ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆ ಬಣಗಳ ಎರಡು ಬೃಹತ್ ದಸರಾ ರ್‍ಯಾಲಿಗೆ ಸಾಕ್ಷಿಯಾಗಲಿದೆ ಮುಂಬೈ

|
Google Oneindia Kannada News

ಮುಂಬೈ, ಅ.05: ಬುಧವಾರ ಮುಂಬೈನಲ್ಲಿ ನಡೆಯಲಿರುವ ದಸರಾ ರ್‍ಯಾಲಿಗಳಿಗೆ ಎರಡು ಪ್ರತಿಸ್ಪರ್ಧಿ ಶಿವಸೇನೆ ಬಣಗಳು ಭರ್ಜರಿ ತಯಾರಿ ನಡೆಸಿದ್ದು, ವಿವಿಧ ಜಿಲ್ಲೆಗಳಿಂದ ಭಾರಿ ಪ್ರಮಾಣದಲ್ಲಿ ಜನಸಾಗರ ಸೇರುವ ನಿರೀಕ್ಷೆಯಿದೆ.

ಎರಡು ಬಣಗಳ ಬೆಂಬಲಿಗರನ್ನು ಕರೆದೊಯ್ಯಲು 5,000 ಕ್ಕೂ ಹೆಚ್ಚು ಬಸ್‌ಗಳು, ಹಲವಾರು ಸಣ್ಣ ಪ್ರವಾಸಿ ವಾಹನಗಳು, ಕಾರುಗಳು ಮತ್ತು ವಿಶೇಷ ರೈಲನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವು ಬಾಂದ್ರಾ ಕುಲ್ರಾ ಕಾಂಪ್ಲೆಕ್ಸ್‌ನ (ಬಿಕೆಸಿ) ಎಂಎಂಆರ್‌ಡಿಎ ಮೈದಾನದಲ್ಲಿ ತನ್ನ ರ್‍ಯಾಲಿಯನ್ನು ನಡೆಸುತ್ತಿದ್ದರೆ, ಶಿವಸೇನಾ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಗುಂಪು ಮಧ್ಯ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದಸರಾ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ನೈಜ ಶಿವಸೇನೆ ಗುರುತಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಅನುಮತಿನೈಜ ಶಿವಸೇನೆ ಗುರುತಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಅನುಮತಿ

ಮಧ್ಯ ಮಹಾರಾಷ್ಟ್ರದ ನಾಂದೇಡ್ ನಗರದಿಂದ ದಸರಾ ರ್‍ಯಾಲಿಗಾಗಿ ರೈಲನ್ನು ಕಾಯ್ದಿರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಂಧೆ ಬಣದಿಂದ ಕಾಯ್ದಿರಿಸಲಾಗಿರುವ ರೈಲು ಮಂಗಳವಾರ ರಾತ್ರಿ ನಾಂದೇಡ್‌ನಿಂದ ಹೊರಟು ಬುಧವಾರ ಮಧ್ಯಾಹ್ನ ಮುಂಬೈ (ಲೋಕಮಾನ್ಯ ತಿಲಕ್ ಟರ್ಮಿನಸ್) ತಲುಪಲಿದೆ.

ಬಸ್, ಕಾರು, ರೈಲುಗಳಲ್ಲಿ ರ್‍ಯಾಲಿಗೆ ಬರಲಿದ್ದಾರೆ ಭಾರಿ ಜನಸ್ತೋಮ!

ಬಸ್, ಕಾರು, ರೈಲುಗಳಲ್ಲಿ ರ್‍ಯಾಲಿಗೆ ಬರಲಿದ್ದಾರೆ ಭಾರಿ ಜನಸ್ತೋಮ!

ಬಸ್ ನಿರ್ವಾಹಕರ ಪ್ರಕಾರ, ಏಕನಾಥ್ ಶಿಂಧೆ ನೇತೃತ್ವದ ಬಣವು ತನ್ನ ಬೆಂಬಲಿಗರನ್ನು ಕರೆದೊಯ್ಯಲು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಕನಿಷ್ಠ 3,000 ಖಾಸಗಿ ಬಸ್‌ಗಳನ್ನು ಬಾಡಿಗೆಗೆ ತೆಗೆದುಕೊಂಡಿದೆ. ಅಲ್ಲದೆ, ಸುಮಾರು 4,000 ಟೂರಿಸ್ಟ್ ಕ್ಯಾಬ್‌ಗಳು ಶಿಂಧೆ ಬೆಂಬಲಿಗರನ್ನು ಎಂಎಂಆರ್‌ಡಿಎ ಮೈದಾನಕ್ಕೆ ಕರೆತರಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಸ್ಪರ್ಧಿ ಉದ್ಧವ್ ಠಾಕ್ರೆ ಬಣವು ರ್‍ಯಾಲಿಯಲ್ಲಿ ಭಾಗವಹಿಸುವವರನ್ನು ಶಿವಾಜಿ ಪಾರ್ಕ್‌ಗೆ ಕರೆತರಲು 700 ಬಸ್‌ಗಳನ್ನು ಕಾಯ್ದಿರಿಸಿದೆ.

ಠಾಕ್ರೆ ಗುಂಪು ಬುಕ್ ಮಾಡಿದ ಬಸ್‌ಗಳು ಮುಖ್ಯವಾಗಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಿಂದ (ಎಂಎಂಆರ್) ಸೇನಾ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಕರೆತರುತ್ತವೆ ಎಂದು ಬಸ್ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಬುಧವಾರ ಮುಂಜಾನೆ ಮುಂಬೈ ತಲುಪಲಿರುವ ಬೆಂಬಲಿಗರು

ಬುಧವಾರ ಮುಂಜಾನೆ ಮುಂಬೈ ತಲುಪಲಿರುವ ಬೆಂಬಲಿಗರು

ಮತ್ತೊಂದೆಡೆ ಮಹಾರಾಷ್ಟ್ರದ ನಾನಾ ಭಾಗಗಳಿಂದ ಶಿಂಧೆ ಬಣ ಬಾಡಿಗೆ ಪಡೆದಿರುವ ಬಸ್ ಹಾಗೂ ಇತರೆ ವಾಹನಗಳು ಆಗಮಿಸಲಿವೆ. ಪೂರ್ವ ಮಹಾರಾಷ್ಟ್ರದ ವಿದರ್ಭ ಪ್ರದೇಶದಿಂದ ಸುಮಾರು 700 ಬಸ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಇನ್ನೊಬ್ಬ ಬಸ್ ನಿರ್ವಾಹಕರು ತಿಳಿಸಿದ್ದಾರೆ.

ಇವುಗಳಲ್ಲಿ ಹೆಚ್ಚಿನ ಬಸ್‌ಗಳು ಈಗಾಗಲೇ ಪ್ರದೇಶದ ವಿವಿಧ ಜಿಲ್ಲೆಗಳಿಂದ ಹೊರಟಿವೆ ಮತ್ತು ಮಂಗಳವಾರ ಮಧ್ಯರಾತ್ರಿ ಅಥವಾ ಬುಧವಾರ ಮುಂಜಾನೆ ಮುಂಬೈ ತಲುಪುವ ನಿರೀಕ್ಷೆಯಿದೆ.

ವಾಹನಗಳ ಮೇಲೆ ರಾರಾಜಿಸಲಿವೆ ಏಕನಾಥ್ ಶಿಂದೆ ಪೋಸ್ಟರ್‌ಗಳು!

ವಾಹನಗಳ ಮೇಲೆ ರಾರಾಜಿಸಲಿವೆ ಏಕನಾಥ್ ಶಿಂದೆ ಪೋಸ್ಟರ್‌ಗಳು!

ಬಸ್‌ಗಳ ಹೊರತಾಗಿ, ಏಕನಾಥ್ ಶಿಂಧೆ ಶಿಬಿರದ ಸ್ಥಳೀಯ ನಾಯಕರು ಮುಂಬೈಗೆ ಬೆಂಬಲಿಗರನ್ನು ಕರೆದೊಯ್ಯಲು ಹಲವಾರು ಪ್ರವಾಸಿ ವಾಹನಗಳನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ನಿರ್ವಾಹಕರು ಹೇಳಿದರು.

ಬಂಡಾಯ ಶಿಬಿರದ ಅನೇಕ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳಕ್ಕೆ ಪ್ರಯಾಣಿಸಲು ತಮ್ಮ ವೈಯಕ್ತಿಕ ವಾಹನಗಳನ್ನು ಬಳಸುತ್ತಿದ್ದಾರೆ. ಕೇಸರಿ ಧ್ವಜಗಳನ್ನು ಕಟ್ಟುವುದರ ಜೊತೆಗೆ ವಾಹನಗಳ ಮೇಲೆ ಮುಖ್ಯಮಂತ್ರಿ ಶಿಂಧೆ ಅವರ ಪೋಸ್ಟರ್‌ಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಕನಿಷ್ಠ 1,700 ಸರ್ಕಾರಿ ಬಸ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಇದು ನಗದು ಕೊರತೆಯಿರುವ ನಿಗಮಕ್ಕೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ವಾಹನಗಳ ನಿಲುಗಡೆ ವ್ಯವಸ್ತೆಗೆ ಪೊಲಿಸರ ಸಕಲ ಸಿದ್ಧತೆ

ವಾಹನಗಳ ನಿಲುಗಡೆ ವ್ಯವಸ್ತೆಗೆ ಪೊಲಿಸರ ಸಕಲ ಸಿದ್ಧತೆ

ಮುಂಬೈ ಕಡೆಗೆ ಹೋಗುವ ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ರಾಜ್ಯ ಹೆದ್ದಾರಿಗಳಲ್ಲಿ ಕೆಲವು ಸ್ಥಳಗಳಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ.

ಮೆರವಣಿಗೆಗೆ ಬೆಂಬಲಿಗರನ್ನು ಕರೆತರುವ ಹಲವಾರು ಬಸ್‌ಗಳು ಮತ್ತು ಇತರ ವಾಹನಗಳ ನಿಲುಗಡೆಗೆ ಮುಂಬೈ ಸಂಚಾರ ಪೊಲೀಸರು ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಪಶ್ಚಿಮ ಮತ್ತು ಉತ್ತರ ಮುಂಬೈನಿಂದ ಬೆಂಬಲಿಗರನ್ನು ಹೊತ್ತೊಯ್ಯುವ ಬಸ್‌ಗಳು ಸೇನಾಪತಿ ಬಾಪತ್ ಮಾರ್ಗ ಮತ್ತು ಕಾಮ್‌ಗರ್ ಮೈದಾನದಲ್ಲಿ ನಿಲುಗಡೆ ಮಾಡಲಾಗುತ್ತದೆ. ನವಿ ಮುಂಬೈ ಮತ್ತು ಥಾಣೆಯಿಂದ ಬರುವ ಬಸ್‌ಗಳನ್ನು ಫೈವ್ ಗಾರ್ಡನ್ಸ್, ನತಲಾಲ್ ಪರೇಖ್ ಮಾರ್ಗ, ಎಡನ್‌ವಾಲಾ ರಸ್ತೆಯಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇಂಡಿಯಾ ಬುಲ್ಸ್ ಫೈನಾನ್ಸ್, ಇಂಡಿಯಾ ಬುಲ್ಸ್ ಒನ್ ಸೆಂಟರ್ ಮತ್ತು ಕೊಹಿನೂರ್ ಸ್ಕ್ವೇರ್‌ನಲ್ಲಿ ಕಾರುಗಳನ್ನು ನಿಲುಗಡೆ ಮಾಡಲಾಗುತ್ತದೆ.

English summary
Maharashtra; Wednesday Mumbai witnessing Chief Minister Eknath Shinde and Shiv Sena president Uddhav Thackeray's two Dasara rallies. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X