ರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕ
ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ ಶುಕ್ರವಾರ ಮಧ್ಯಾಹ್ನ ಚರ್ಚೆ, ಭಾಷಣ ಮುಂದುವರೆದಿದೆ. ರಾಹುಲ್ ಗಾಂಧಿ ಅವರ ಭಾಷಣ ಕೇಳಲು ಎಲ್ಲರೂ ಕಾತುರದಿಂದ ಕಾದಿದ್ದರು.
ಭಾಷಣದುದ್ದಕ್ಕೂ ಎನ್ಡಿಎ ಹಾಗೂ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಭಾಷಣ ಮುಗಿಸುವ ಮುನ್ನ ಹೇಳಿದ ಧರ್ಮದ ಪಾಠ. ಬಿಜೆಪಿ, ಆರೆಸ್ಸೆಸ್ ಕುರಿತ ಒಲವಿನ ಪಾಠ ಕೇಳಿ ಎಲ್ಲರೂ ಹುಬ್ಬೇರಿಸಿದರು.
ಇದಾದ ಬಳಿಕ, ಪ್ರಧಾನಿ ಮೋದಿ ಅವರ ಬಳಿಗೆ ಬಂದ ರಾಹುಲ್ ಗಾಂಧಿ ಅವರು ಮೋದಿ ಅವರಿಗೆ ಹಸ್ತ ಲಾಘವ ನೀಡಿ ಕೆಲವು ಸೆಕೆಂಡ್‌ಗಳ ನಗುತ್ತಾ ಮಾತನಾಡಿದರು. ನಂತರ ಮೋದಿ ಅವರನ್ನು ಆಲಂಗಿಸಿಕೊಂಡು ತಮ್ಮ ಸ್ಥಾನಕ್ಕೆ ಮರಳಿದರು. ತಮ್ಮ ಸ್ಥಾನದಲ್ಲಿ ಕುಳಿತುಕೊಂಡು ಕಣ್ ಮಿಟುಕಿಸಿದರು.
ಮೋದಿ ಹಾಗೂ ಬಿಜೆಪಿ ಆರೆಸ್ಸೆಸ್ ನಿಂದ ನನಗೆ ಶಿವ, ಹಿಂದೂ, ಭಾರತೀಯ ಧರ್ಮದ ಪಾಠ ಮಾಡಿದ್ರಿ, ನಿಮಗೆ ನಾನು ಪಪ್ಪು ಇರಬಹುದು, ಆದರೆ, ನಿಮ್ಮ ಬಗ್ಗೆ ಒಲವಿದೆ. ಇದಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದು ರಾಹುಲ್ ಹೇಳಿದರು. ರಾಹುಲ್ ಅವರ ಭಾಷಣಕ್ಕಿಂತ ಅವರು ನೀಡಿದ ಅಪ್ಪುಗೆ ಹಾಗೂ ಕಣ್ ಮಿಟುಕಿಸಿದ ರೀತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ಬಂದಿವೆ.

ರಾಹುಲ್ ನಡೆಗೆ ಅಚ್ಚರಿ
ಪ್ರಧಾನಿ ಮೋದಿ ಅವರ ಬಳಿಗೆ ಬಂದ ರಾಹುಲ್ ಗಾಂಧಿ ಅವರು ಮೋದಿ ಅವರಿಗೆ ಹಸ್ತ ಲಾಘವ ನೀಡಿ ಕೆಲವು ಸೆಕೆಂಡ್‌ಗಳ ನಗುತ್ತಾ ಮಾತನಾಡಿದರು. ನಂತರ ಮೋದಿ ಅವರನ್ನು ಆಲಂಗಿಸಿಕೊಂಡು ತಮ್ಮ ಸ್ಥಾನಕ್ಕೆ ಮರಳಿದರು. ತಮ್ಮ ಸ್ಥಾನದಲ್ಲಿ ಕುಳಿತುಕೊಂಡು ಕಣ್ ಮಿಟುಕಿಸಿದರು.
|
ಮೋದಿಯನ್ನು ಅಪ್ಪಿಕೊಂಡು ರಾಹುಲ್ ಹೇಳಿದ್ದೇನು?
ಮೋದಿಯನ್ನು ಅಪ್ಪಿಕೊಂಡು ರಾಹುಲ್ ಹೇಳಿದ್ದೇನು? ಎಂಬ ಕುತೂಹಲದ ಪ್ರಶ್ನೆ ಎದ್ದಿದೆ. ರಾಹುಲ್ ಅವರು ಮೋದಿ ಕಿವಿಯಲ್ಲಿ 'ಒಳ್ಳೆ ಕೆಲ್ಸ ಮಾಡುತ್ತೀದ್ದೀರಿ' ಎಂದಷ್ಟೇ ಹೇಳಿರಬೇಕು.
|
ಕಪಾಳ ಮೋಕ್ಷದಿಂದ ನಡುಕವಿಲ್ಲ
ಕಪಾಳ ಮೋಕ್ಷದಿಂದ ನಡುಕವಿಲ್ಲ, ಅದರೆ, ಪ್ರೀತಿಯಿಂದ ಭೀತಿ ಉಂಟಾಗುತ್ತದೆ.
|
ಇದು ವೈಲ್ಡ್ ಸ್ಟೋನ್ ಜಾಹೀರಾತು
ಇದು ವೈಲ್ಡ್ ಸ್ಟೋನ್ ಜಾಹೀರಾತು, ನಿಜವಾಗಲೂ ನಂಬಿ
|
ಮೊದಲು ಏಟು ಆಮೇಲೆ ಪ್ರೀತಿ
ಮೋದಿ ಅವರ ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸಿದ ರಾಹುಲ್ ಗಾಂಧಿ ಅವರು ಸೋದರ ಪ್ರೀತಿಯ ಬಗ್ಗೆ ನಿಮ್ಮ ನಡೆ ಮೆಚ್ಚಬೇಕಾಗುತ್ತದೆ.
|
ಮೋದಿ ಅಪ್ಪುಗೆ ಸಾಧನೆ ಮುರಿದ ರಾಹುಲ್
ವಿಶ್ವದ ಅನೇಕ ನಾಯಕರನ್ನು ಅಪ್ಪಿಕೊಂಡಿದ್ದ ಮೋದಿ ಅವರನ್ನು ಅಪ್ಪಿಕೊಂಡ ರಾಹುಲ್ ಸಾಧನೆ ಮಾಡಿದ್ದಾರೆ.
|
ಮೋದಿ ಕಿವಿಯಲ್ಲಿ ಹೇಳಿದ್ದೇನು?
ಮುಂದಿನ ಚುನಾವಣೆ ನಾನು ಗೆಲ್ತೀನಿ ಪ್ಲೀಸ್ ಎಂದು ರಾಹುಲ್ ಗಾಂಧಿ ಹೇಳಿರಬಹುದು.












Click it and Unblock the Notifications