ಮಕ್ಕಳ ಕೈಯಲ್ಲಿ ಮದ್ಯ ಸಿಕ್ಕರೆ ಬಾರ್ ಮಾಲೀಕರಿಗೆ ಜೈಲೂಟ

Subscribe to Oneindia Kannada

ಬೆಂಗಳೂರು, ಜನವರಿ, 05: ಬಾರ್ ಹಾಗೂ ಪಬ್ ಗಳಲ್ಲಿ ಮದ್ಯ ಮಕ್ಕಳ ಕೈಯಲ್ಲಿ ಮದ್ಯ ತರಿಸಿಕೊಳ್ಳುವುದು ಮತ್ತು ಮಕ್ಕಳಿಗೆ ಮದ್ಯ ನೀಡುವುದು ಕಾನೂನು ಬಾಹಿರ. ಇಂಥ ಪ್ರಕರಣದಲ್ಲಿ ತೊಡಗಿಕೊಂಡರೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ದಂಡ ವಿಧಿಸಬೇಕು ಎಂದು ಸಂಸದ ರಾಜೀವ್ ಚಂದ್ರಶೇಖರ್ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು 'ಮಕ್ಕಳ ಕಾಯ್ದೆ-2015'ರ ಸೆಕ್ಷನ್ 78ರಲ್ಲಿ ಮಕ್ಕಳನ್ನು ಬಾರ್ ಹಾಗೂ ಪಬ್ ಗಳಲ್ಲಿ ಮದ್ಯ ಪೂರೈಕೆ ಮಾಡಲು ಬಳಸುವುದು ಕಾನೂನಿನ ಉಲ್ಲಂಘನೆ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದೆ. ಅಷೇ ಅಲ್ಲದೆ ಮಕ್ಕಳನ್ನು ಬಳಸಿದ ಸಂಸ್ಥೆಯ ಮಾಲೀಕರಿಗೆ 7ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.[ಅಪ್ರಾಪ್ತರ ಕೈಗೆ ಎಣ್ಣೆ ಗ್ಲಾಸ್! ವಿರುದ್ಧ ರಾಜೀವ್ ವಿನೂತನ ಜಾಗೃತಿ]

rajeev

ಈ ಹಿಂದೆ ಬೆಂಗಳೂರಿನಲ್ಲಿ ಮಕ್ಕಳನ್ನು ಮದ್ಯ ಪೂರೈಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ದೂರು ಕೇಳಿ ಬಂದಾಗ ಸಂಸದ ರಾಜೀವ್ ಚಂದ್ರಶೇಖರ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕಳೆದ ಜುಲೈನಲ್ಲಿ ರಾಜ್ಯ ಅಬಕಾರಿ ಆಯುಕ್ತರು ರಾಜ್ಯದಲ್ಲಿ ಅಪ್ರಾಪ್ತ ಹಾಗೂ ಶಾಲಾ ಮಕ್ಕಳನ್ನು ಬಾರ್ ಮತ್ತು ಪಬ್‍ಗಳಲ್ಲಿ ಮದ್ಯ ಪೂರೈಕೆ ಮಾಡಲು ಬಳಸಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು.[ಮಕ್ಕಳ ಜೀವ ಹಿಂಡುತ್ತಿರುವ ಮಹಾಮಾರಿ ಎಂಡೋಸಲ್ಫಾನ್]

ಕಾಯ್ದೆ ಜಾರಿಯಾಗುತ್ತಿರುವುದು ಸ್ವಾಗತಾರ್ಹ. ಇದನ್ನು ಉಲ್ಲಂಘಿಸುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸರ್ಕಾರವು ಬಾರ್ ಹಾಗೂ ಪಬ್ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡಬೇಕು. ರಾಜ್ಯದ ಪೊಲೀಸ್ ಇಲಾಖೆ ಸಹ ಈ ಬಗ್ಗೆ ಹದ್ದಿನ ಕಣ್ಣು ಇಡಬೇಕು ಎಂದು ರಾಜೀವ್ ಚಂದ್ರಶೇಖರ್ ಒತ್ತಾಯ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pub and bar owners who sell liquor to children and the under-aged are liable to be jailed for seven years after a new Section was added to the Juvenile Justice Bill, 2015 that makes such sale a criminal offence. This strict punishment has been added into the Juvenile Justice Bill, 2015 by including Section 78 that makes serving liquor to children and the under-aged a criminal offence punishable with seven years rigorous imprisonment and a fine of rupees one lakh. The government accepted a plea by MP Rajeev Chandrasekhar and included a clause in the JJ Bill that makes serving liquor/intoxicants to children a criminal offence.
Please Wait while comments are loading...