ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1

Posted By:
Subscribe to Oneindia Kannada

ನವದೆಹಲಿ, ಫೆ. 15: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಮೇಲೆ ದೇಶದ ನಗರಗಳು ಕ್ಲೀನ್ ಸಿಟಿ ಕಿರೀಟ ಧರಿಸುವ ಪೈಪೋಟಿಗೆ ಬಿದ್ದಿದ್ದು ಸುಳ್ಳಲ್ಲ. ಈ ಪೈಕಿ ಕರ್ನಾಟಕದ ಮೈಸೂರು ಸತತವಾಗಿ ಎರಡನೇ ಬಾರಿಗೆ ಭಾರತದ ಸ್ವಚ್ಛ ನಗರ ಎಂಬ ಪಟ್ಟ ಗಳಿಸಿದೆ. ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು ಅವರು 73 ನಗರಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದಾರೆ.

ಶೌಚಾಲಯ ನಿರ್ಮಾಣ, ಕಸ ವಿಲೇವಾರಿ, ಕುಡಿಯುವ ನೀರಿನ ಲಭ್ಯತೆ, ಅಂತರ್ಜಲದ ಲಭ್ಯತೆ ಮುಂತಾದ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ಮೂಲಕ ನಗರಗಳ ಮಧ್ಯೆ ಆರೋಗ್ಯಕರ ಪೈಪೋಟಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದರು. [ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]

Mysuru Palace

10 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ನಗರಗಳ ಪೈಕಿ ಟಾಪ್ 10 ಸ್ಥಾನ ಗಳಿಸಿದ ನಗರಗಳು ಇಲ್ಲಿವೆ:

* ಮೈಸೂರು (ಕರ್ನಾಟಕ) [2015: ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]
* ಚಂಡೀಗಢ (ಕೇಂದ್ರಾಡಳಿತ ಪ್ರದೇಶ)
* ನವದೆಹಲಿ
* ವಿಶಾಖಪಟ್ಟಣ್ಣಂ (ಆಂಧ್ರಪ್ರದೇಶ)
* ಸೂರತ್ (ಗುಜರಾತ್)
* ರಾಜ್ ಕೋಟ್ (ಗುಜರಾತ್)
* ಗ್ಯಾಂಗ್ ಕಟ್ (ಸಿಕ್ಕಿಂ)
* ಪಿಂಪ್ರಿ ಚಿಂದವಾಡ್ (ಮಹಾರಾಷ್ಟ್ರ)
* ಗ್ರೇಟರ್ ಮುಂಬೈ (ಮಹಾರಾಷ್ಟ್ರ)

Mysuru, Chandigarh cleanest cities in India in 2016

ಕಳೆದ ವರ್ಷ 1 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ನಗರಗಳ ಪೈಕಿ 476 ನಗರಗಳನ್ನು ಹಿಂದಿಕ್ಕಿ ಮೈಸೂರು ಅಗ್ರಸ್ಥಾನಕ್ಕೇರಿತ್ತು. ಮೈಸೂರು ನಗರ ನಂಬರ್ 1 ಸ್ಥಾನದಲ್ಲಿದ್ದರೆ 5ನೇ ಸ್ಥಾನದಲ್ಲಿ ಹಾಸನ, 6ನೇ ಸ್ಥಾನಲ್ಲಿ ಮಂಡ್ಯ ಮತ್ತು 7ನೇ ಸ್ಥಾನದಲ್ಲಿ ಉದ್ಯಾನನಗರಿ ಬೆಂಗಳೂರು ಸ್ಥಾನ ಪಡೆದಿತ್ತು. ಸ್ವಚ್ಛ ಸರ್ವೇಕ್ಷಣ 2016 ವರದಿಯಲ್ಲಿ ಸ್ವಚ್ಛ ನಗರಗಳ ಜೊತೆಗೆ ಅತ್ಯಂತ ಕೊಳಚೆ ನಗರಗಳನ್ನು ಹೆಸರಿಸಲಾಗಿದೆ. [ಸ್ವಚ್ಛ ಭಾರತದಿಂದ ಪ್ರಯಾಣ, ಹೋಟೆಲ್ ತಿಂಡಿ, ಮೊಬೈಲ್ ಬಿಲ್ ದುಬಾರಿ!]

73 ನಗರಗಳ ಪಟ್ಟಿಯಲ್ಲಿ ಕೊನೆ ಇಂದ 64ರ ತನಕ ಹೆಸರುಗಳು ಹೀಗಿವೆ:
* ಧನ್ ಬಾದ್ (ಜಾರ್ಖಂಡ್)
* ಅಸಾನ್ಸೊಲ್ (ಪಶ್ಚಿಮ ಬಂಗಾಲ)
* ಇಟಾ ನಗರ (ಅರುಣಾಚಲ ಪ್ರದೇಶ)
* ಪಾಟ್ನ (ಬಿಹಾರ)
* ಮೀರತ್ (ಉತ್ತರ ಪ್ರದೇಶ)
* ರಾಯ್ ಪುರ್ (ಛತ್ತೀಸ್ ಗಢ)
* ಘಾಜಿಯಾಬಾದ್ (ಉತ್ತರಪ್ರದೇಶ)
* ಜೇಮ್ಶೇಡ್ ಪುರ್ (ಜಾರ್ಖಂಡ್)
* ವಾರಣಾಸಿ (ಉತ್ತರಪ್ರದೇಶ)
* ಕಲ್ಯಾಣ್ ದೊಂಬಿವಿಲಿ (ಮಹಾರಾಷ್ಟ್ರ)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru in Karnataka, Chandigarh and Tiruchirapalli in Tamil Nadu are the top 3 cleanest cities of India. Last year, Mysuru, renowned as the City of Palaces, was ranked cleanest of India's 476 cities, each with a population of more than a lakh
Please Wait while comments are loading...