ಫೋರ್ಬ್ಸ್ ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಕೇಶ್ ನಂ. 1

ತೈಲೋದ್ಯಮದಲ್ಲಿಯೇ ದೊಡ್ಡ ಹೆಸರು ಮಾಡಿದ್ದ ರಿಲಯನ್ಸ್ ಕಂಪನಿ, ಕಳೆದ ವರ್ಷ ಜಿಯೊ ಎಂಬ ಹೆಸರಿನಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟು ಆ ಕ್ಷೇತ್ರದ ಚಿತ್ರಣವನ್ನೇ ಬದಲಿಸಿತು. ಇದೇ ಮುಕೇಶ್ ಗೆ ವಿಶ್ವಮಟ್ಟದಲ್ಲಿ ಗರಿ ತಂದಿದೆ.

ನ್ಯೂಯಾರ್ಕ್, ಮೇ 17: ಜನಜೀವನವನ್ನೇ ಬದಲಿಸಿ, ತಂತ್ರಜ್ಞಾನದ ಹೊಸ ಉಪಯೋಗಗಳಿಗೆ ನಾಂದಿ ಹಾಡಿದ , ಹೊಸತೊಂದು ಇತಿಹಾಸ ನಿರ್ಮಿಸಿದ ಉದ್ದಿಮೆದಾರರ ಪಟ್ಟಿಯನ್ನು ಖ್ಯಾತ ನಿಯತ ಕಾಲಿಕೆ ಫೋರ್ಬ್ಸ್ ತಯಾರಿಸಿದ್ದು, ಇದರಲ್ಲಿ ಭಾರತದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ ಅಗ್ರ ಸ್ಥಾನ ಪಡೆದಿದ್ದಾರೆ.

ಗ್ಲೋಬಲ್ ಗೇಮ್ ಚೇಂಜರ್ಸ್ ಲಿಸ್ಟ್ ಎಂಬ ಹೆಸರಿನ ಈ ಪಟ್ಟಿಯಲ್ಲಿ ಒಟ್ಟು 25 ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.[ಭಾರತದಲ್ಲಿ 101 ಶತಕೋಟಿ ಸಿರಿವಂತರು; ಅಗ್ರಸ್ಥಾನದಲ್ಲಿ ಅಂಬಾನಿ]

Mukesh Ambani leads Forbes list of Global Game Changers

ತೈಲೋದ್ಯಮದಲ್ಲಿಯೇ ದೊಡ್ಡ ಹೆಸರು ಮಾಡಿದ್ದ ರಿಲಯನ್ಸ್ ಕಂಪನಿ, ಕಳೆದ ವರ್ಷ ಜಿಯೊ ಎಂಬ ಹೆಸರಿನಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಅನೇಕ ಉಚಿತ ಆಫರ್ ಗಳ ಸರಮಾಲೆಯೊಂದಿಗೆ ಅಪಾರ ಸಂಖ್ಯೆಯ ಗ್ರಾಹಕರನ್ನು ಸೆಳೆದಿತ್ತಲ್ಲದೆ, ಕೆಲವೇ ತಿಂಗಳುಗಳಲ್ಲಿ 100 ಮಿಲಿಯನ್ ಗ್ರಾಹಕರನ್ನು ಪಡೆಯುವ ಮೂಲಕ ಹೊಸತೊಂದು ದಾಖಲೆ ಸೃಷ್ಟಿಸಿತು.[ಮುಖೇಶ್ ಅಂಬಾನಿ ದೇಶದ ನಂಬರ್ 1 ಸಿರಿವಂತ, ಆಸ್ತಿ ಜಸ್ಟ್ 1.74 ಲಕ್ಷ ಕೋಟಿ]

ಜಿಯೋನ ಈ ಬಿರುಗಾಳಿಗೆ ಆವರೆಗೆ ಭಾರತೀಯ ಟೆಲಿಕಾಂ ಕ್ಷೇತ್ರಗಳಲ್ಲಿ ದಿಗ್ಗಜರೆನಿಸಿದ್ದ ಏರ್ ಟೆಲ್, ವೊಡಾಫೋನ್ ಹಾಗೂ ಬಿಎಸ್ಎನ್ಎಲ್ ನಂಥ ಸಂಸ್ಥೆಗಳೇ ತತ್ತರಿಸುವಂತಾಗಿತ್ತು. ಇದು ಕಂಪನಿಗಳ ನಡುವೆ ಪರಸ್ಪರ ದರ ಸಮರಕ್ಕೆ ಕಾರಣವಾಗಿ, ಭಾರತೀಯ ದೂರ ಸಂಪರ್ಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಿತು. ಈ ಕಾರಣವೇ ಮುಕೇಶ್ ಅಬಾನಿಯವರಿಗೆ ಫೋರ್ಬ್ ಪಟ್ಟಿಯ ಅಗ್ರ ಸ್ಥಾನ ಸಿಕ್ಕಿದೆ.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+