ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರಕ್ಕೆ ನಾರಾಯಣ ಮೂರ್ತಿ ಬಹುಪರಾಕ್

|
Google Oneindia Kannada News

ನವದೆಹಲಿ, ಮೇ 21: ಇನ್ಫೋಸಿಸ್ ದಿಗ್ಗಜ ನಾರಾಯಣ ಮೂರ್ತಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ಉತ್ತಮ ಕೆಲಸಗಳಾಗಿವೆ ಎಂದು ಹೇಳಿದ್ದಾರೆ.

ನಮಗೆ ಒಬ್ಬ ಉತ್ಸಾಹಿ ಮತ್ತು ಪರಿಶ್ರಮದ ಪ್ರಧಾನಿ ಸಿಕ್ಕಿದ್ದಾರೆ. ವಿರೋಧ ಪಕ್ಷಗಳು ಸೇರಿದಂತೆ ಎಲ್ಲರೂ ಅವರ ಮಾರ್ಗವನ್ನು ಅನುಸರಿಸಬೇಕಿದೆ. ಸಾಧನೆಗಳ ಪರಾಮರ್ಶೆಗೆ ಇದು ಸಕಾಲವಲ್ಲ. ಪರಿಣಾಮಗಳು ಮುಂದಿನ ದಿನದಲ್ಲಿ ಗೋಚರವಾಗಲಿದೆ ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.[ಚುನಾವಣೆ ಗೆದ್ದ ರಿಷಿ, ಮಾವ ಇನ್ಫಿ ಮೂರ್ತಿ ಖುಷ್!]

narayana murthy

ತೆರಿಗೆ ಪಾವತಿ ವಿಧಾನ ಪಾರದರ್ಶಕವಾಗಿರಬೇಕು. ಇದು ಎಲ್ಲರಿಗೂ ಉತ್ತಮ ಆಡಳಿತ ವ್ಯವಸ್ಥೆ ಕಲ್ಪಿಸಿಕೊಡಲು ನೆರವಾಗುತ್ತದೆ. ತೆರಿಗೆ ನೀತಿ ಸಹ ಸರಳವಾಗಿರಬೇಕು. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಸರಿಯಾದ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ.[ಇನ್ಫಿ ಮೂರ್ತಿ ಮೋದಿ ಸಮರ್ಥನೆಗೆ ಸೇನ್ ವಿರೋಧ]

ಹೊಸ ಕಂಪನಿಗಳು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡುತ್ತವೆ. ಮಾರುಕಟ್ಟೆಯ ವ್ಯವಹಾರದ ದಿಕ್ಕನ್ನು ಕೆಲ ಸಮಯ ಬದಲಿಸಬಹುದು. ವಿಮಾನ ನಿಲ್ದಾಣ ಮತ್ತು ಬಂದರು ಎರಡೂ ಖಾಸಗಿಯವರಿಂದಲೇ ನಿರ್ವಹಣೆ ಮಾಡುವಂಥಾದರೆ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಹೇಳಿದ್ದಾರೆ.[ಮೋದಿ ಭಾರತವನ್ನು ನಿಜಕ್ಕೂ ತೆಗಳಿದ್ದರೆ?]

ಮೋದಿ ಸರ್ಕಾರಕ್ಕೆ ಮೇ 26 ಕ್ಕೆ ಒಂದು ವರ್ಷ ತುಂಬುತ್ತಿದ್ದು ಈ ಸಂದರ್ಭದಲ್ಲಿ ನಾರಾಯಣ ಮೂರ್ತಿ ಪ್ರಶಂಸೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದೆ.

English summary
Praising the Narendra Modi government, IT czar N R Narayana Murthy said, a lot of good things have happened in the last one year and the Prime Minister should be supported in his endeavours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X