• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧಿವೇಶನದ 2ನೇದಿನದ ಅಪ್ಡೇಟ್ಸ್ : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಎನ್ಡಿಎ ಅಭ್ಯರ್ಥಿ

|

ನವದೆಹಲಿ, ಜೂನ್ 18: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಮೋದಿ ಸರ್ಕಾರ್ 2 ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಸತ್ ಅಧಿವೇಶನ ಜೂನ್ 17ರಿಂದ ಆರಂಭಗೊಂಡಿದೆ. ಸಂಸತ್ ಕಲಾಪದ ಎರಡನೇ ದಿನದ ಅಪ್ಡೇಟ್ಸ್ ಇಲ್ಲಿದೆ.

ರಾಜಸ್ಥಾನದ ಕೋಟಾ ಬಂಡಿ ಲೋಕಸಭಾ ಕ್ಷೇತ್ರದ ಎರಡು ಬಾರಿ ಸಂಸದ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಓಂ ಬಿರ್ಲಾ ಅವರಿಗೆ 10 ಪಕ್ಷಗಳ ಬೆಂಬಲ ಸಿಕ್ಕಿದೆ.

Monsoon session 2019 : 17th Lok Sabha Parliament Live updates on June 18

ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಬಜೆಟ್, ತ್ರಿವಳಿ ತಲಾಕ್ ಸೇರಿದಂತೆ ಅನೇಕ ವಿಧೇಯಕಗಳ ಕುರಿತು ಚರ್ಚೆಯಾಗಲಿದೆ. ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ನೂತನ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ನಂತರ ಲೋಕಸಭಾ ಸ್ಪೀಕರ್, ಉಪ ಸ್ಪೀಕರ್ ಆಯ್ಕೆಯಾಗಲಿದೆ.

ಅಧಿವೇಶನ ದಿನ 1 LIVE : ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಬಹುತೇಕ ಖಚಿತ

ಲೋಕಸಭೆಯಲ್ಲಿ ಎರಡನೇ ಅವಧಿಗೆ ಪ್ರತಿಪಕ್ಷ ಇಲ್ಲದಂಥ ಪರಿಸ್ಥಿತಿ ಉಂಟಾಗಿದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇ.10 ಸೀಟು ಸಹ ಗೆಲ್ಲಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. 52 ಸ್ಥಾನ ಗೆದ್ದಿರುವ ಕಾಂಗ್ರೆಸ್ಸಿಗೆ ಒಂದೆರಡು ಸ್ಥಾನಗಳ ಕೊರತೆ ಎದುರಾಗಿದೆ. ಜೊತೆಗೆ ಲೋಕಸಭೆ ನಾಯಕನ ಆಯ್ಕೆ ಗೊಂದಲವೂ ಕಾಂಗ್ರೆಸ್ಸಿಗೆ ಉಂಟಾಗಿದೆ.

Newest First Oldest First
4:44 PM, 18 Jun
ಉತ್ತರಪ್ರದೇಶದ ಸಂಸದರಾದ ಕೇಶ್ರಿ ದೇವಿ ಪಟೇಲ್(ಬಿಜೆಪಿ), ರಮಪತಿ ರಾಮ್ ತ್ರಿಪಾಠು (ಬಿಜೆಪಿ), ಸಂಗೀತಾ ಅಜಾದ್(ಬಿಎಸ್ ಪಿ), ಶ್ಯಾಮ್ ಯಾದವ್ ಸಿಂಗ್(ಬಿಎಸ್ಪಿ), ಅನುರಾಗ್ ಶರ್ಮ(ಬಿಜೆಪಿ), ಪುಷ್ಪೇಂದ್ರ ಸಿಂಗ್ ಚಾಂಡೆಲ್ (ಬಿಜೆಪಿ) ಅವರಿಂದ ಪ್ರಮಾಣ ವಚನ ಸ್ವೀಕಾರ.
4:43 PM, 18 Jun
ಉತ್ತರಪ್ರದೇಶದ ಆಜಂಗಢದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಮಾಣ ವಚನ ಸ್ವೀಕರಿಸಿದರು
4:43 PM, 18 Jun
ಭೋಜ್ ಪುರಿ ನಟ, ಗೋರಖ್ ಪುರ್ ಸಂಸದ ರವಿ ಕಿಷನ್ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.
4:40 PM, 18 Jun
ವಂದೇ ಮಾತರಂ ಜೈಕಾರದ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಸಂಸದ ಶಫಿಕರ್ ರಹ್ಮಾನ್ ಬರ್ಕ್, ವಂದೇ ಮಾತರಂ ಇಸ್ಲಾಂ ವಿರುದ್ಧವಾಗಿದೆ ಎಂದಿದ್ದಾರೆ.
4:39 PM, 18 Jun
ನಂತರ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
4:38 PM, 18 Jun
ರಾಯ್ ಬರೇಲಿ ಸಂಸದೆ ಸೋನಿಯಾ ಗಾಂಧಿ ಅವರು 17ನೇ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.
3:35 PM, 18 Jun
ಬಿಜೆಪಿ ಸಂಸದ ಫಿರೋಜ್ ವರುಣ್ ಗಾಂಧಿ ಅವರಿಂದ ಪ್ರಮಾಣ ವಚನ ಸ್ವೀಕಾರ
1:45 PM, 18 Jun
ಅನಾರೋಗ್ಯದ ನಡುವೆಯೂ ಸಮಾಜವಾದಿ ಪಕ್ಷದ ಮುಖಂಡ, ಸಂಸದ ಮುಲಾಯಂ ಸಿಂಗ್ ಯಾದವ್ ಅವರಿಂದ ಪ್ರಮಾಣ ವಚನ ಸ್ವೀಕಾರ
1:44 PM, 18 Jun
ಎಐಎಂಐಎಂ ಪಕ್ಷದ ಸಂಸದ ಅಸಾಸುದ್ದೀನ್ ಓವೈಸಿ ಅವರಿಂದ ಪ್ರಮಾಣ ವಚನ ಸ್ವೀಕಾರದ ವೇಳೆ ಬಿಜೆಪಿ ಸಂಸದರಿಂದ ವಂದೇ ಮಾತರಂ ಜೈಕಾರ
1:31 PM, 18 Jun
ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
1:30 PM, 18 Jun
ಓಂ ಬಿರ್ಲಾಗೆ ಬಿಜೆಡಿ, ವೈಎಸ್ಸಾರ್ ಪಕ್ಷಗಳ ಬೆಂಬಲ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿರುವ ಓಂ ಬಿರ್ಲಾ ಅವರಿಗೆ ಬಿಜು ಜನತಾ ದಳ, ಎಐಡಿಎಂಕೆ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಬೆಂಬಲ ವ್ಯಕ್ತವಾಗಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ, ಮಿಜೋ ನ್ಯಾಷನಲ್ ಫ್ರಂಟ್, ಲೋಕ್ ಜನಶಕ್ತಿ ಪಾರ್ಟಿ, ಜೆಡಿಯು, ಅಪ್ನಾ ದಳ್ ನಿಂಡಲೂ ಬೆಂಬಲ ವ್ಯಕ್ತವಾಗಿದೆ.
1:11 PM, 18 Jun
ಮಾಜಿ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಅವರು ಹರ್ಯಾಣದ ಹಿಸಾರ್ ನಿಂದ ಗೆದ್ದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬ್ರಿಜೇಂದ್ರ ಅವರ ತಾಯಿ, ಮಾಜಿ ಕೇಂದ್ರ ಸಚಿವ ಬಿರೇಂದ್ರ ಸಿಂಗ್ ಅವರ ಪತ್ನಿಪ್ರೇಮ್ ಲತಾ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು.
1:11 PM, 18 Jun
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಅವರ ಪತ್ನಿ ರೀನಾ ಪಾಸ್ವಾನ್ ಅವರು ತಮ್ಮ ಪುತ್ರ ಎರಡನೇ ಬಾರಿಗೆ ಸಂಸದರಾಗಿರುವ ಚಿರಾಗ್ ಅವರು ಪ್ರಮಾಣ ವಚನ ಸ್ವೀಕರಿಸುವುದನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು.
12:51 PM, 18 Jun
ಜೈಪುರ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
12:50 PM, 18 Jun
ಆಮ್ ಆದ್ಮಿ ಪಕ್ಷದ ಸಂಗ್ರೂರ್ ಕ್ಷೇತ್ರದ ಸಂಸದ ಭಗವಂತ್ ಮಾನ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
12:47 PM, 18 Jun
ಪ್ರಮಾಣ ವಚನ ಸ್ವೀಕರಿಸುವ ವೇಳೆ ಪ್ರಮಾದ: ಸನ್ನಿ ಡಿಯೋಲ್ ಅವರು ಇಂಗ್ಲೀಷ್ ಭಾಷೆಯಲ್ಲಿ ಪ್ರತಿಜ್ಞಾ ವಿಧಿ ಓದಿದರು. ಈ ಸಂದರ್ಭದಲ್ಲಿ uphold the sovereignty and integrity of the country ಎಂದು ಹೇಳುವ ಬದಲು withhold the sovereignty and integrity of the country ಎಂದು ಹೇಳಿದರು. ಆದರೆ, ತಕ್ಷಣವೇ ತಪ್ಪು ತಿದ್ದಿಕೊಂಡು ಮತ್ತೊಮ್ಮೆ ಸರಿಯಾಗಿ ಓದಿದರು.
12:46 PM, 18 Jun
ಸಂಸತ್ ಕಲಾಪದ ಮೊದಲೆರಡು ದಿನಗಳಲ್ಲಿ 542 ನೂತನ ಸದಸ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ನಂತರ ಲೋಕಸಭಾ ಸ್ಪೀಕರ್, ಉಪ ಸ್ಪೀಕರ್ ಆಯ್ಕೆಯಾಗಲಿದೆ.
12:45 PM, 18 Jun
17ನೇ ಲೋಕಸಭಾ ಅಧಿವೇಶನ ಆರಂಭಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ಸೋಮವಾರ(ಜೂನ್ 17)ದಂದು ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ವೀರೇಂದ್ರ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
12:45 PM, 18 Jun
ರಾಜಸ್ಥಾನದ ಕೋಟಾ ಬಂಡಿ ಲೋಕಸಭಾ ಕ್ಷೇತ್ರದ ಎರಡು ಬಾರಿ ಸಂಸದ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Monsoon session 2019 : The first session of the 17th Lok Sabha commenced on June 17. BJP MP Virendra Kumar took oath as the Protem Speaker of the 17th Lok Sabha, at Rashtrapati Bhawan. NDA has named Rajasthan Kota MP Om Birla as NDA candidate for speaker post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more