ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಏಕ್ ಭಾರತ್ ಶ್ರೇಷ್ಠ್ ಭಾರತ್' ಯೋಜನೆಗೆ ನಿಮ್ಮ ಸಲಹೆ ಕೊಡಿ

|
Google Oneindia Kannada News

ನವದೆಹಲಿ, ಡಿಸೆಂಬರ್ 23 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ 'ಏಕ್ ಭಾರತ್ ಶ್ರೇಷ್ಠ್ ಭಾರತ್' ಯೋಜನೆ ಬಗ್ಗೆ ಜನರು ತಮ್ಮ ಸಲಹೆಗಳನ್ನು ನೀಡಬಹುದಾಗಿದೆ. ದೇಶದ ಪ್ರತಿ ರಾಜ್ಯವೂ ತನಗೆ ಬೇಕೆನಿಸಿದ ಇನ್ನೊಂದು ರಾಜ್ಯದ ಜತೆ ಸಂಪರ್ಕ ಬೆಳೆಸಿ, ಪರಸ್ಪರ ಸಂಸ್ಕೃತಿ ವಿನಿಮಯ ಮಾಡಿಕೊಳ್ಳುವ ಯೋಜನೆ ಇದಾಗಿದೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 140ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ 'ರಾಷ್ಟ್ರೀಯ ಏಕತಾ ದಿನ' ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಉತ್ತಮ ಸಲಹೆಗಳನ್ನು ನೀಡಿದವರಿಗೆ ಪ್ರಧಾನಿ ಮೋದಿ ಅವರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಿದ್ದಾರೆ.

narendra modi

'ಏಕ್ ಭಾರತ್ ಶ್ರೇಷ್ಠ್ ಭಾರತ್' ಯೋಜನೆ ಮೂಲಕ ದೇಶದ ಪ್ರತಿ ರಾಜ್ಯವೂ ಪ್ರತಿವರ್ಷ ತನಗೆ ಬೇಕೆನಿಸಿದ ಇನ್ನೊಂದು ರಾಜ್ಯದ ಜತೆ ಸಂಪರ್ಕ ಬೆಳೆಸಿ ಪರಸ್ಪರ ಸಂಸ್ಕೃತಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ರಾಜ್ಯ-ರಾಜ್ಯಗಳ ನಡುವಿನ ಸಾಂಸ್ಕೃತಿಕ ಕಂದಕವನ್ನು ಮುಚ್ಚಲು ಇಂತಹ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

ಸಲಹೆ ನೀಡುವುದು ಹೇಗೆ? : ಈ ಯೋಜನೆಯ ಸ್ವರೂಪ, ಯೋಜನೆಯಲ್ಲಿ ಜನಸಾಮಾನ್ಯರ ಸಹಭಾಗಿತ್ವ ಹಾಗೂ ಸರ್ಕಾರದ ಪಾತ್ರ ಮುಂತಾದ ವಿಚಾರಗಳ ಕುರಿತು ಮೈ ಗೌರ್ನಮೆಂಟ್ ವೆಬ್ ಸೈಟ್ ನಲ್ಲಿ ಸಾರ್ವಜನಿಕರು ಸಲಹೆ ನೀಡಬಹುದಾಗಿದೆ. ಕೊನೆಯ ದಿನಾಂಕ ಡಿಸೆಂಬರ್ 25, 2015. [ವೆಬ್ ಸೈಟ್ ವಿಳಾಸ]

ಬಹುಮಾನದ ಮೊತ್ತ : 'ಏಕ್ ಭಾರತ್ ಶ್ರೇಷ್ಠ್ ಭಾರತ್' ಯೋಜನೆಗೆ ಉತ್ತಮ ಸಲಹೆಗಳನ್ನು ನೀಡುವವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಿದ್ದಾರೆ. ಮೊದಲ ಬಹುಮಾನ ಒಂದು ಲಕ್ಷ, ಎರಡನೇ ಬಹುಮಾನ 75 ಸಾವಿರ, ಮೂರನೇ ಬಹುಮಾನ 50 ಸಾವಿರ ರೂ.

ನಿಬಂಧನೆಗಳು : ಸಲಹೆಗಳನ್ನು ನೀಡುವವರು 18 ವರ್ಷ ಮೇಲ್ಪಟ್ಟಿರಬೇಕು, ಇದು ವೈಯಕ್ತಿಕ ಸ್ಪರ್ಧೆಯಾಗಿದ್ದು ಸಂಸ್ಥೆ, ಸಂಘಟನೆ ಹೆಸರಿನಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ, ಸಲಹೆಗಳನ್ನು ನೀಡುವವರು ಭಾರತದ ನಾಗರೀಕನಾಗಿರಬೇಕು, ಮೈ ಗೌರ್ನಮೆಂಟ್ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿರಬೇಕು. ಸಲಹೆಗಳು ಸಾವಿರ ಪದಗಳನ್ನು ಮೀರಬಾರದು.

ಯಾವ ರೀತಿಯ ಸಲಹೆ ನೀಡಬಹುದು? : ಈ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾತ್ರ, ಖಾಸಗಿ ಮತ್ತು ಸರ್ಕಾರಿ ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ, ಯೋಜನೆ ಜಾರಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಮುಂತಾದ ವಿಚಾರಗಳ ಬಗ್ಗೆ ಜನರು ಸಲಹೆ ನೀಡಬಹುದು.

English summary
Prime Minister Narendra Modi announced EK Bharat Shreshtha Bharat programme, aims to give a boost to the existing cultural connect between different parts of the country. MyGov launched 'EK Bharat Shreshtha Bharat' contest, it has announced that winners will get attractive cash prizes and a certificate by Narendra Modi. December 25, 2015 last date for submit your suggestions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X