ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬ ರಾಜಕೀಯ ಮುಂದುವರಿಕೆ: ಮುಲಾಯಂ ಸೊಸೆಗೆ ಟಿಕೆಟ್

By Mahesh
|
Google Oneindia Kannada News

ಲಕ್ನೋ(ಉತ್ತರಪ್ರದೇಶ), ಮಾರ್ಚ್ 27: ಸಮಾಜವಾದಿ ಪಕ್ಷ ಕುಟುಂಬ ರಾಜಕೀಯ ಮುಂದುವರೆಸಿದೆ. ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಭಾನುವಾರದಂದು ತಮ್ಮ ಕಿರಿಯ ಸೊಸೆ ಅಪರ್ಣಾ ಯಾದವ್ ಅವರಿಗೆ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ.

ಲಕ್ನೋ ವಿಧಾನಸಭಾ ಕ್ಷೇತ್ರದಿಂದ ಅಪರ್ಣಾ ಯಾದವ್ ಅವರು ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಸಮಾಜವಾದಿ ಪಕ್ಷದ ಪ್ರಧಾನ ವಕ್ತಾರ ಹಾಗೂ ಲೋಕೋಪಯೋಗಿ ಸಚಿವ ಶಿವಪಾಲ್ ಸಿಂಗ್ ಯಾದವ್ ಅವರು ಹೇಳಿಕೆ ನೀಡಿದ್ದಾರೆ. [ಉತ್ತರಪ್ರದೇಶದಲ್ಲಿ ಚುನಾವಣೆ ನಡೆದರೆ, ದಯನೀಯ ಸ್ಥಿತಿಗೆ ಕಾಂಗ್ರೆಸ್?]

Mulayam's daughter-in-law Aparna gets ticket from Lucknow

ಅಪರ್ಣ ಅವರು ಹಿರಿಯ ಪತ್ರಕರ್ತ ಅರವಿಂದ್ ಸಿಂಗ್ ಬಿಶ್ತ್ ಅವರ ಪುತ್ರಿಯಾಗಿದ್ದು, ಸಾಮಾಜಿಕ ಕಾರ್ಯಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಮುಲಾಯಂ ಸಿಂಗ್ ಅವರ ಪುತ್ರ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರೆ, ಅವರ ಪತ್ನಿ ಡಿಂಪಲ್ ಅವರು ಕನೌಜ್ ಕ್ಷೇತ್ರದ ಸಂಸದೆಯಾಗಿದ್ದಾರೆ.[ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಪ್ರಿಯಾಂಕ?]

ಈಗ ಮುಲಾಯಂ ಅವರ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಬಿಶ್ತ್ ಯಾದವ್ ಅವರು ರಾಜಕೀಯ ರಂಗ ಪ್ರವೇಶಿಸುತ್ತಿದ್ದಾರೆ.
ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲಿ 1991ರಿಂದ ಬಿಜೆಪಿ ಗೆಲ್ಲುತ್ತಾ ಬಂದಿದೆ. ಸತೀಶ್ ಭಾಟಿಯಾ ಅವರು ಎರಡು ಬಾರಿ ಹಾಗೂ ನಂತರ ಮೂರು ವರ್ಷ ಸುರೇಶ್ ತಿವಾರಿ ಅವರು ಗೆದ್ದಿದ್ದಾರೆ.

ಸುಮಾರು 3 ಲಕ್ಷಕ್ಕೂ ಅಧಿಕ ಮತದಾರರಿದ್ದು, 60 ಸಾವಿರ ಬ್ರಾಹ್ಮಣರು, 50 ಸಾವಿರ ದಲಿತರು, 40 ಸಾವಿರ ವೈಶ್ಯ, 30ಸಾವಿರ ಹಿಂದುಳಿದ ವರ್ಗ ಹಾಗೂ 20 ಸಾವಿರ ಮುಸ್ಲಿಮ್ ಮತದಾರರನ್ನು ಹೊಂದಿದೆ.

(ಐಎಎನ್ಎಸ್)

English summary
The Samajwadi Party (SP) on Sunday, March 27 named Aparna Yadav, the younger daughter-in-law of party chief Mulayam Singh Yadav, as its candidate for the Lucknow Cantonment assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X