ಮೊರ್ಬಿ ದುರಂತ ಆಕಸ್ಮಿಕವಲ್ಲ, ಘೋರ ಕೊಲೆ ಎಂದ ಎಎಪಿ

ಅಹಮದಾಬಾದ್, ನ. 01: ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತ ಆಕಸ್ಮಿಕವಲ್ಲ, ಅದೊಂದು ಬಿಜೆಪಿಯ ಭ್ರಷ್ಟ ಆಡಳಿತದಿಂದಾದ ಘೋರ ಕೊಲೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟ ಆಡಳಿತದಿಂದ 130 ಕ್ಕೂ ಹೆಚ್ಚು ಅಮಾಯಕರ ಹತ್ಯೆಯಾಗಿದೆ ಎಂದು ಆರೋಪಿಸಿರುವ ಅವರು, ಘಟನೆಯ ಕುರಿತು ಬಿಜೆಪಿ ಮತ್ತು ಗುಜರಾತ್ ಸರ್ಕಾರದ ನಾಯಕರಿಗೆ ಐದು ಪ್ರಶ್ನೆಗಳನ್ನು ಹಾಕಿದ್ದಾರೆ.

ಗುಜರಾತ್‌ನ ಮೊರ್ಬಿ ನಗರದಲ್ಲಿ ಭಾನುವಾರ ಸಂಜೆ ಮಚ್ಚು ನದಿಯ ತೂಗು ಸೇತುವೆ ಕುಸಿದು 134 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 50 ಮಕ್ಕಳು ಹಾಗೂ 40 ಮಹಿಳೆಯರು ಸೇರಿದ್ದಾರೆ.

"ಇದು ಆಕಸ್ಮಿಕವಲ್ಲ, ಇದು ಬಿಜೆಪಿಯ ಭ್ರಷ್ಟಾಚಾರದಿಂದ ನಡೆದ ಜನರ ಹತ್ಯೆಯಾಗಿದೆ" ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಎಎಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಸೇತುವೆ ನವೀಕರಣಕ್ಕೆ ಟೆಂಡರ್ ಕರೆಯದಿದ್ದದ್ದು ಏಕೆ..?

ಸೇತುವೆ ನವೀಕರಣಕ್ಕೆ ಟೆಂಡರ್ ಕರೆಯದಿದ್ದದ್ದು ಏಕೆ..?

ಘಟನೆಯ ಕುರಿತು ಬಿಜೆಪಿಗೆ ಐದು ಪ್ರಶ್ನೆಗಳನ್ನು ಮುಂದಿಟ್ಟಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ, ಸೇತುವೆಯ ದುರಸ್ತಿ ಮತ್ತು ನಿರ್ವಹಣೆ ಕೆಲಸಕ್ಕೆ ಸೂಕ್ತವಾದ ಸಂಸ್ಥೆಯನ್ನು ಆಯ್ಕೆ ಮಾಡಲು ಯಾವುದೇ ಟೆಂಡರ್ ಕರೆಯದೆ ವಾಚ್ ಮೇಕರ್ ಕಂಪನಿಗೆ ಏಕೆ ಟೆಂಡರ್ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ.

"ಯಾವುದೇ ಸೇತುವೆಗಳನ್ನು ನಿರ್ಮಿಸುವ ಅಥವಾ ಪುನರ್ನಿರ್ಮಾಣ ಮಾಡುವಲ್ಲಿ ಯಾವುದೇ ಪೂರ್ವ ಅನುಭವವನ್ನು ಹೊಂದಿರದ ವಾಚ್ ತಯಾರಿಸುವ ಕಂಪನಿಗೆ ಮೊರ್ಬಿ ಸೇತುವೆಯ ಪುನನಿರ್ಮಾಣದ ಗುತ್ತಿಗೆಯನ್ನು ಏಕೆ ನೀಡಲಾಗಿದೆ? ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು" ಎಂದಿದ್ದಾರೆ.

"ಇಂತಹ ದೊಡ್ಡ ಮತ್ತು ಮಹತ್ವದ ಯೋಜನೆಯ ಗುತ್ತಿಗೆಯನ್ನು ಯಾವುದೇ ಕಂಪನಿಗೆ ಟೆಂಡರ್ ನೀಡದೆ ಏಕೆ ನೀಡಲಾಗಿದೆ? 8 ತಿಂಗಳಲ್ಲಿ ಸೇತುವೆ ಮರು ನಿರ್ಮಾಣವಾಗಬೇಕಿತ್ತು. 5 ತಿಂಗಳೊಳಗೆ ಗುಣಮಟ್ಟವಿಲ್ಲದ ಸೇತುವೆ ನಿರ್ಮಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಕಂಪನಿ ಮಾಲೀಕರ ಹೆಸರೇಕೆ ಉಲ್ಲೇಖಿಸಿಲ್ಲ?

ಎಫ್‌ಐಆರ್‌ನಲ್ಲಿ ಕಂಪನಿ ಮಾಲೀಕರ ಹೆಸರೇಕೆ ಉಲ್ಲೇಖಿಸಿಲ್ಲ?

"ಇಷ್ಟೊಂದು ದೊಡ್ಡ ಅಪಘಾತ ಸಂಭವಿಸಿ, ಇಷ್ಟೊಂದು ಸಾವು ನೋವು ಸಂಭವಿಸಿದ್ದರೂ ಕಂಪನಿ ಮತ್ತು ಕಂಪನಿಯ ಮಾಲೀಕರ ಹೆಸರನ್ನು ಎಫ್‌ಐಆರ್‌ನಲ್ಲಿ ಏಕೆ ನಮೂದಿಸಿಲ್ಲ?" ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಶ್ನಿಸಿದ್ದಾರೆ.

"ಕಂಪನಿಯ ಸಣ್ಣ ಉದ್ಯೋಗಿಗಳು, ಅದರ ಭದ್ರತಾ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಕಂಪನಿ ಮತ್ತು ಅದರ ಮಾಲೀಕರ ವಿರುದ್ಧ ಅಲ್ಲ" ಎಂದು ಸಿಸೋಡಿಯಾ ಬೊಟ್ಟು ಮಾಡಿ ತೋರಿಸಿದ್ದಾರೆ.

ಬಿಜೆಪಿಯ ಭ್ರಷ್ಟಾಚಾರದಿಂದಾದ ಘೋರ ಕೊಲೆ

ಬಿಜೆಪಿಯ ಭ್ರಷ್ಟಾಚಾರದಿಂದಾದ ಘೋರ ಕೊಲೆ

ಮುಂದುವರಿದು, 'ಕಳೆದೆರಡು ದಿನಗಳಿಂದ ಹೊರಬಿದ್ದಿರುವ ಸತ್ಯಾಂಶಗಳಿಂದ ಇದು ಆಕಸ್ಮಿಕವಲ್ಲ, ಆದರೆ ಬಿಜೆಪಿಯ ಭ್ರಷ್ಟಾಚಾರದಿಂದಾಗಿ ನಡೆದಿರುವ ಘೋರ ಕೊಲೆ ಎಂದು ಸ್ಪಷ್ಟವಾಗುತ್ತದೆ' ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ವಾಚ್‌ಮೇಕರ್ ಕಂಪನಿಯು ಕೆಲಸದ ಗುತ್ತಿಗೆ ಪಡೆದ ನಂತರ ಎಷ್ಟು ದೇಣಿಗೆ ಪಡೆದಿದೆ ಎಂಬುದನ್ನು ಬಿಜೆಪಿ ಬಹಿರಂಗಪಡಿಸಬೇಕು ಎಂದು ಮನೀಶ್ ಸಿಸೋಡಿಯಾ ಆಗ್ರಹಿಸಿದ್ದಾರೆ.

"ಬಿಜೆಪಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ಏಕೆಂದರೆ ಗುಜರಾತ್‌ನ ಜನರು ಈ ಪ್ರಶ್ನೆಗಳ ಮೇಲೆ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ" ಎಂದು ಹೇಳಿದ್ದಾರೆ.

ತರಾತುರಿಯಲ್ಲಿ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ನೀಡಿದ್ದು ಏಕೆ?

ತರಾತುರಿಯಲ್ಲಿ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ನೀಡಿದ್ದು ಏಕೆ?

ಬ್ರಿಟಿಷರ ಕಾಲದ ತೂಗು ಸೇತುವೆಯ ನವೀಕರಣ ಕೆಲಸ ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು, ಆದರೆ ಅದನ್ನು ಕೇವಲ 5 ತಿಂಗಳಲ್ಲಿ ಮಾಡಲಾಗಿದೆ. ಇದರ ಜೊತೆಗೆ ಯಾವುದೇ ಫೀಟ್‌ನೆಸ್ ಪ್ರಮಾಣಪತ್ರ ಪಡೆಯದೇ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ.

8 ತಿಂಗಳ ಅವಧಿಯ ಯೋಜನೆಯನ್ನು 5 ತಿಂಗಳಿಗೆ ಮುಗಿಸಿ, 8 ತಿಂಗಳ ಅವಧಿಯ ಯೋಜನೆಯನ್ನು ಒಪ್ಪಲಾಗದಷ್ಟು ಕಳಪೆ ರೀತಿಯಲ್ಲಿ ಪೂರ್ಣಗೊಳಿಸಿ, ಕಳಪೆ ಗುಣಮಟ್ಟದ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ನೀಡಿದ ತರಾತುರಿಗೆ ಕಾರಣವೇನು ಎಂಬುದನ್ನು ಬಿಜೆಪಿ ನಾಯಕರು ವಿವರಿಸಬೇಕು ಎಂದು ಮನೀಶ್ ಸಿಸೋಡಿಯಾ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+