ಪ್ರಜೆಗಳ ಪ್ರತಿನಿಧಿಯಾಗುವೆ: ರಜನಿಕಾಂತ್ ಘೋಷಣೆ
Recommended Video

ಚೆನ್ನೈ, ಡಿಸೆಂಬರ್ 31: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ.ಕಳೆದ ಮೇ ತಿಂಗಳಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ರಜನಿಕಾಂತ್ ಅವರು ನಂತರ ಈ ಬಗ್ಗೆ ಮೌನ ವಹಿಸಿದ್ದರು.
ಹುಟ್ಟುಹಬ್ಬದ ದಿನದಂದು ಏನಾದರೂ ಶುಭ ಸುದ್ದಿ ಘೋಷಿಸುವರೇ ಎಂದು ಅಭಿಮಾನಿಗಳು ಎಂದಿನಂತೆ ಕಾದಿದ್ದರು. ಆದರೆ, ಹುಟ್ಟುಹಬ್ಬ ಆಚರಣೆ ಹಾಗೂ ರಜನಿ ದೂರ ಉಳಿದಿದ್ದರು.
ಆದರೆ, ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳ ಜತೆಗಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರ(ಡಿಸೆಂಬರ್ 31)ದಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ.

ಸೂಪರ್ ಸ್ಟಾರ್ ರಜನಿ ಅವರ ಭಾಷಣದ ಮುಖ್ಯಾಂಶಗಳು:
* ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಹೊಸ ಪಕ್ಷವನ್ನು ಘೋಷಿಸಲಾಗುತ್ತದೆ.
* ನಾನು ಆಧಾತ್ಮ ನೆಲೆಯಿಂದ ಎಲ್ಲವನ್ನು ನೋಡುತ್ತೇನೆ ಹಾಗಾಗಿ ಹಣ ಮಾಡಲು ರಾಜಕೀಯ ಪ್ರವೇಶಿಸುತ್ತಿಲ್ಲ.
* ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ದೇವರ ಅಭಯ, ಅಭಿಮಾನಿಗಳ ಬೆಂಬಲ ಇದ್ದರೆ ಏನ್ನನ್ನೂ ಬೇಕಾದರೂ ಸಾಧಿಸಬಹುದು.
* ಈಗಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ.
* ತಮಿಳುನಾಡಿನ ಎಲ್ಲಾ ವಿಧಾನಸಭೆ ಕ್ಷೇತ್ರ(234)ಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ. 40 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಆದರೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
* ನಮ್ಮ ಪಕ್ಷದಲ್ಲಿ ಅಕ್ಷರಸ್ಥರು, ಅನಕ್ಷರಸ್ಥರು ಎಲ್ಲರೂ ಇರುತ್ತಾರೆ.
* ಸತ್ಯ, ಕೆಲಸ ಹಾಗೂ ಪ್ರಗತಿ ನಮ್ಮ ಪಕ್ಷದ ಮುಖ್ಯ ಮಂತ್ರವಾಗಲಿದೆ.
Democracy is in bad shape right now, all other states have been making fun of us(Tamil Nadu), I will feel guilty if I don't take this decision now: #Rajinikanth pic.twitter.com/E4d5Kc9hw7
— ANI (@ANI) December 31, 2017
* ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ನಮ್ಮ ಹಣವನ್ನು ದೋಚುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ.
* ನಮ್ಮ(ತಮಿಳುನಾಡು) ರಾಜ್ಯದ ಭ್ರಷ್ಟ ವ್ಯವಸ್ಥೆಯನ್ನು ನೋಡಿ ಬೇರೆ ರಾಜ್ಯದವರು ನಗುವಂತಾಗಿದೆ. ಇದನ್ನು ಬದಲಾಯಿಸುವ ಕಾಲ ಬಂದಿದೆ.












Click it and Unblock the Notifications