ಗ್ರಾಮ ಜ್ಯೋತಿ ಯೋಜನೆಗೆ ಚಾಲನೆ ನೀಡಿದ ಮೋದಿ

ಪಾಟ್ನಾ, ಜುಲೈ, 25 : ದೇಶದ ಪೂರ್ವಭಾಗದಲ್ಲಿ ಹಸಿರು ಕ್ರಾಂತಿ ಮತ್ತು ಹಾಗೂ ವಿಷನ್ 2050 ಗುರಿಯಾಗಿರಿಸಿಕೊಂಡಿರುವ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಪ್ರತಿನಿತ್ಯ ಉತ್ತಮ ಗುಣ ಮಟ್ಟದ ವಿದ್ಯುತ್ ಒದಗಿಸುವ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (DDUGJY) ಸೇರಿದಂತೆ ಹಲವಾರು ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಟ್ನಾದಲ್ಲಿ ಶನಿವಾರ ಚಾಲನೆ ನೀಡಿದ್ದಾರೆ.

ಈ ಯೋಜನೆಯು ಯುಪಿಎ ಸರ್ಕಾರದ ಹಳೇ ಯೋಜನೆ ರಾಜೀವ್ ಗಾಂಧಿ ಗ್ರಾಮೀಣ್ ವಿದ್ಯುದೀಕರಣ ಯೋಜನೆಯನ್ನು DDUGJY ಯಲ್ಲಿ ಅಂತರ್ಗತಗೊಳಿಸಿದ್ದು, ಇದರಿಂದ ಕೃಷಿ ವಲಯಕ್ಕೆ ಅಗತ್ಯ ಸಂದರ್ಭದಲ್ಲಿ ಉತ್ತಮ ಗುಣ ಮಟ್ಟದ ವಿದ್ಯುತ್ ಲಭ್ಯವಾಗಲಿದೆ. ಈ ಯೋಜನೆಗೆ 76,000 ಕೋಟಿ ವೆಚ್ಚ ತಗುಲಲಿದೆ. ಜೊತೆಗೆ 10,000 ವೆಚ್ಚದ ಜಗದೀಶ್ ಪುರ ಹಾಗೂ ಹಾಲ್ದಿಯಾ ಪೈಪ್ ಲೈನ್ ಯೋಜನೆ, ಹೊಸ ರೈಲು ಮಾರ್ಗಗಳ ಯೋಜನೆಗೂ ಚಾಲನೆ ದೊರೆತಿದೆ.

Narendara Modi inaugurated many projects in bihar

ಈ ಯೋಜನೆ ಜಾರಿಯಾದ ಬಳಿಕ ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆ ಪರಿಹಾರದ ಜೊತೆಗೆ ವಿತರಣಾ ಜಾಲ ವ್ಯವಸ್ಥೆ ಕೂಡ ಬಲವರ್ಧನೆಯಾಗಲಿದೆ. ಗ್ರಾಮೀಣ ಭಾಗದ ಮನೆ ಹಾಗೂ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಫೀಡರ್ ವ್ಯವಸ್ಥೆ, ಸಬ್ ಟ್ರಾನ್ಸ್ ಮಿಷನ್ ಹಾಗೂ ವಿದ್ಯುತ್ ವಲಯದ ಸೌಕರ್ಯಕ್ಕೂ ಹೆಚ್ಚಿನ ಆದ್ಯತೆ ದೊರಕಲಿದೆ.

ಯೋಜನೆ ವಿಶೇಷತೆಗಳು:
ಎಲ್ಲಾ ಗ್ರಾಮಗಳಿಗೂ 24/7 ವಿದ್ಯುತ್ ಸೌಲಭ್ಯ ದೊರಕಲಿದೆ
ಕೃಷಿ ಮತ್ತು ಕೃಷಿಯೇತರ ಬಳಕೆಗೆ ಪ್ರತ್ಯೇಕ ಫೀಡರ್ ವ್ಯವಸ್ಥೆ ಕಲ್ಪಿಸಲಾಗುವುದು
ಸಬ್ ಟ್ರಾನ್ಸ್ ಮಿಷನ್ ಘಟಕಗಳ ಉನ್ನತೀಕರಣ ಮಾಡಲಾಗುವುದು
ವಿತರನಾ ಜಾಲ ಬಲವರ್ಧನೆಗೊಳಿಸಲಾಗುತ್ತದೆ

ಯೋಜನೆ ಲಾಭಗಳು:
ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸೌಕರ್ಯ ಒದಗಿಸಲಾಗುತ್ತದೆ.
ಕೃಷಿ ಉತ್ಪಾದನೆಯಲ್ಲಿ ಏರಿಕೆಯಾಗಲಿದೆ
ಗ್ರಾಮೀಣ ಭಾಗಗಳಲ್ಲಿ ಗೃಹೋದ್ಯಮಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಆರೋಗ್ಯ, ಶಿಕ್ಷಣ ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಚೇತರಿಕೆ ಕಾಣಲಿದೆ
ಸಂವಹನ ಮಾಧ್ಯಮ ಕ್ಷೆತ್ರದಲ್ಲಿಯೂ ಅಭಿವೃದ್ಧಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+