ಹೇಗಿರಲಿದೆ ಈ ವರ್ಷದ 'ಮುಂಗಾರು' ಮಳೆ? ಮುನ್ಸೂಚನೆ ಇಲ್ಲಿದೆ..

ನವದೆಹಲಿ, ಏಪ್ರಿಲ್ 29: ಒಂದು ಕಡೆ ಕೊರೊನಾ ಹೊಡೆತ.. ಇನ್ನೊಂದು ಕಡೆ ಬೇಸಿಗೆಯ ಧಗೆ.. ಇವೆರಡರಿಂದ ಕಂಗಾಲಿರುವ ದೇಶದ ಜನರಿಗೆ ಮತ್ತೊಂದು 'ಸಂತಸ'ವಲ್ಲದ ಸುದ್ದಿ ಇಲ್ಲಿದೆ. ಈ ಬಾರಿಯ ಮುಂಗಾರು ಒಟ್ಟಾರೆ 'ಸಾಮಾನ್ಯ'ವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Recommended Video

      Bengaluru Heavy Rains For Two Days Predicted | Oneindia Kannada

      ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಜುಲೈ ತಿಂಗಳಲ್ಲಿ ಬಹುತೇಕ ಕಡೆ ಮಳೆ ಇರುವುದಿಲ್ಲ. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ 'ಅಧಿಕ' ಮಳೆ ಸುರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

      ಕಳೆದ ವರ್ಷದಂತೆ ಈ ವರ್ಷವೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿ ಅಥವಾ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಸರ್ಕಾರದ ಆಂತರಿಕ ಮೌಲ್ಯಮಾಪಕ ಟಿಪ್ಪಣಿಯಿಂದ ತಿಳಿದು ಬಂದಿದೆ.

      ಸರ್ಕಾರದ ಆಂತರಿಕ ಮೌಲ್ಯಮಾಪಕ ಟಿಪ್ಪಣಿಯಲ್ಲಿರುವ ಅಂಶಗಳು

      ಸರ್ಕಾರದ ಆಂತರಿಕ ಮೌಲ್ಯಮಾಪಕ ಟಿಪ್ಪಣಿಯಲ್ಲಿರುವ ಅಂಶಗಳು

      ಮುಂಗಾರಿನ ಪ್ರಾದೇಶಿಕವಾರು ಮತ್ತು ತಿಂಗಳವಾರು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಹೀಗಿರುವಾಗಲೇ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಿಜೋರಾಂ ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಹಾಗೂ, ತಮಿಳುನಾಡಿನ ದಕ್ಷಿಣ ಭಾಗ ಮತ್ತು ಕೇರಳದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಸರ್ಕಾರದ ಆಂತರಿಕ ಮೌಲ್ಯಮಾಪಕ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

      ಕರ್ನಾಟಕದಲ್ಲಿ ಬೆಳೆಗಳ ಮೇಲೆ ಪರಿಣಾಮ?

      ಕರ್ನಾಟಕದಲ್ಲಿ ಬೆಳೆಗಳ ಮೇಲೆ ಪರಿಣಾಮ?

      ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಮತ್ತು ಮಹಾರಾಷ್ಟ್ರದ ವಾಯುವ್ಯ ಭಾಗಗಳಲ್ಲಿ 50-60% ರಷ್ಟು ಸಂಭವನೀಯತೆಯೊಂದಿಗೆ ಸಾಮಾನ್ಯ ಮಳೆಯಾಗಲಿದೆ. ಇನ್ನು, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಳೆ ಬಹುತೇಕ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಮಳೆಯಾಶ್ರಿತ ಬೆಳೆಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

      ಜೂನ್ ನಿಂದ ಸೆಪ್ಟೆಂಬರ್ ವರೆಗೆ ನೈರುತ್ಯ ಮುಂಗಾರು

      ಜೂನ್ ನಿಂದ ಸೆಪ್ಟೆಂಬರ್ ವರೆಗೆ ನೈರುತ್ಯ ಮುಂಗಾರು

      ಅಷ್ಟಕ್ಕೂ, ನೈರುತ್ಯ ಮುಂಗಾರು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರಲಿದ್ದು, 95-104% ರಷ್ಟಿರಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಏಪ್ರಿಲ್ 15 ರಂದು ತಿಳಿಸಿತ್ತು. ಮೇ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಪ್ರಾದೇಶಿಕವಾರು ಮತ್ತು ತಿಂಗಳವಾರು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಲಿದೆ.

      ಸೌತ್ ಏಷ್ಯಾ ಸೀಸನಲ್ ಔಟ್ ಲುಕ್ ಫೋರಮ್ ನಿಂದಲೂ ಮುನ್ಸೂಚನೆ

      ಸೌತ್ ಏಷ್ಯಾ ಸೀಸನಲ್ ಔಟ್ ಲುಕ್ ಫೋರಮ್ ನಿಂದಲೂ ಮುನ್ಸೂಚನೆ

      WMO ನೇತೃತ್ವದ ಹಲವು ಅಂತಾರಾಷ್ಟ್ರೀಯ ಏಜೆನ್ಸಿಗಳನ್ನು ಒಳಗೊಂಡಿರುವ ಸೌತ್ ಏಷ್ಯಾ ಸೀಸನಲ್ ಔಟ್ ಲುಕ್ ಫೋರಮ್ ಕೂಡ ಭಾರತದ ಬಹುಪಾಲು ಭಾಗಗಳಲ್ಲಿ 'ಸಾಮಾನ್ಯ' ಮಳೆಯಾಗಲಿದೆ ಎಂದೇ ಮುನ್ಸೂಚನೆ ನೀಡಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+