ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖೇಶ್ ಅಂಬಾನಿ ದೇಶದ ನಂಬರ್ 1 ಸಿರಿವಂತ, ಆಸ್ತಿ ಜಸ್ಟ್ 1.74 ಲಕ್ಷ ಕೋಟಿ

|
Google Oneindia Kannada News

ಮುಂಬೈ, ಮಾರ್ಚ್ 7: ಕೇಂದ್ರ ಸರಕಾರದ ನೋಟು ನಿಷೇಧ ತೀರ್ಮಾನ ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ ಎಂದು ಜಾಗತಿಕ ಸಿರಿವಂತರ ಪಟ್ಟಿಯ ವರದಿಯಲ್ಲಿ ಮಂಗಳವಾರ ಹೇಳಲಾಗಿದೆ. ಹ್ಯೂರನ್ ಗ್ಲೋಬಲ್ ರಿಚ್ ಲಿಸ್ಟ್ ಇಂಡಿಯಾ ಪ್ರಕಾರ, ನವೆಂಬರ್ 8, 2016ರ ನಂತರ ಹನ್ನೊಂದು ಮಂದಿಯ ಆಸ್ತಿ ಮೌಲ್ಯವು ಒಂದು ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಕೆಳಗೆ ಬಂದಿದೆಯಂತೆ.

ವರದಿಯಲ್ಲಿ ಭಾರತೀಯ ಮೂಲದ ಒಂದು ಬಿಲಿಯನ್ ಅಮೆರಿಕ ಡಾಲರ್ ಹಾಗೂ ಹೆಚ್ಚಿನ ಆಸ್ತಿ ಹೊಂದಿರುವ ಬಿಲಿಯನೇರ್ ಗಳ ಪಟ್ಟಿ ಮಾಡಲಾಗಿದೆ. ಭಾರತದಲ್ಲಿ ನೋಟು ನಿಷೇಧದ ಕಾರಣಕ್ಕೆ ಈ ವರ್ಷ ತುಂಬ ಕಷ್ಟವಾಗಿತ್ತು ಎಂದು ಹ್ಯೂರನ್ ರಿಪೋರ್ಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.[ಜಗತ್ತಿನ ಮೊದಲ ಟ್ರಿಲಿಯನೇರ್ ಆಗ್ತಾರಂತೆ ಬಿಲ್ ಗೇಟ್ಸ್!]

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು ನೂರಾಮೂವತ್ತೆರಡು ಮಂದಿಯ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ, 1,74,400 ಕೋಟಿ ರುಪಾಯಿ ಆಸ್ತಿ (26 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ) ಇದೆ. ತೈಲ ವ್ಯವಹಾರದ ಜತೆಗೆ ಟೆಲಿಕಾಂ ಕ್ಷೇತ್ರದಲ್ಲೂ ಮುಖೇಶ್ ಅಂಬಾನಿ ಕೈ ಇರಿಸಿದ್ದು, ಐಡಿಯಾ, ಏರ್ ಟೆಲ್, ವೊಡಾ ಫೋನ್ ಕಂಪನಿಗಳಿಗೆ ಹೊಡೆತ ಬಿದ್ದಿದೆ.

Mukesh Ambani

1,01,000 ಕೋಟಿ ರುಪಾಯಿ ಆಸ್ತಿ ಮೌಲ್ಯ (14 ಬಿಲಿಯನ್ ಅಮೆರಿಕ ಡಾಲರ್) ಹೊಂದಿರುವ ಎಸ್ ಪಿ ಹಿಂದೂಜಾ ಮತ್ತು ಕುಟುಂಬ ಇದೆ. ಸನ್ ಫಾರ್ಮಾದ ಸ್ಥಾಪಕ ದಿಲೀಪ್ ಶಾಂಘ್ವಿ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಆಸ್ತಿ ಮೌಲ್ಯದಲ್ಲಿ ಶೇ 22ರಷ್ಟು ಕುಸಿತವಾಗಿ 99,000 ಕೋಟಿ ಆಸ್ತಿ ಇದೆ. (14 ಬಿಲಿಯನ್ ಅಮೆರಿಕ ಡಾಲರ್).

ನಾಲ್ಕನೇ ಸ್ಥಾನದಲ್ಲಿರುವವರು ನಿರ್ಮಾಣ ವ್ಯವಹಾರದ ಪಲ್ಲೋನ್ಜಿ ಮಿಸ್ತ್ರಿ. ಅವರ ಆಸ್ತಿ ಮೌಲ್ಯ 82,700 ಕೋಟಿ (12 ಬಿಲಿಯನ್ ಅಮೆರಿಕ ಡಾಲರ್). ಟಾಟಾ ಮೋಟಾರ್ಸ್ ನ ಒಟ್ಟು ಮಾರುಕಟ್ಟೆ ಮೌಲ್ಯ ಹಾಗೂ ಪಲೋನ್ಜಿ ಮಿಸ್ತ್ರಿ ಅವರ ಆಸ್ತಿ ಮೌಲ್ಯ ಎರಡೂ ಸಮ. ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ನಿಂದ ತೆಗೆದು ಹಾಕಿದ್ದರಿಂದ ಇವರ ಆಸ್ತಿಯಲ್ಲೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಏಕೆಂದರೆ ಟಾಟಾ ಸನ್ಸ್ ನಲ್ಲಿ ಇವರ ಶೇ 18ರಷ್ಟು ಪಾಲಿದೆ.

English summary
According to the Hurun Global Rich List India, Reliance Industries Chairman Mukesh Ambani, the richest Indian. Ambani topped the list of 132 individuals with a fortune of Rs 175,400 crore ($26 billion).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X