂಗಸಭೆಯ ಈ ವರ್ಷದ ವಿಷಯ 'ಅಮೆರಿಕಾ-ಭಾರತದ ಹೊಸ ಸವಾಲುಗಳಿಗೆ ಪರಿಹಾರಗಳು' ಎಂಬುದು ಆಗಿದೆ.

   ಫ್ಲಿಪ್ ಕಾರ್ಟಿನಲ್ಲಿ 10 ಲಕ್ಷ ಹೂಡಿ, ಕೋಟಿಗಟ್ಟಲೆ ಬಾಚಿದ ಗುಪ್ತ

   ಯುಎಸ್‌ಐಎಸ್‌ಪಿಎಫ್‌ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಕೋವಿಡ್ ಪರಿಸ್ಥಿತಿ ನಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿಯ ಮೇಲೆ ಭಾರಿ ಪ್ರಭಾವ ಬೀರಿದೆ" ಎಂದು ಹೇಳಿದರು.

   ಜುಲೈನಲ್ಲಿ 50 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ: CMIE

   "ಭಾರತದಲ್ಲಿ ಜನವರಿಯಲ್ಲಿ ನಾವು 1 ಕೋವಿಡ್ ಪರೀಕ್ಷೆ ಲ್ಯಾಬ್ ಹೊಂದಿದ್ದೆವು. ಪ್ರಸ್ತುತ ದೇಶದಲ್ಲಿ 60,000 ಕೋವಿಡ್ ಪರೀಕ್ಷೆ ಲ್ಯಾಬ್‌ಗಳನ್ನು ಹೊಂದಿದ್ದೇವೆ" ಎಂದರು.

   "ಕೋವಿಡ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಕೈಗಾರಿಕೆಗಳು ಅದರಲ್ಲೂ ಸಣ್ಣ ಕೈಗಾರಿಕೆಗಳು ಇಂತಹ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳ ಉತ್ಪಾದನೆಗೆ ಕೈ ಜೋಡಿಸಿದವು. ಇದು ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಾಯಕವಾಯಿತು" ಎಂದು ಮೋದಿ ಬಣ್ಣಿಸಿದರು.

   ಮೋದಿ ಭಾಷಣದ ಮುಖ್ಯಾಂಶಗಳು

   * ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಭಾರತ ಸರ್ಕಾರದ ಗುರಿ ಬಡವರ ರಕ್ಷಣೆ ಆಗಿತ್ತು. ಉಚಿತ ಆಹಾರ ವಿತರಣೆ, ಉಚಿತವಾಗಿ ಗ್ಯಾಸ್ ಸೇರಿದಂತೆ ಹಲವಾರು ಕ್ರಮಗಳ ಮೂಲಕ ಅವರಿಗೆ ಸಂಕಷ್ಟದ ಸಮಯದಲ್ಲಿ ನೆರವು ನೀಡಲಾಗಿದೆ.

   * ಕೋವಿಡ್ ಹಲವಾರು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಕನಸು, ಭರವಸೆಗಳ ಮೇಲೆ ಪ್ರಭಾವ ಬೀರಿಲ್ಲ. ಕಠಿಣ ಪರಿಸ್ಥಿತಿಯಲ್ಲಿ ಜನರು ತಮ್ಮ ವಿಶ್ವಾಸವನ್ನು ವೃದ್ಧಿಸಿಕೊಂಡಿದ್ದಾರೆ.

   * ಕೊರೊನಾ ಪರಿಸ್ಥಿತಿ ಜನರಲ್ಲಿನ ನಂಬಿಕೆಯನ್ನು ಹೆಚ್ಚಿಸಿದೆ. ಅದು ದೇಶ-ದೇಶಗಳ ನಡುವಿನ ನಂಬಿಕೆಯನ್ನು ಹೆಚ್ಚಿಸಿದೆ. ವ್ಯಾಪಾರ ಸಂಬಂಧವನ್ನು ಗಟ್ಟಿಗೊಳಿಸಿದೆ.

   * ಭಾರತದಲ್ಲಿ ಹೂಡಿಕೆ ಮಾಡಲು ಕಂಪನಿಗಳು ಆಸಕ್ತಿ ತೋರಿಸುತ್ತಿವೆ. ಶೇ 65ರಷ್ಟು ಯುವಜನರೇ ಇರುವ ದೇಶವಿದು. ಅಮೆರಿಕ ಸೇರಿದಂತೆ ಬೇರೆ ದೇಶಗಳಿಂಗಿಂತ ನಮ್ಮಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೆಚ್ಚುತ್ತಿದೆ. ಈ ವರ್ಷ 20 ಬಿಲಿಯನ್ ಡಾಲರ್ ಹೂಡಿಕೆ ದೇಶಕ್ಕೆ ಬಂದಿದೆ.

   * 'ಆತ್ಮ ನಿರ್ಭರ ಭಾರತ' ಕರೆಗೆ ದೇಶದ ಜನರು ಬೆಂಬಲ ನೀಡಿದ್ದಾರೆ. ಲೋಕಲ್ ವಿತ್ ಗ್ಲೋಬಲ್ ಮಾತಿಗೆ ಮನ್ನಣೆ ಸಿಕ್ಕಿದೆ. ಸ್ಥಳೀಯ ಬೇಡಿಕೆಗಳ ಜೊತೆಗೆ ನಾವು ವಿಶ್ವಮಟ್ಟಕ್ಕೆ ಔಷಧಿಗಳನ್ನು ನೀಡಿದ್ದೇವೆ.

   * ಕೊರೊನಾ ವೈರಸ್ ಸೋಂಕಿನ ಔಷಧಿಗಳ ಸಂಶೋಧನೆಯಲ್ಲಿಯೂ ಭಾರತ ಮುಂಚೂಣಿಯಲ್ಲಿದೆ.

   * ದೇಶದ ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಭಾರಿ ಬದಲಾಣೆಯಾಗಿದೆ. ರಕ್ಷಣೆ, ರೈಲ್ವೆ, ಗಣಿ ಮುಂತಾದ ಕ್ಷೇತ್ರಗಳಲ್ಲಿ ಅಪಾರವಾದ ಅವಕಾಶಗಳು ಸೃಷ್ಟಿಯಾಗಿವೆ.

   English summary
   Prime Minister of India Narendra Modi addressed third leadership summit of US India Strategic and Partnership Forum (USISPF) on September 3. Here are the highlights.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X