ವಾರ್ಧಾ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಪಾಕಿಸ್ತಾನ!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 12: ಚೆನ್ನೈನಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡು, ತಮಿಳುನಾಡು, ಆಂಧ್ರ ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಚಂಡಮಾರುತ 'ವಾರ್ಧಾ' ಕ್ಕೆ ಹೆಸರು ನೀಡಿದ್ದು ಭಾರತದ ನೆರೆ ರಾಷ್ಟ್ರ ಪಾಕಿಸ್ತಾನ. ಅರೇಬಿಕ್/ಉರ್ದು ಪದ ವರ್ದಾ(Vardah) ಎಂದರೆ ಕೆಂಪು ಗುಲಾಬಿ.

ಬಂಗಾಲಕೊಲ್ಲಿಯಲ್ಲಿ ಕಾಣಿಸಿಕೊಂಡು ತಮಿಳುನಾಡಿನ ಉತ್ತರ ಭಾಗ ಹಾಗೂ ಆಂಧ್ರಪ್ರದೇಶದ ದಕ್ಷಿಣ ಭಾಗದ ತೀರದಲ್ಲಿ ವಾರ್ದಾ ಆರ್ಭಟಿಸಿದೆ.[ವರ್ಧಾ ಅಬ್ಬರ: ಉರುಳಿದ 4000 ಮರಗಳು, 500 ಲೈಟ್ ಕಂಬಗಳು]

ಹಿಂದೂ ಮಹಾ ಸಾಗರವನ್ನು ಹಂಚಿಕೊಂಡಿರುವ ರಾಷ್ಟ್ರಗಳು ಒಂದೊಂದಾಗಿ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಗಿಟ್ಟಿಸುತ್ತಾರೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ,ಪಾಕಿಸ್ತಾನ, ಥೈಲ್ಯಾಂಡ್, ಮ್ಯಾನ್ಮಾರ್, ಮಾಲ್ಡೀವ್ಸ್ ಹಾಗೂ ಒಮಾನ್ ಸರತಿಯಂತೆ ಹೆಸರು ನೀಡಬಹುದು. ಇತ್ತೀಚೆಗೆ ಭಾರತದಲ್ಲಿ ಕಾಣಿಸಿಕೊಂಡ ನಾಡಾ ಚಂಡಮಾರುತಕ್ಕೆ ಒಮಾನ್ ದೇಶ ಹೆಸರು ನೀಡಿತ್ತು.[ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ]

ಚಂಡಮಾರುತಗಳಿಗೆ ಹೆಸರಿಡಲು ಒಂದೇ ಬಗೆಯ ವಿಧಾನ ಅನುಸರಿಸುವುದಿಲ್ಲ. ವಿವಿಧ ರೀತಿ ವ್ಯವಸ್ಥೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಕ್ಯಾಥೊಲಿಕ್ ಸಂತರ ಹೆಸರುಗಳನ್ನು ಬಳಸಲಾಗುತ್ತದೆ.

ಹೆಸರಿಡುವುದು ಅಷ್ಟು ಸುಲಭದ ಮಾತಲ್ಲ

ಹೆಸರಿಡುವುದು ಅಷ್ಟು ಸುಲಭದ ಮಾತಲ್ಲ

ಹೆಸರಿಡುವುದು ಅಷ್ಟು ಸುಲಭದ ಮಾತಲ್ಲ ಕೆಲವೊಮ್ಮೆ ಹೆಸರಿಡುವ ಗೊಂದಲದಲ್ಲಿ ಚಂಡಮಾರುತಗಳಿಗೂ 'ಐಡೆಂಟಿಟಿ' ಬಿಕ್ಕಟ್ಟು ತಲೆ ದೋರುತ್ತದೆ. ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ ಕಷ್ಟ ಎನ್ನುತ್ತಾರೆ ತಜ್ಞರು.

ವಿಶ್ವ ಹವಾಮಾನ ಸಂಸ್ಥೆ (WMO)

ವಿಶ್ವ ಹವಾಮಾನ ಸಂಸ್ಥೆ (WMO)

ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು. WMO ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಬದಲಾಯಿಸುತ್ತಾ ಹೋಗಲು ನಿರ್ಧರಿಸಿತು. ಇದು ಕೂಡಾ ಚಂಡಮಾರುತ ಹೊಡೆತಕ್ಕೆ ಸಿಲುಕಿದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು WMO ಸೂಚಿಸುತ್ತಾ ಬಂದಿದೆ.

ಒಂದೇ ಹೆಸರು ಮತ್ತೆ ಬಳಸಬಹುದೇ?

ಒಂದೇ ಹೆಸರು ಮತ್ತೆ ಬಳಸಬಹುದೇ?

ಒಂದೇ ಹೆಸರು ಮತ್ತೆ ಬಳಸಬಹುದೇ? ಸ್ತ್ರೀನಾಮವಾಗಲಿ, ಪುರುಷನಾಮವಾಗಲಿ, ಹುಡ್ ಹುಡ್ ನಂತೆ ಪಕ್ಷಿ ಹೆಸರಾಗಲಿ ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ. ಭಾರತದಲ್ಲಿ ಸದ್ಯಕ್ಕೆ ಈ ವ್ಯವಸ್ಥೆ ಸಂಪೂರ್ಣ ಜಾರಿಯಾಗಿಲ್ಲ.

ಪುರುಷರ ಹೆಸರನ್ನು ಕೆಲವೊಮ್ಮೆ ಬಳಸಿದ್ದುಂಟು

ಪುರುಷರ ಹೆಸರನ್ನು ಕೆಲವೊಮ್ಮೆ ಬಳಸಿದ್ದುಂಟು

70ರ ದಶಕದ ಕೊನೆಗೆ ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು. ಸಾಮಾನ್ಯವಾಗಿ ಫ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು. ಚಂಡಮಾರುತದ ಹೊಡೆತಕ್ಕೆ ಸಿಕ್ಕ ರಾಷ್ಟ್ರಗಳ ಭಾಷೆ ಆಧಾರಿಸಿ ಹೆಸರುಗಳನ್ನು ಸೂಚಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಯುಎಸ್ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The name of the severe cyclonic storm 'Vardah', which at present lays over the Bay of Bengal, has been given by Pakistan.
Please Wait while comments are loading...