ಊಟದಾಸೆಗೆ ಆಸ್ಪತ್ರೆಯಿಂದ 4 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಕದ್ದ ಬೀದಿ ನಾಯಿ!

ಆಸ್ಪತ್ರೆಗಳಲ್ಲಿ ಕಳ್ಳತನವಾಗುವುದು ಹೊಸದೇನಲ್ಲ, ಆದರೆ ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ನಡೆದ ಕಳ್ಳತನದ ಪ್ರಕರಣ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಈ ಕಳ್ಳತನ ಮಾಡಿದ್ದು ಯಾವ ಮನುಷ್ಯನೂ ಅಲ್ಲ, ಬದಲಾಗಿ ಬೀದಿ ನಾಯಿಯೊಂದು! ಆಶ್ಚರ್ಯವಾಯ್ತು.

ಹೌದು, ಆಹಾರದಾಸೆಗೆ ಆಸ್ಪತ್ರೆಯೊಳಗೆ ನುಗ್ಗಿದ ಬೀದಿ ನಾಯಿಯೊಂದು ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನ ಬಾಯಲ್ಲಿ ಕಚ್ಚಿಕೊಂಡು ಹೋಗಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

MP Hospital Shock

ಮಧ್ಯಪ್ರದೇಶದ ಮಂದಸೌರ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಅಚ್ಚರಿಯ ಘಟನೆ ವರದಿಯಾಗಿದೆ. ಕಾಯಂಪುರ ನಿವಾಸಿಯಾದ ಲತಾಬಾಯಿ ಎಂಬ ಮಹಿಳೆ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಈ ಆಸ್ಪತ್ರೆಗೆ ಬಂದಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ, ಚಿನ್ನಾಭರಣಗಳನ್ನ ಮನೆಯಲ್ಲಿ ಬಿಟ್ಟು ಬರಲು ಹೆದರಿದ ಅವರು, ತಮ್ಮ ಒಡವೆಗಳನ್ನ ಹಾಗೂ ಸ್ವಲ್ಪ ಹಣವನ್ನ ಒಂದು ಬ್ಯಾಗ್‌ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದಿದ್ದರು.

ಮಗನಿಗೆ ಆಸ್ಪತ್ರೆಯ ಸರ್ಜಿಕಲ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಗಸ್ಟ್ 24ರ ರಾತ್ರಿ ಸುಮಾರು 1 ರಿಂದ ಮುಂಜಾನೆ 6 ಗಂಟೆಯ ನಡುವಿನ ಸಮಯದಲ್ಲಿ ಮಹಿಳೆಯ ಬ್ಯಾಗ್ ನಾಪತ್ತೆಯಾಗಿತ್ತು. ಬ್ಯಾಗ್‌ನಲ್ಲಿ ಚಿನ್ನದ ಮಾಂಗಲ್ಯ, ಕಿವಿಯೋಲೆ, ಚಿನ್ನದ ಮಣಿಗಳು, ಬೆಳ್ಳಿಯ ಕಾಲ್ಗೆಜ್ಜೆಗಳು ಸೇರಿದಂತೆ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಭರಣಗಳಿದ್ದವು. ಇದರ ಜೊತೆಗೆ 2,000 ನಗದು ಹಾಗೂ ಸ್ವಲ್ಪ ತಿಂಡಿ ತಿನಿಸುಗಳು ಕೂಡ ಅದೇ ಬ್ಯಾಗ್‌ನಲ್ಲಿದ್ದವು.

ಸಿಸಿಟಿವಿ ಬಯಲು ಮಾಡಿದ ಸತ್ಯ

ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗ್ ಕಾಣೆಯಾಗಿರುವುದನ್ನ ಕಂಡು ಆತಂಕಗೊಂಡ ಲತಾಬಾಯಿ, ತಕ್ಷಣ ಕೊತ್ವಾಲಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಆಸ್ಪತ್ರೆಯೊಳಗೇ ಇಷ್ಟು ದೊಡ್ಡ ಮೊತ್ತದ ಕಳ್ಳತನವಾಗಿರುವುದರಿಂದ ಪೊಲೀಸರು ಕೂಡಲೇ ಅಲರ್ಟ್ ಆಗಿ, ಆಸ್ಪತ್ರೆಯ ಆವರಣ ಹಾಗೂ ಸರ್ಜಿಕಲ್ ವಾರ್ಡ್‌ನ ಸಿಸಿಟಿವಿ ಕ್ಯಾಮೆರಾಗಳನ್ನ ಪರಿಶೀಲಿಸಲು ಆರಂಭಿಸಿದರು.

ಮುಂಜಾನೆ 4 ಗಂಟೆಯ ಸುಮಾರಿನ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಸರ್ಜಿಕಲ್ ವಾರ್ಡ್‌ಗೆ ನುಗ್ಗಿದ ಬೀದಿ ನಾಯಿಯೊಂದು, ಮಕ್ಕಳು ಕುಳಿತಿದ್ದ ಜಾಗದ ಪಕ್ಕದ ಕಪಾಟಿನ ಬಳಿ ಇಟ್ಟಿದ್ದ ಲತಾಬಾಯಿ ಅವರ ಬ್ಯಾಗ್‌ನ ಬಳಿ ಬಂದಿದೆ. ಬ್ಯಾಗ್‌ನಲ್ಲಿದ್ದ ತಿಂಡಿಯ ವಾಸನೆಗೆ ಸಿಕ್ಕಿದ ಕಾರಣಕ್ಕೆ ನಾಯಿ, ಆ ಇಡೀ ಬ್ಯಾಗ್ ಅನ್ನ ತನ್ನ ಬಾಯಲ್ಲಿ ಕಚ್ಚಿಕೊಂಡು ಆಸ್ಪತ್ರೆಯಿಂದ ಹೊರನಡೆದಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು.

4 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆ ಹಚ್ಚಿದ ಪೊಲೀಸರು

ಕಳ್ಳ ಮನುಷ್ಯನಲ್ಲ, ನಾಯಿ ಎಂದು ಖಚಿತಪಡಿಸಿಕೊಂಡ ಪೊಲೀಸರು, ನಂತರ ನಾಯಿಯ ಚಲನವಲನಗಳನ್ನ ಪತ್ತೆಹಚ್ಚಲು ಆಸ್ಪತ್ರೆಯ ಸುತ್ತಮುತ್ತ ಅಳವಡಿಸಲಾಗಿದ್ದ ವಿವಿಧ ಸಿಸಿಟಿವಿ ಕ್ಯಾಮೆರಾಗಳ ಮೊರೆ ಹೋದರು. ಮನುಷ್ಯನ ಜಾಡು ಹಿಡಿಯುವ ಬದಲು ನಾಯಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ, ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿ ಆ ಬ್ಯಾಗ್ ಪತ್ತೆಯಾಗಿದೆ.

ಅದೃಷ್ಟವಶಾತ್ ಬ್ಯಾಗ್‌ನಲ್ಲಿದ್ದ ಎಲ್ಲಾ ಚಿನ್ನಾಭರಣಗಳು ಮತ್ತು ನಗದು ಸುರಕ್ಷಿತವಾಗಿತ್ತು. ನಾಯಿ ಕೇವಲ ತಿಂಡಿಯನ್ನು ಮಾತ್ರ ತಿಂದಿತ್ತು. ಕಾನೂನು ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿದ ಬಳಿಕ ಪೊಲೀಸರು ಆಭರಣಗಳನ್ನು ಲತಾಬಾಯಿ ಅವರಿಗೆ ಹಿಂದಿರುಗಿಸಿದರು.

ಈ ಘಟನೆಯು ಸುಖಾಂತ್ಯ ಕಂಡಿದ್ದರೂ, ಆಸ್ಪತ್ರೆಯ ಭದ್ರತೆಯ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಅತ್ಯಂತ ಸೂಕ್ಷ್ಮವಾದ ಸರ್ಜಿಕಲ್ ವಾರ್ಡ್‌ನೊಳಗೆ ಬೀದಿ ನಾಯಿಗಳು ಹೇಗೆ ನಿರ್ಭಯವಾಗಿ ಓಡಾಡುತ್ತವೆ? ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು? ಎಂಬ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+