ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ

|
Google Oneindia Kannada News

ನವದೆಹಲಿ, ಜುಲೈ 06: ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಆರ್‌ಸಿಪಿ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ಇಂದು ನಂತರ ಸಲ್ಲಿಸಬಹುದು ಎಂಬ ಸುದ್ದಿ ಬೆಳಗ್ಗೆಯಿಂದಲೇ ಹಬ್ಬಿತ್ತು. ಜುಲೈ 06ರಂದು ಸಂಜೆ ವೇಳೆಗೆ ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ ಸಲ್ಲಿಸಿರುವುದು ಖಾತ್ರಿಯಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ನೀಡಿದ್ದಾರೆ ಎಂದು ಎಎನ್ಐ ಟ್ವೀಟ್ ಮಾಡಿದೆ.

ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಆರ್‌ಸಿಪಿ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ನಾಳೆಗೆ ಮುಕ್ತಾಯವಾಗಿದೆ. ಕಳೆದ ತಿಂಗಳು ಜನತಾ ದಳ (ಯುನೈಟೆಡ್) ಸಿಂಗ್ ಅವರಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿದ್ದರೆ, ಬಿಜೆಪಿ ಕೂಡ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರ ರಾಜ್ಯಸಭಾ ಅಧಿಕಾರಾವಧಿಯನ್ನು ವಿಸ್ತರಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ಹೇಳಿವೆ.

ಮೂಲಗಳ ಪ್ರಕಾರ, ಇಂದು ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಈ ಇಬ್ಬರು ಸಚಿವರ ಕೊಡುಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ, ಇದು ಅವರನ್ನು ಸಚಿವ ಸಂಪುಟದಿಂದ ಬೀಳ್ಕೊಡುವ ಮುನ್ನ ಮಾಡಿದ ಶ್ಲಾಘನೆ ಎನ್ನಲಾಗಿದೆ. ಆರ್ ಸಿ ಪಿ ಸಿಂಗ್ ರಾಜೀನಾಮೆ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಬಿಜೆಪಿಯ ರಾಜ್ಯಸಭಾ ನಾಮನಿರ್ದೇಶನ ಪಟ್ಟಿಯಿಂದ ನಖ್ವಿ ಅವರ ಹೆಸರನ್ನು ಬಿಡಲಾಗಿದೆ.

Mukhtar Abbas Naqvi resigns as Union Minister of Minority Affairs

ಸಂಸತ್ತಿನ ಎರಡೂ ಸದನಗಳ ಸದಸ್ಯರಾಗದೆ ಕೇಂದ್ರ ಸಚಿವರು ಆರು ತಿಂಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ.

ಪಕ್ಷದ ಕೋಟಾದಿಂದ ಸಚಿವರಾಗಿದ್ದರೂ, ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್‌ಸಿಪಿ ಸಿಂಗ್‌ಗೆ ಮೇಲ್ಮನೆಯಲ್ಲಿ ಮತ್ತೊಂದು ಅವಧಿಯನ್ನು ನಿರಾಕರಿಸಲಾಯಿತು. ಬಿಹಾರದಲ್ಲಿ ಎರಡೂ ಪಕ್ಷಗಳು ಮಿತ್ರಪಕ್ಷಗಳಾಗಿದ್ದರೂ ಸಹ ಎರಡೂ ಪಕ್ಷಗಳ ನಡುವಿನ ಸಂಬಂಧವು ಸುಗಮವಾಗಿಲ್ಲದಿರುವಂತೆ ತೋರುವುದರೊಂದಿಗೆ ಸಿಂಗ್ ಬಿಜೆಪಿಗೆ ಹತ್ತಿರವಾಗಿದ್ದಾರೆ ಎಂದು ಪಕ್ಷದ ನಾಯಕರ ಒಂದು ವಿಭಾಗ ಹೇಳಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಊಹಾಪೋಹದ ವರದಿಗಳು ಕೇಂದ್ರ ಸಚಿವರ ಅಧಿಕಾರಾವಧಿ ಮುಗಿದ ನಂತರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರುವ ಸಾಧ್ಯತೆಯಿದೆ ಎಂದು ಸೂಚಿಸಿದೆ.

ಮುಂದಿನ ದಿನಗಳಲ್ಲಿ ನಖ್ವಿ ಪಾತ್ರವೂ ಅಸ್ಪಷ್ಟವಾಗಿದೆ. ಉತ್ತರ ಪ್ರದೇಶದ ರಾಂಪುರದಿಂದ (ಸ್ವಕ್ಷೇತ್ರ) ಲೋಕಸಭಾ ಉಪಚುನಾವಣೆ ಅಭ್ಯರ್ಥಿಯಾಗಿ ಬಿಜೆಪಿ ಅವರನ್ನು ಕಣಕ್ಕಿಳಿಸುತ್ತದೆ ಎಂದು ಕೆಲವು ಊಹಾಪೋಹಗಳಿವೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸದ್ಯಕ್ಕಂತೂ ಸಿಕ್ಕಿಲ್ಲ.

ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆ?
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದವರ ಪೈಕಿ ನಖ್ವಿ ಮತ್ತು ರಾಜನಾಥ್ ಸಿಂಗ್ ಮಾತ್ರ ಉಳಿದಿದ್ದಾರೆ.

ಆಡಳಿತ ಪಕ್ಷವು ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಕೂರಿಸುವ ಬಗ್ಗೆ ಚರ್ಚೆ ನಡೆಸಿದೆ. ವಿಶೇಷವಾಗಿ ಪ್ರವಾದಿ ಮುಹಮ್ಮದ್ ಬಗ್ಗೆ ಬಿಜೆಪಿಯಿಂದ ಅಮಾನತುಗೊಂಡ ವಕ್ತಾರರಾದ ನೂಪುರ್ ಶರ್ಮಾ ಮಾಡಿದ ಕಾಮೆಂಟ್‌ಗಳು ಬಿಜೆಪಿಗೆ ಭಾರಿ ಹಿನ್ನೆಡೆಯುಂಟು ಮಾಡಿದೆ.

Recommended Video

ಶಾಕ್ ಮೇಲೆ ಶಾಕ್ !!ಗೃಹಬಳಕೆಯ LPG ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ರೂ.50 ಏರಿಕೆ | *India | OneIndia Kannada

ಜುಲೈ 19 ಉಪ ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರದ ಮಾಜಿ ಸಚಿವೆ ನಜ್ಮಾ ಹೆಪ್ತುಲ್ಲಾ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಸ್ಪರ್ಧೆಯಲ್ಲಿದ್ದಾರೆ ಎಂಬ ವರದಿಗಳು ಬಂದಿವೆ. ಇನ್ನು ರಾಷ್ಟ್ರಪತಿ ಸ್ಥಾನಕ್ಕೆ ಒಡಿಶಾದ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅಭ್ಯರ್ಥಿಯನ್ನಾಗಿ ಬಿಜೆಪಿ ಹೆಸರಿಸಿದೆ. ಈ ಎರಡು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿಯು ಅಗತ್ಯ ಸದಸ್ಯ ಬಲವನ್ನು ಹೊಂದಿದೆ.

English summary
Mukhtar Abbas Naqvi resigns as Union Minister of Minority Affairs. According to reports RCP Singh may tender his resignations later today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X