'ಹೃದಯ ಕಾಣೆಯಾಗಿದೆ, ಹುಡುಕಿಕೊಡಿ' ನಾಗ್ಪುರ ಪೊಲೀಸರಿಗೊಂದು ವಿಲಕ್ಷಣ ದೂರು!

ನಾಗ್ಪುರ, ಜನವರಿ 09: "ನನ್ನ ಹೃದಯ ಕಾಣೆಯಾಗಿದೆ. ದಯವಿಟ್ಟು ಹುಡುಕಿಕೊಡಿ" ಎಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಲು ಮುಂದಾದ ವಿಲಕ್ಷಣ ಘಟನೆಯೊಂದು ನಡೆದಿದೆ.

ಈ ವಿಲಕ್ಷಣ ದೂರನ್ನು ಕೇಳಿ ಪೊಲೀಸರೇ ಹೌಹಾರಿದರು! ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು, 'ಹುಡುಗಿಯೊಬ್ಬಳು ನನ್ನ ಹೃದಯವನ್ನು ಕದ್ದಿದ್ದಾಳೆ. ಅದನ್ನು ವಾಪಸ್ ಕೊಡಿಸಿ' ಎಂದು ದೂರು ನೀಡಲು ಮುಂದಾಗಿದ್ದಾನೆ.

"ನಾವು ಕದ್ದ ವಸ್ತುಗಳ ಬಗ್ಗೆ ಪದೇ ಪದೇ ದೂರು ಸ್ವೀಕರಿಸುತ್ತೇವೆ. ಆದರೆ ಕದ್ದ ಹೃದಯದ ದೂರು ಬಂದಿದ್ದು ಈಗಲೇ. ಆದರೆ ಇಂಥ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಕಾನೂನಿಲ್ಲವಾದ್ದರಿಂದ ಈ ಪ್ರಕರಣವನ್ನು ನಾವು ದಾಖಲಿಸಿಕೊಳ್ಳುವುದಿಲ್ಲ" ಎಂದು ಪೊಲೀಸರು ವ್ಯಕ್ತಿಗೆ ನಂತರ ತಿಳಿಸಿದ್ದಾರೆ.

Nagpur man approaches police to find his stolen heart

"ನಿಮ್ಮ ಸಮಸ್ಯೆಗೆ ನಮ್ಮ ಬಳಿ ಪರಿಹಾರವಿಲ್ಲ. ನಿಮ್ಮ ಈ ಸಮಸ್ಯೆ ನಮ್ಮ ಕರ್ತವ್ಯದ ವ್ಯಾಪ್ತಿಗೆ ಬರುವುದಿಲ್ಲ. ಕ್ಷಮಿಸಿ" ಎಂದು ಪೊಲೀಸರೇ ವ್ಯಕ್ತಿಯನ್ನು ವಾಪಸ್ ಕಳಿಸಿದ್ದಾರೆ.

"ನಾವು ಕದ್ದ ವಸ್ತುಗಳನ್ನು ಹಿಂದಿರುಗಿಸಬಲ್ಲೆವು. ಆದರೆ ಕೆಲವೊಮ್ಮೆ ನಾವು ಪರಿಹರಿಸಲು ಸಾಧ್ಯವಿಲ್ಲದ ದೂರುಗಳು ಬಂದಾಗ ಅಂಥ ಪ್ರಕರಣಗಳನ್ನು ನಾವು ದಾಖಲಿಸಿಕೊಳ್ಳುವುದಿಲ್ಲ" ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+