ಬಾಡಿಗೆ ತಾಯಿಂದ ಮಗು ಪಡೆದರೂ 6 ತಿಂಗಳ ಹೆರಿಗೆ ರಜೆ

Subscribe to Oneindia Kannada

ಮುಂಬೈ, ಫೆಬ್ರವರಿ, 02: ಮಗುವಿಗಾಗಿ ಹಂಬಲಿಸಿ ಬಾಡಿಗೆ ತಾಯಿ ಮೂಲಕ ತಾಯಿ ಭಾಗ್ಯ ಪಡೆಯುವವರು ಕೂಡ ಇತರ ಮಹಿಳೆಯರಂತೆಯೇ ಆರು ತಿಂಗಳ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಬಾಂಬೆ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ಮಕ್ಕಳ ದತ್ತು, ರಜೆ ಹಾಗೂ ನಿಯಮಗಳಿಗೆ ಸಂಬಂಧಿಸಿದ 551(ಸಿ) ಹಾಗೂ (ಇ) ವಿಭಾಗದಲ್ಲಿ ಬಾಡಿಗೆ ತಾಯಿಯಿಂದ ತಾಯ್ತನ ಪಡೆಯುವ ಮಹಿಳೆಯರಿಗೆ ಹೆರಿಗೆ ಅವಧಿಯ ರಜೆ ನೀಡಬಾರದು ಎಂದು ಹೇಳಿಲ್ಲ. ಅವರು ಸಹ ಸ್ವಾಭಾವಿಕವಾಗಿ ತಾಯ್ತನವನ್ನು ಅನುಭವಿಸಬೇಕಿದೆ. ಹಾಗಾಗಿ 6 ತಿಂಗಳ ಹೆರಿಗೆ ರಜೆ ನೀಡಬಹುದು ಎಂದು ನ್ಯಾಯಾಲಯ ತಿಳಿಸಿದೆ.[ವೋಡಾಫೋನ್ ಸಿಬ್ಬಂದಿಗೆ 16 ವಾರದ ಕಡ್ಡಾಯ ಹೆರಿಗೆ ರಜೆ]

Mothers of surrogate babies entitled to get leave

ಕೇಂದ್ರೀಯ ರೈಲ್ವೇಯ ಉದ್ಯೋಗಿಯೊಬ್ಬರು 2004ರಲ್ಲಿ ವಿವಾಹವಾಗಿದ್ದರು. ಮಕ್ಕಳ ಭಾಗ್ಯ ಇರದ ಅವರು ಬಾಡಿಗೆ ತಾಯಿ ಬಳಸಿಕೊಂಡು ಪಾಲಕರಾಗಲು ಬಯಸಿದರು. ಬಾಡಿಗೆ ತಾಯಿಗೆ 33 ವಾರ ತುಂಬಿದಾಗ ಹೆರಿಗೆ ರಜೆ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ಬಾಡಿಗೆ ತಾಯಿ ಸೇವೆ ಮೂಲಕ ಮಗು ಪಡೆಯುವ ಮಹಿಳೆಯರಿಗೆ ರಜೆ ಮಂಜೂರು ಮಾಡುವ ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದ್ದರಿಂದ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು.[ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಗು ಕದ್ದವಳ ಸಾವಿನ ಕತೆ]

ಇದೆಲ್ಲದರ ವಿಚಾರಣೆ ನಡೆಸಿದ ನ್ಯಾಯಾಲಯ ತಾಯ್ತನದ ಸುಖ ಎಲ್ಲರಿಗೂ ಒಂದೇ ಆಗಿರುತ್ತದೆ. ಮಗುವನ್ನು ಪಾಲನೆ-ಪೋಷಣೆ ಮಾಡಲು ಕಾಲಾವಕಾಶ ಅಗತ್ಯವಿರುತ್ತದೆ ಎಂದು ಆದೇಶ ನೀಡಿದ್ದು ಹೆರಿಗೆ ರಜೆ ನೀಡುವಂತೆ ರೈಲ್ವೆ ಇಲಾಖೆಗೆ ಸೂಚನೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai: woman who has attained motherhood through a surrogacy procedure is entitled to six months' maternity leave like any other woman, the Bombay High Court has ruled.
Please Wait while comments are loading...