ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದ ಮೌಗ್ಲಿ ಹುಡುಗಿಯ ಅಸಲಿ ಕಥೆ ಇಲ್ಲಿದೆ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾದ ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳ ಕಥೆಯ ಅಸಲಿಯತ್ತು ಇಲ್ಲಿದೆ ಓದಿ..

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೋ, ಏಪ್ರಿಲ್ 09: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾದ ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳ ಕಥೆಯ ಅಸಲಿಯತ್ತು ಇಲ್ಲಿದೆ ಓದಿ..ಜಂಗಲ್ ಬುಕ್ ನ ಮೌಗ್ಲಿಯಂತೆ ಆಕೆಯನ್ನು ಕೋತಿಗಳು ಸಂರಕ್ಷಿಸಿಲ್ಲ. ಆಕೆ ಎಲ್ಲರಂತೆ ಈ ಸಮಾಜದಲ್ಲೇ ಹುಟ್ಟಿ, ಬೇಡವಾದ ಕೂಸು ಎಂದು ತಿಳಿದು ಬಂದಿದೆ.

ಬಹ್ರಿಚ್ ಗೆ ಸೇರಿದ ಕಟಾರ್ನಿಘಾಟ್ ಕಾಡಿನಲ್ಲಿ ಈಕೆ ಕಳೆದ ಎರಡು ತಿಂಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿದ್ದಳು. ಪುಟ್ಟ ಫ್ರಾಕ್ ತೊಟ್ಟಿದ್ದ ಆಕೆ ಸುತ್ತಾ ಮುತ್ತಾ ಮಂಗಗಳಿತ್ತು. ಹೆಡ್ ಕಾನ್ಸ್ ಟೇಬಲ್ ಸರ್ವಜೀತ್ ಯಾದವ್ ಅವರು, ಕಟಾರ್ನಿಘಾಟ್ ಸಂರಕ್ಷಿತಾರಣ್ಯದ ಮೋಟಿಪುರ್ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಹುಡುಗಿಯನ್ನು ನೋಡಿ, ರಕ್ಷಿಸಿದ್ದರು. [ಕಾಡಿನಲ್ಲಿ ಮಂಗಗಳ ಜತೆಗೆ ಪತ್ತೆಯಾದ ಬಾಲಕಿಗೆ ಮಾತೇ ಬರುತ್ತಿಲ್ಲ!]

'Mowgli girl' was not raised by monkeys

ಮಂಗಗಳ ಕಥೆ ಹೇಗೆ ಹುಟ್ಟಿತು?: ಆಕೆ ಮಂಗಗಳ ಜತೆಗೆ ಬೆಳೆದಿದ್ದಾಳೆ, ಕೈ ಕಾಲು ಬಳಸಿ ಮಂಗಗಳಂತೆ ನಡೆಯುತ್ತಾಳೆ, ಮನುಷ್ಯರನ್ನು ಕಂಡರೆ ಭಯ ಬೀಳುತ್ತಿದ್ದಾಳೆ ಎಂಬ ಕಥೆ ಹೇಗೆ ಹುಟ್ಟಿತೋ ಗೊತಿಲ್ಲ. ಅಸಲಿಗೆ ಈ ಪುಟ್ಟ ಬಾಲಕಿ ಬುದ್ಧಿ ಮಾಂದ್ಯಳಾಗಿದ್ದು, ಈಕೆಯನ್ನು ಹೆತ್ತವರು ಅನಾಥಳನ್ನಾಗಿಸಿದ್ದಾರೆ. ಸರಿಯಾಗಿ ಆಹಾರ ಸೇವನೆ ಇಲ್ಲದೆ ನಿತ್ರಾಣಳಾಗಿದ್ದ ಈಕೆಗೆ ನಡೆಯಲು ಕಷ್ಟವಾಗಿದ್ದರಿಂದ ತೆವಳಲು ಆರಂಭಿಸಿದ್ದಾಳೆ. ಬಹುಶಃ ಇದನ್ನು ನೋಡಿ, ಅಕೆ ಮಂಗಗಳಂತೆ ಅಡುತ್ತಿದ್ದಾಳೆ ಎಂಬ ಸುದ್ದಿ ಹಬ್ಬಿರಬಹುದು.

ಸುರೇಶ್ ಯಾದವ್ ಆಕೆಯನ್ನು ರಕ್ಷಣೆ ಮಾಡಲು ಯತ್ನಿಸಿದಾಗ ಆಕೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಳು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ನಿರ್ವಾಣ್ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಕೆಯ ನಡವಳಿಕೆ ಮಂಗಗಳ ರೀತಿಯಲ್ಲೇ ಇದ್ದು, ನಡೆಯುವುದು, ತಿನ್ನುವುದು ಮಂಗಗಳನ್ನೇ ಹೋಲುತ್ತಿದೆ. ಪ್ರಾಣಿಗಳನ್ನು ಕಂಡಾಗ ಆಕೆ ಓಡಿ ಹೋಗುತ್ತಿದ್ದಾಳೆ. ಆಕೆಗೀಗ ನಡೆದಾಡುವ ತರಬೇತಿ ನೀಡಿದ್ದರೂ ಆಕೆ ನಾಲ್ಕು ಕಾಲಿನಲ್ಲೇ ನಡೆಯುತ್ತಿದ್ದಾಳೆ ಎಂದು ಮುಖ್ಯ ವೈದ್ಯಾಧಿಕಾರಿ ಡಿ.ಕೆ ಸಿಂಗ್ ಹೇಳಿದ್ದು, ಈಕೆ ಮೌಗ್ಲಿ ಗರ್ಲ್ ಎಂಬ ಸುದ್ದಿ ಹಬ್ಬಲು ಇನ್ನಷ್ಟು ಕಾರಣವಾಗಿತ್ತು.

English summary
No monkey, not walking on all fours. This is how the story of the Mowgli girl found in a forest at Uttar Pradesh has turned out. She was found at the Katerniaghat forest by head constable Sarvajeet Yadav two and half months back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X