Mukesh Ambani: ಅಂಬಾನಿ ಮನೆ ಆಂಟಿಲಿಯಾದ ಒಂದು ತಿಂಗಳ ವಿದ್ಯುತ್ ಬಿಲ್ ಎಷ್ಟು ಗೊತ್ತಾ?

ಕರ್ನಾಟಕದಲ್ಲಿ ಭಾಗ್ಯಜ್ಯೋತಿ ಯೋಜನೆಯಡಿ ರಾಜ್ಯ ಸರ್ಕಾರವೇ ಜನಸಾಮಾನ್ಯರ ಮನೆ ಬಳಕೆಯ ವಿದ್ಯುತ್ ಬಿಲ್ ಭರಿಸುತ್ತಿದೆ. ಇದು ಮಧ್ಯಮ, ಬಡ ವರ್ಗದ ಜನರ ಮಾಸಿಕ ಖರ್ಚನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿದೆ. ಆದರೂ ಉಚಿತ ಕೊಡುಗೆಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಒಂದು ಮನೆಯ ವಿದ್ಯುತ್ ಬಿಲ್ ಸಾವಿರ ರೂಪಾಯಿಗಳಲ್ಲಿ ಇರುತ್ತದೆ. ಏನೇ ದೊಡ್ಡ ಮನೆಯಾದರು ಕೆಲವು ಸಾವಿರ ರೂಪಾಯಿ ಬಿಲ್ ಬರುತ್ತದೆ.

ಆದರೆ ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಜೀವಮಾನವಿಡೀ ದುಡಿಯುವ ಮೊತ್ತವನ್ನು ಒಂದು ತಿಂಗಳ ವಿದ್ಯುತ್ ಬಿಲ್ ಮೊತ್ತಕ್ಕೆ ಸಮನಾದರೆ. ಹೌದು, ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ದುಬಾರಿ ಮನೆ ಆಂಟಿಲಿಯಾದ ಮೊದಲ ತಿಂಗಳ ವಿದ್ಯುತ್ ಬಿಲ್‌ ಬಗ್ಗೆ ಕೇಳಿದರೆ ಜನಸಾಮಾನ್ಯರು ಬೆಚ್ಚಿ ಬೀಳಬೇಕು.

Mukesh ambani first electricity bill antilia details

ವಿಶ್ವದ ಎರಡನೇ ದೊಡ್ಡ ಖಾಸಗಿ ನಿವಾಸ

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕನಸಿನ ಮನೆ ಆಂಟಿಲಿಯಾ. ಬರೋಬ್ಬರಿ ನಾಲ್ಕು ವರ್ಷಗಳ ಸಮಯ ತೆಗೆದುಕೊಂಡು ಇದನ್ನು ನಿರ್ಮಾಣ ಮಾಡಲಾಗಿದೆ. ಬರೋಬ್ಬರಿ 27 ಅಂತಸ್ತಿನ ಮನೆಯ ನಿರ್ಮಾಣ 2005ರಲ್ಲಿ ಆರಂಭವಾಗಿ 2010ರ ಹೊತ್ತಿಗೆ ನಿರ್ಮಾಣವಾಯಿತು. ಬರೋಬ್ಬರಿ 16,000 ಕೋಟಿ ರೂಪಾಯಿಗಿಂತ ಅಧಿಕ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಬಕಿಂಗ್‌ಹ್ಯಾಮ್ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ದುಬಾರಿ ಖಾಸಗಿ ನಿವಾಸ ಎನಿಸಿಕೊಂಡಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಆಂಟಿಲಿಯಾ ಜಾಗತಿಕವಾಗಿ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿದ್ದು, ಕೆಲವು ರಾಜಮನೆತನದ ಅರಮನೆಗಳನ್ನು ಸಹ ಮೀರಿಸಿದೆ.

ಮೊದಲ ತಿಂಗಳ ವಿದ್ಯುತ್ ಬಿಲ್ ಎಷ್ಟು?

2010ರ ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅಧಿಕೃತವಾಗಿ ಆಂಟಿಲಿಯಾಗೆ ಸ್ಥಳಾಂತರವಾದರು. 400,000 ಚದರ ಅಡಿ ಗಾತ್ರ ಮತ್ತು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಮನೆಯಲ್ಲಿ ವಿದ್ಯುತ್ ಬಳಕೆ ಕೂಡ ಹೆಚ್ಚಾಗಿರುತ್ತದೆ. ಆದರೆ ಅವರ ಮೊದಲ ತಿಂಗಳ ವಿದ್ಯುತ್ ಬಿಲ್ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.

ಕೇವಲ ಒಂದು ತಿಂಗಳಿನಲ್ಲಿ ಆಂಟಿಲಿಯಾದಲ್ಲಿ 6,37,240 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ. ಇದರ ಪರಿಣಾಮ ಮೊದಲ ತಿಂಗಳ ವಿದ್ಯುತ್ ಬಿಲ್ ಮೊತ್ತ ಬರೋಬ್ಬರಿ 70,69,488 ರೂಪಾಯಿ ಬಂದಿತ್ತು ಎಂದು ಇಟಿ ವರದಿ ಮಾಡಿದೆ. ಈ ಹಣದಲ್ಲಿ ಮುಂಬೈನಲ್ಲಿ ಹೊಸ ಫ್ಲಾಟ್ ಖರೀದಿ ಮಾಡಬಹುದು.

ಯಾಕೆ ಅಷ್ಟೊಂದು ವಿದ್ಯುತ್ ಬಳಕೆ?

ಆಂಟಿಲಿಯಾ ಎನ್ನುವುದು ಬರೀ ಮನೆಯಲ್ಲ ಅದೊಂದು ಇಂಜಿನಿಯರಿಂಗ್ ಅದ್ಭುತ ನಿರ್ಮಾಣ. ಆಂಟಿಲಿಯಾ ಮೇಲೆ ಮೂರು ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. 168 ಕಾರುಗಳನ್ನು ನಿಲ್ಲಿಸಬಹುದಾದ ಬಹುಮಹಡಿ ಪಾರ್ಕಿಂಗ್ ಸ್ಥಳ. ಐಷಾರಾಮಿ ಸ್ಪಾ, ಆರೋಗ್ಯ ಕೇಂದ್ರ, ಬಿಸಿನೀರು-ತಣ್ಣೀರಿನ ಈಜುಕೊಳ, ದೇವಸ್ಥಾನ, ಹೈಸ್ಪೀಡ್ ಲಿಫ್ಟ್‌ಗಳು ಹೆಚ್ಚಿನ ಪ್ರಮಾಣದ ವಿದ್ಯುತ್ ಬೇಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+