ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮೀಯನ್ನು ಪೂಜಿಸದ ಮುಸ್ಲಿಮರಲ್ಲಿ ಶ್ರೀಮಂತರಿಲ್ಲವೇ? ಬಿಜೆಪಿ ಶಾಸಕನ ಪ್ರಶ್ನೆ

|
Google Oneindia Kannada News

ಪಾಟ್ನಾ, ಅ.20: ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದಲೇ ನಮಗೆ ಸಂಪತ್ತು ಸಿಗುವಂತಿದ್ದರೆ ಮುಸ್ಲಿಮರಲ್ಲಿ ಲಕ್ಷಾಧೀಶರು, ಕೋಟ್ಯಧಿಪತಿಗಳು ಇರುತ್ತಿರಲಿಲ್ಲ ಎಂದು ಬಿಹಾರದ ಬಿಜೆಪಿ ಶಾಸಕ ಹೇಳಿದ್ದಾರೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.

ಭಾಗಲ್ಪುರ ಜಿಲ್ಲೆಯ ಪಿರ್ಪೈಂತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಹಿಂದೂ ದೇವತೆಗಳ ಮೇಲಿನ ನಂಬಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ತಮ್ಮ ನಿಲುವನ್ನು ಸಾಬೀತುಪಡಿಸಲು ಸಾಕ್ಷಿಗಳೊಂದಿಗೆ ವಾದಿಸಿದ್ದಾರೆ.

'ಜ್ಞಾನ, ಶಕ್ತಿ, ಹಣ ಬೇಕಾದರೆ ಸರಸ್ವತಿ, ದುರ್ಗೆ, ಲಕ್ಷ್ಮಿಯನ್ನು ಪಟಾಯಿಸಿ' ಬಿಜೆಪಿ ಮುಖಂಡನ ಹೇಳಿಕೆ ವಿರುದ್ಧ ಆಕ್ರೋಶ'ಜ್ಞಾನ, ಶಕ್ತಿ, ಹಣ ಬೇಕಾದರೆ ಸರಸ್ವತಿ, ದುರ್ಗೆ, ಲಕ್ಷ್ಮಿಯನ್ನು ಪಟಾಯಿಸಿ' ಬಿಜೆಪಿ ಮುಖಂಡನ ಹೇಳಿಕೆ ವಿರುದ್ಧ ಆಕ್ರೋಶ

ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೆ ಭಾಗಲ್ಪುರದ ಶೆರ್ಮರಿ ಬಜಾರ್‌ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರು ಶಾಸಕ ಲಲನ್ ಪಾಸ್ವಾನ್ ಅವರ ಪ್ರತಿಕೃತಿಯನ್ನು ಸುಟ್ಟು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ಲಲನ್ ಪಾಸ್ವಾನ್ ದೀಪಾವಳಿಯಂದು ನಡೆಸಲಾಗುವ ಲಕ್ಷ್ಮಿ ದೇವಿಯ ಆರಾಧನೆಯನ್ನು ಪ್ರಶ್ನಿಸಿದ್ದಾರೆ.

ಲಕ್ಷ್ಮೀಯನ್ನು ಪೂಜಿಸದ ಮುಸ್ಲಿಮರು ಶ್ರೀಮತಂರಲ್ಲವೇ?

ಲಕ್ಷ್ಮೀಯನ್ನು ಪೂಜಿಸದ ಮುಸ್ಲಿಮರು ಶ್ರೀಮತಂರಲ್ಲವೇ?

"ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದಲೇ ನಮಗೆ ಸಂಪತ್ತು ಸಿಗುತ್ತಿದ್ದರೆ ಮುಸ್ಲಿಮರಲ್ಲಿ ಲಕ್ಷಾಧೀಶರು, ಕೋಟ್ಯಧಿಪತಿಗಳು ಇರುತ್ತಿರಲಿಲ್ಲ, ಮುಸ್ಲಿಮರು ಲಕ್ಷ್ಮೀ ಯನ್ನು ಪೂಜಿಸುವುದಿಲ್ಲ, ಅವರು ಶ್ರೀಮಂತರಲ್ಲವೇ..? ಎಂದು ಪ್ರಶ್ನಿಸಿದ್ದಾರೆ.

"ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ, ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ..? ಅವರು IAS ಅಥವಾ IPS ಆಗುವುದಿಲ್ಲವೇ?" ಎಂದು ಶಾಸಕರು ಪ್ರಶ್ನಿಸಿದ್ದಾರೆ.

'ಆತ್ಮ ಮತ್ತು ಪರಮಾತ್ಮ' ಪರಿಕಲ್ಪನೆಯು ಕೇವಲ ಜನರ ನಂಬಿಕೆಯಾಗಿದೆ ಎಂದು ಬಿಜೆಪಿ ನಾಯಕ ವಾದಿಸಿದ್ದಾರೆ.

ನಂಬಿದರೆ ದೇವತೆ, ಇಲ್ಲದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹ!

ನಂಬಿದರೆ ದೇವತೆ, ಇಲ್ಲದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹ!

"ನೀವು ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹ, ನಾವು ದೇವರು ಮತ್ತು ದೇವತೆಗಳನ್ನು ನಂಬುತ್ತೇವೋ ಅಥವಾ ಇಲ್ಲವೋ ಅದು ನಮಗೆ ಬಿಟ್ಟದ್ದು. ನಾವು ಅಂತಹ ತಾರ್ಕಿಕ ತೀರ್ಮಾನ ತಲುಪಲು ವೈಜ್ಞಾನಿಕ ತಳಹದಿಯ ಮೇಲೆ ಯೋಚಿಸಬೇಕು" ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು, "ನೀವು ನಂಬುವುದನ್ನು ನಿಲ್ಲಿಸಿದರೆ, ನಿಮ್ಮ ಬೌದ್ಧಿಕ ಸಾಮರ್ಥ್ಯವು ಹೆಚ್ಚಾಗುತ್ತದೆ" ಎಂದು ಕರೆ ನೀಡಿದ್ದಾರೆ.

ಇಂತಹವುಗಳನ್ನು ನಂಬಲು ಬಿಟ್ಟ ದಿನ ಎಲ್ಲವೂ ಕೊನೆಯಾಗುತ್ತದೆ!

ಇಂತಹವುಗಳನ್ನು ನಂಬಲು ಬಿಟ್ಟ ದಿನ ಎಲ್ಲವೂ ಕೊನೆಯಾಗುತ್ತದೆ!

"ಭಜರಂಗಬಲಿ ಶಕ್ತಿಯುಳ್ಳ ದೇವರು. ನಮಗೆ ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಭಜರಂಗಬಲಿಯನ್ನು ಪೂಜಿಸುವುದಿಲ್ಲ. ಅವರು ಶಕ್ತಿಶಾಲಿಗಳಲ್ಲವೇ..?" ಎಂದು ಪ್ರಶ್ನೆ ಮಾಡಿದ್ದಾರೆ.

"ನೀವು ಇಂತಹ ನಂಬಿಕೆಗಳನ್ನು ನಂಬುವುದನ್ನು ನಿಲ್ಲಿಸಿದ ದಿನ, ಇವೆಲ್ಲವೂ ಕೊನೆಗೊಳ್ಳುತ್ತವೆ" ಎಂದು ಶಾಸಕ ಲಲನ್ ಪಾಸ್ವಾನ್ ಹೇಳಿದ್ದಾರೆ.

ಲಲನ್ ಪಾಸ್ವಾನ್ ಅವರು ರಾಷ್ಟ್ರೀಯ ಜನತಾ ದಳ (RJD) ನಾಯಕ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ನಡೆಸಿರುವ ಸಂಭಾಷಣೆ ಸೋರಿಕೆಯಾಗಿದೆ. ಆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿ, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಂತಹ ಹೇಳಿಕೆಗಳನ್ನು ನೀಡುವುದನ್ನು ಲಾಲನ್ ಪಾಸ್ವಾನ್ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಜಿತ್ ಶರ್ಮಾ ಹೇಳಿದ್ದಾರೆ. "ನಾವೆಲ್ಲರೂ ಭಗವಾನ್ ರಾಮ, ಬಜರಂಗ ಬಲಿ, ಲಕ್ಷ್ಮೀ ದೇವಿ, ಕಾಳಿ ಮಾತೆಯನ್ನು ನಂಬುತ್ತೇವೆ. ನಾವು ಹಿಂದೂಗಳು. ಬಿಜೆಪಿಯವರು ದೇವಾಲಯಗಳ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಾರೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾವು ದೇವರ ಬಲದ ಮೇಲೆ ಮಾತ್ರ ಮುಂದುವರಿಯುತ್ತೇವೆ. ಈ ದೀಪಾವಳಿಯಂದು ಎಲ್ಲರೂ ಲಕ್ಷ್ಮೀ ದೇವಿಯನ್ನು ತೀವ್ರವಾಗಿ ಪೂಜಿಸುತ್ತಾರೆ" ಎಂದಿದ್ದಾರೆ.

ಮತ್ತೊಂದೆಡೆ, 'ಲಲನ್ ಪಾಸ್ವಾನ್ ನಮ್ಮ ಆರಾಧ್ಯ ದೈವದ ಬಗ್ಗೆ ಇಂತಹ ಟೀಕೆಗಳನ್ನು ಮಾಡಬಾರದು. ಇದು ಸಂಪೂರ್ಣವಾಗಿ ತಪ್ಪು' ಎಂದು ಜೆಡಿಯು ಶಾಸಕ ಗೋಪಾಲ್ ಮಂಡಲ್ ಹೇಳಿದ್ದಾರೆ.

ನಾವೆಲ್ಲರೂ ರಾಮ, ಲಕ್ಷ್ಮೀ, ಕಾಳಿಯನ್ನು ನಂಬುತ್ತೇವೆ

ನಾವೆಲ್ಲರೂ ರಾಮ, ಲಕ್ಷ್ಮೀ, ಕಾಳಿಯನ್ನು ನಂಬುತ್ತೇವೆ

ಇಂತಹ ಹೇಳಿಕೆಗಳನ್ನು ನೀಡುವುದನ್ನು ಲಲನ್ ಪಾಸ್ವಾನ್ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಜಿತ್ ಶರ್ಮಾ ಹೇಳಿದ್ದಾರೆ. "ನಾವೆಲ್ಲರೂ ಭಗವಾನ್ ರಾಮ, ಭಜರಂಗ ಬಲಿ, ಲಕ್ಷ್ಮೀ ದೇವಿ, ಕಾಳಿ ಮಾತೆಯನ್ನು ನಂಬುತ್ತೇವೆ. ನಾವು ಹಿಂದೂಗಳು. ಬಿಜೆಪಿಯವರು ದೇವಾಲಯಗಳ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಾರೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾವು ದೇವರ ಬಲದ ಮೇಲೆ ಮಾತ್ರ ಮುಂದುವರಿಯುತ್ತೇವೆ. ಈ ದೀಪಾವಳಿಯಂದು ಎಲ್ಲರೂ ಲಕ್ಷ್ಮಿ ದೇವಿಯನ್ನು ತೀವ್ರವಾಗಿ ಪೂಜಿಸುತ್ತಾರೆ" ಎಂದಿದ್ದಾರೆ.

ಮತ್ತೊಂದೆಡೆ, 'ಲಲನ್ ಪಾಸ್ವಾನ್ ನಮ್ಮ ಆರಾಧ್ಯ ದೈವದ ಬಗ್ಗೆ ಇಂತಹ ಟೀಕೆಗಳನ್ನು ಮಾಡಬಾರದು. ಇದು ಸಂಪೂರ್ಣವಾಗಿ ತಪ್ಪು' ಎಂದು ಜೆಡಿಯು ಶಾಸಕ ಗೋಪಾಲ್ ಮಂಡಲ್ ಹೇಳಿದ್ದಾರೆ.

English summary
Muslims who don't worship Goddess Lakshmi aren't they rich? Bihar BJP MLA Lalan Paswan controversy. protest was held against him. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X