ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಸೆ ಇಲ್ಲದೆ ಗಡ್ಡ ಬಿಟ್ಟ ಮುಸ್ಲಿಮರು ಮೂಲಭೂತವಾದಿಗಳು: ರಿಜ್ವಿ

|
Google Oneindia Kannada News

ಲಖನೌ, ಜುಲೈ 8: ಮೀಸೆ ಬಿಡದೆ ಕೇವಲ ಗಡ್ಡ ಬೆಳೆಸಿಕೊಳ್ಳುವ ಮುಸ್ಲಿಮರೆಲ್ಲ ಮೂಲಭೂತವಾದಿಗಳು ಎಂದು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್ ರಿಜ್ವಿ ಹೇಳಿದ್ದಾರೆ.

ಗಡ್ಡ ಉಳಿಸಿಕೊಳ್ಳುವುದು ಸುನ್ನತ್. ಆದರೆ, ಮೀಸೆ ಇಲ್ಲದೆಯೇ ಗಡ್ಡ ಬಿಡುವುದು ಸುನ್ನತ್‌ಗೆ ವಿರುದ್ಧವಾದುದು. ಅಂತಹ ವ್ಯಕ್ತಿಗಳು ಭಯ ಹುಟ್ಟಿಸುವಂತೆ ಕಾಣಿಸುತ್ತಾರೆ. ಮೀಸೆ ಇಲ್ಲದೆ ಗಡ್ಡ ಮಾತ್ರ ಹೊಂದಿರುವ ಮುಸ್ಲಿಮರು ಮೂಲಭೂತವಾದಿಗಳು. ಅಂತಹ ವ್ಯಕ್ತಿಗಳು ಜಗತ್ತಿನಾದ್ಯಂತ ಭಯೋತ್ಪಾದನೆಯನ್ನು ಉತ್ತೇಜಿಸಲು ಸಾಧ್ಯ ಎಂದು ರಿಜ್ವಿ ಹೇಳಿಕೆ ನೀಡಿದ್ದಾರೆ.

'ಅತ್ಯಾಚಾರ ಘಟನೆಗಳನ್ನು ತಡೆಯಲು ಶ್ರೀರಾಮನಿಗೂ ಸಾಧ್ಯವಿಲ್ಲ''ಅತ್ಯಾಚಾರ ಘಟನೆಗಳನ್ನು ತಡೆಯಲು ಶ್ರೀರಾಮನಿಗೂ ಸಾಧ್ಯವಿಲ್ಲ'

ಇತರರ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸಿ ಫತ್ವಾ ಹೊರಡಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

muslims keep beard without moustache are fundamentalists: waseem rizvi

ಬೇರೆಯವರ ಬದುಕಿನಲ್ಲಿ ಹಸ್ತಕ್ಷೇಪ ನಡೆಸಿ ಫತ್ವಾ ಹೊರಡಿಸುವ ಕೆಲವು ಮುಸ್ಲಿಮರಿದ್ದಾರೆ. ಇಸ್ಲಾಂಗೂ ಇದಕ್ಕೂ ಸಂಬಂಧವಿಲ್ಲ ಎಂದು ಅವರು ಮರೆತಿದ್ದಾರೆ.

ಈ ರೀತಿ ಫತ್ವಾ ಹೊರಡಿಸುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಏಕೆಂದರೆ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿ ಮತ್ತು ತಮ್ಮದೇ ಕಾನೂನನ್ನು ರೂಪಿಸಲು ಯಾರಿಗೂ ಹಕ್ಕು ಇಲ್ಲ ಎಂದು ರಿಜ್ವಿ ಹೇಳಿದ್ದಾರೆ.

ಉತ್ತರ ಪ್ರದೇಶ: 26 ಬಾಲಕಿಯರನ್ನು ರಕ್ಷಿಸಿತು ಯುವಕನ ಒಂದು ಟ್ವೀಟ್!ಉತ್ತರ ಪ್ರದೇಶ: 26 ಬಾಲಕಿಯರನ್ನು ರಕ್ಷಿಸಿತು ಯುವಕನ ಒಂದು ಟ್ವೀಟ್!

ಜಮ್ಮು ಮತ್ತು ಕಾಶ್ಮೀರದಲ್ಲಿನ ಇಸ್ಲಾಮಿಕ್ ಸ್ಟೇಟ್ಸ್‌ನ ಭಯೋತ್ಪಾದನಾ ಚಟುವಟಿಕೆಗಳಿಂದ ಕೆಲವು ಮುಸ್ಲಿಮರು ಪ್ರಭಾವಿತರಾಗಿದ್ದಾರೆ. ಇದು ಒಳ್ಳೆಯದಲ್ಲ.

ಇದು ಭಾರತದಲ್ಲಿ ಹಿಂಸಾಚಾರಕ್ಕೆ ಎಡೆಮಾಡಿಕೊಡಬಹುದು. ಅಂತಹ ಮುಸ್ಲಿಮರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಿಜ್ವಿ ಅವರಿಗೆ ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ Y+ ಭದ್ರತೆ ಒದಗಿಸಿದೆ.

English summary
Uttar Pradesh Shia Waqf Board chairman Waseem Rizvi said that muslims who don't keep moustache with beard are fundamentalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X