ಡೆಹ್ರಾಡೂನ್ ನಲ್ಲೊಂದು ಮಾದರಿ ಮದುವೆ: ಕೋಮು ಸೌಹಾರ್ದದ ಪ್ರತೀಕ

Posted By:
Subscribe to Oneindia Kannada

ಡೆಹ್ರಾಡೂನ್, ಫೆಬ್ರವರಿ 12: ಹಿಂದು ಅನಾಥ ಗಂಡುಮಗುವೊಂದನ್ನು ದತ್ತು ಪಡೆದು, ಬೆಳೆಸಿದ್ದ ಮುಸ್ಲಿಂ ದಂಪತಿ, ಆತನನ್ನು ಆಅತನ ಇಷ್ಟದಂತೆಯೇ ಹಿಂದು ಸಂಪ್ರದಾಯಕ್ಕೆ ತಕ್ಕಂತೆ ಮದುವೆ ಮಡಿ ಮಾನವೀಯತೆ ಮೆರೆದ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ.

ರಾಕೇಶ್ ರಸ್ತೋಗಿ ಎಂಬ ಬಾಲಕನನ್ನು ಆತ 12 ವರ್ಷದವನಿದ್ದಾಗ ಮೊಯಿನುದ್ದಿನ್ ಎಂಬುವವರ ಕುಟುಂಬ ದತ್ತು ಪಡೆದಿತ್ತು. ಆದರೆ ಎಂದಿಗೂ ಆತನನ್ನು ಮತಾಂತರ ಮಾಡಲು ಪ್ರಯತ್ನಿಸಲಿಲ್ಲ.

"ನಾನು ಹೋಳಿ, ದೀಪಾವಳಿ ಮತ್ತಿತರ ಎಲ್ಲಾ ಹಿಂದು ಹಬ್ಬಗಳ್ನೂ ಇದೇ ಮನೆಯಲ್ಲಿ ಆಚರಿಸುತ್ತೇನೆ. ನನ್ನ ಕುಟುಂಬ ಯಾವಾಗಲೂ ನನ್ನ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಅವರು ನನ್ನನ್ನು ಪ್ರೀತಿಸುತ್ತಾರೆ. ಮದುವೆಯ ವಿಷಯದಲ್ಲೂ ನನ್ನಿಷ್ಟಕ್ಕೆ ಗೌರವ ನೀಡಿದ್ದಾರೆ" ಎಂದು ಸಂತಸದಿಂದ ಹೇಳುತ್ತಾರೆ ರಾಕೇಶ್.

Muslim Parents gets adopted Hindu orphan married in his customs

ಫೆಬ್ರವರಿ 9 ರಂದು ಸಪ್ತಪದಿ ತುಳಿಯುವ ಮೂಲಕ ಹೊಸ ಬಾಳಿನತ್ತ ಮುಖ ಮಾಡಿದ ಈ ದಂಪತಿ ಕೋಮು ಸೌಹಾರ್ದದ ಪ್ರತೀಕ ಎನ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Muslim family from Dehradun has set an example of humanity by neglecting the typical norms in the name of religion and caste, by raising a Hindu orphan boy and marrying him as per his religion's customs. The family of Mouinuddin adopted, Rakesh Rastogi at the age of 12 but never tried to tamper with his religion.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ