ಅತ್ಯಾಚಾರಕ್ಕೆ ವಿರೋಧ: ಅಪ್ರಾಪ್ತೆಯನ್ನು ಸಜೀವವಾಗಿ ಸುಟ್ಟ ಕಾಮುಕ

Posted By:
Subscribe to Oneindia Kannada

ರಾಜಗಢ, ಫೆಬ್ರವರಿ 12: ಅತ್ಯಾಚಾರ ಎಸಗಲು ಅಡ್ಡಿ ಪಡಿಸಿದ್ದಕ್ಕಾಗಿ ಅಪ್ರಾಪ್ತ ದಲಿತ ಬಾಲಕಿಯನ್ನು ಕಾಮುಕನೊಬ್ಬ ಸಜೀವವಾಗಿ ಸುಟ್ಟ ಘಟನೆ ಮಧ್ಯಪ್ರದೇಶದ ಸುಸ್ತಾನಿ ಗ್ರಾಮದಲ್ಲಿ ನಡೆದಿದೆ.

ಸುಟ್ಟ ಗಾಯಗಳಿಂದಾಗಿ ಬಾಲಕಿ ಚಿಂತಾಜನಕ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 13 ವರ್ಷದ ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ತಾನು ಅತ್ಯಾಚಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಆತ ತನ್ನ ಮೇಲೆ ಸೀಮೆ ಎಣ್ಣೆ ಸುರಿದು ಸುಟ್ಟಿದ್ದಾನೆ ಎಂದಿದ್ದಾಳೆ.

ಅಪ್ರಾಪ್ತೆ ಮನೆಯಲ್ಲಿ ಒಂಟಿಯಾಗಿರುವ ಸಮಯ ನೋಡಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ನಂತರ ಆಕೆಯನ್ನು ಸಜೀವವಾಗಿ ಸುಟ್ಟಿದ್ದರಿಂದ ಆಕೆಯ ಮೈಮೇಲೆ ಶೇ.50 ರಷ್ಟು ಸುಟ್ಟ ಗಾಯಗಳಾಗಿವೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ಪತ್ತೆಯಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A minor girl in Madhya Pradesh was burnt alive because she tried to resist rape. The incident took place in Madhya Pradesh's Sustani village on Feb 12th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ