SEPAL Shield: ಮಳೆಗಾಲದಲ್ಲೂ ಬೈಕ್ ರೈಡ್‌ಗೆ ಭಯವಿಲ್ಲ! ಬೈಕ್ ಸವಾರರ ರಕ್ಷಣೆಗೆ ಬಂತು 'ರೈನ್ ಶಿಲ್ಡ್', ಇನ್‌ಸ್ಟಾಲ್ ಸುಲಭ
ಭಾರತದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಸಾಕಷ್ಟು ಸಮಸ್ಯೆಗಳು ಉಲ್ಬಣಿಸುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಪ್ರತಿ ಬಾರಿಯು ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುವ ಬೈಕ್ ಸವಾರರನ್ನು ಮರೆತಿದ್ದೇವೆ. ಆದರೆ ಮುಂಬೈ ಕಶ್ಯಪ್ ಮತ್ತು ವಿಧೇಯ್ ಸಹೋದರರು ದ್ವಿಚಕ್ರ ವಾಹನ ಸವಾರರ ಮಳೆಗಾಲದ ಸಮಸ್ಯೆ ಗಮನಿಸಿ ಪರಿಹಾರ ವ್ಯವಸ್ಥೆ ಕಂಡು ಕೊಂಡಿದಿದ್ದಾರೆ. ಮಳೆ ನಡುವೆಯು ಹೆದರದೇ ತುಂಬ ಸುಳಭವಾಗಿ ಈ ವ್ಯವಸ್ಥೆಯನ್ನು ಬೈಕ್, ಸ್ಕೂಟರ್‍ಗೆ ಅಳವಡಿಸಿಕೊಂಡು ಸಂಚಾರ ಮಾಡಬಹುದಾಗಿದೆ.
ಹೌದು, ಜೀವನದ ಬಂಡಿ ನಿರ್ವಹಣೆಗೆ ದಿಚಕ್ರ ವಾಹನಗಳು ಕೋಟ್ಯಾಂತರ ಮಂದಿಗೆ ಅನುಕೂಲ ನೀಡುತ್ತಿವೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಡೆಲಿವರಿ ಬಾಯ್‌ಗಳು, ಬೇರೆ ಬೇರೆ ಭಾಗಗಳಿಗೆ ತೆರಳುವ ಬೈಕ್ ಸವಾರರು ಮುಂಗಾರು ಮಳೆಗಾಲದಲ್ಲಿ ಸಂಚಾರಕ್ಕೆ ಕಷ್ಟ ಪಡಬೇಕಿತ್ತು. ರೈನ್ ಕೋಟ್, ಜಾಕೇಟ್ ಏನೇ ಹಾಕಿದರೂ ಮಳೆ ಅವರ ದೈನಂದಿನ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿತ್ತು. ಇಂತಹ ಎಲ್ಲ ಸಮಸ್ಯೆಗಳಿಗೆ ಈ ಸಹೋದರರ 'ವಿಂಡ್ ಶಿಲ್ಡ್ ಮತ್ತು ಡಿಟ್ಯಾಚೇಬಲ್ ಕ್ಯಾನೋಪಿ' (SEPAL ಶಿಲ್ಡ್) ಸಾಧನ ಕಂಡು ಹಿಡಿದಿದ್ದಾರೆ.

120 ಕಿಮೀ ಸ್ಪೀಡ್ ಹೋದ್ರು ನಡೆಯುತ್ತೆ!
ಐಐಟಿ ಮುಂಬೈನ ವಿಧೇಯ್ ಮತ್ತು ವಾಸ್ತುಶಿಲ್ಪಿ ಕಶ್ಯಪ್ ಸಹೋದರರು ಎಲ್ಲ ವಿಧದ ಸ್ಕೂಟರ್‍ಗಳಿಗೆ ಜೋಡಿಸಬಹುದಾದ, ಮಳೆಯಲ್ಲೂ ಬೈಕ್ ಮೇಲೆ ಸಂಚರಿಸಲು ಯೋಗ್ಯವಾದ ಪರಿಹಾರ ಸಾಧನ ಕಂಡು ಹಿಡಿದಿದ್ದಾರೆ. ಇದನ್ನು ನೀವು 'ವಿಂಡ್ ಶಿಲ್ಡ್ ಮತ್ತು ಡಿಟ್ಯಾಚೇಬಲ್ ಕ್ಯಾನೋಪಿ' ಅನ್ನು ಐದು ನಿಮಿಷದಲ್ಲಿ ಬೈಕ್‌ಗಳಿಗೆ ಅಳವಡಿಸಬಹುದು. ಪ್ರತಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಿದರೂ ಇದಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗಿದೆ.
ಬೈಕ್ ಹ್ಯಾಂಡಲ್ ಬಾರಿಗೆ ಎರಡು ನಟ್ ಬೋಲ್ಟ್ ಫಿಕ್ಸ್ ಮಾಡಿ, ಮುಂದಿನ ಶಿಲ್ಡ್ ಅನ್ನು ಅಡ್ಜೆಸ್ಟ್ ಮಾಡಿಕೊಂಡರೆ ಐದು ನಿಮಿಷದಲ್ಲಿ ಮಳೆಗಾಲದ ರೈಡಿಂಗ್‌ಗೆ ನೀವು ತಯಾರಾಗಬಹುದು. ನೋಡಲು ಆಕರ್ಷಕವಾಗಿಯು ಕಾಣಿಸುತ್ತದೆ. ಮಳೆಯಿಂದ ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ಕಾರಿನ ರೀತಿಯಲ್ಲಿ ಮಳೆ ತಾಕದಂತೆ ನೋಡಿಕೊಳ್ಳುತ್ತದೆ. ಇದರ ಅಳವಡಿಕೆಯಿಂದ ಮಳೆಗಾಲದಲ್ಲಿ ಯಾವುದೇ ಸಂಚಾರ ಕಷ್ಟವಲ್ಲ ಎಂಬುದನ್ನು ಈ ಬ್ರದರ್ಸ್ ಸಾಬೀತು ಮಾಡಿದ್ದಾರೆ. ಇವರ ಸಾಧನೆ, ಶಿಲ್ಡ್ ಬಳಕೆ, ರಕ್ಷಣೆ ಕುರಿತು ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ದಿ ಬೆಟರ್ ಇಂಡಿಯಾ' ಪೇಜಿನಲ್ಲಿ ಹಂಚಿಕೊಳ್ಳಲಾಗಿದೆ.
ಬ್ರದರ್ಸ್ ಆವಿಷ್ಕಾರ, 3 ವರ್ಷ ಶ್ರಮ
ಜೀವನೋಪಾಯಕ್ಕೆ ದಾರಿ ತೋರಿಸುವ ಬೈಕ್‌ಗಳ ಸಂಚಾರ ಮಳೆಗಾಲದಲ್ಲಿ ಕಷ್ಟಕರವಾಗಿದ್ದನ್ನು ಗಮನಿಸಿ ಈ ಕೈಶ್ಯಪ್ ಮತ್ತ ವಿಧೇಯ್ ಅವರು ಮೂರು ವರ್ಷಗಳ ಸತತ ಪ್ರಯತ್ನದಿಂದ 'ವಿಂಡ್ ಶಿಲ್ಡ್ ಮತ್ತು ಡಿಟ್ಯಾಚೇಬಲ್ ಕ್ಯಾನೋಪಿ' ಸೃಷ್ಟಿಯಾಗಿದೆ. ಆರಂಭದಲ್ಲಿ ಧೀರ್ಘ ಪ್ರಯಾಣ, ಕಡಿಮೆ ಮಳೆ, ಜೋರು ಮಳೆ, ಗಾಳಿ ಸಹಿತ ಮಳೆಗೆ ನೀರು ಸೋರುವಿಕೆ ಸಮಸ್ಯೆ, ನಿರೀಕ್ಷಿತ ಹಂತ ತಲುಪಿಲ್ಲ ಎಂದು ಅನ್ನಿಸಿ ಪದೇ ಪದೇ ಮರುವಿನ್ಯಾಸ ಮಾಡಿದ್ದಾರೆ. ತಮ್ಮದೇ ರೀತಿಯಲ್ಲಿ ಪ್ರಯೋಗ ಮಾಡಿದ್ದಾರೆ.
ಮಳೆ ನೀರು ತಾಕದೇ ಬಳಕೆಗೆ ಯೋಗ್ಯವಾಗಿದೆ ಎಂದು ಅನ್ನಿಸುವವರೆಗೂ ಮೇಲಿಂದ ಮೇಲೆ ವಿನ್ಯಾಸ ಬದಲಾವಣೆ ಮಾಡಿದೆ. ಇದೆಲ್ಲ ಮುಗಿದು ಅಂತಿಮ ಹಂತಕ್ಕೆ ಬರಲು ಮೂರು ವರ್ಷ ಹಿಡಿದಿದೆ.
ದೇಶಾದ್ಯಂತ 20,000 ಸವಾರರಿಗೆ ಸಹಾಯ
ಮುಂಬೈ ಬ್ರದರ್ಸ್ ಅವರ ಈ EPAL ಶಿಲ್ಡ್ ಅನ್ನು ದೇಶಾದ್ಯಂತ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ಅವರ ದೈನಂದಿನ ಜೀವನ ಸುಗಮವಾಗಿದೆ. ಇದು ಮಳೆಯಿಂದಾಗಿ ಸಂಚಾರ ವಿಳಂಬ, ಉತ್ಪಾದಕತೆ ಮೇಲೆ ಬೀಳುತ್ತಿದ್ದ ದುಷ್ಪರಿಣಾಮ ತಡೆಗೆ ಸಹಾಯ ಮಾಡಿದ್ದು, ಭಾರತದಲ್ಲಿ ಭವಿಷ್ಯದಲ್ಲಿ ಬೈಕ್ ಸವಾರರ ಇಷ್ಟದ ವ್ಯವಸ್ಥೆಯಾಗಲಿದೆ ಎಂದು ಬ್ರದರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications
