India Monsoon: 62 ವರ್ಷಗಳ ನಂತರ ಒಂದೇ ದಿನ ಈ 2 ನಗರಗಳಲ್ಲಿ ಮುಂಗಾರು ಸಕ್ರಿಯ

ಬೆಂಗಳೂರು, ಜೂನ್ 25: ದೇಶದ ಎರಡು ಪ್ರಮುಖ ನಗರಗಳು ಎನ್ನಲಾಗುವ ನವದೆಹಲಿ ಮತ್ತು ಮುಂಬೈ ನಗರಗಳು ಒಂದೇ ದಿನ ಅಧಿಕ ಮಳೆಗೆ ಸಾಕ್ಷಿಯಾಗಿವೆ. ಭಾನುವಾರ ಬೆಳಗ್ಗೆ ಚುರುಕುಗೊಂಡಿರುವ ಮುಂಗಾರು ಮಳೆ ಇವೆರಡು ನಗರಗಳಲ್ಲಿ ಅಬ್ಬರಿಸಿದೆ. ಹೀಗಾಗಿರುವುದು ಕಳೆದ 62 ವರ್ಷಗಳಲ್ಲಿಯೇ ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಭಾನುವಾರ ಬೆಳಗ್ಗೆ 8.30 ರವರೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ದೆಹಲಿಯ ಸಫ್ದರ್‌ಜಂಗ್ ನಲ್ಲಿ ಒಟ್ಟು 48.3 ಮಿಮೀ ಮಳೆ ದಾಖಲಾಗಿದೆ. ಈ ಮೂಲಕ ನೈಋತ್ಯ ಮಾನ್ಸೂನ್ ಇಂದು25 ಜೂನ್ ರಿಂದ ದೆಹಲಿ ಮಾತ್ರವಲ್ಲದೇ ಮುಂಬೈ ನಗರದಲ್ಲೂ ಸಕ್ರಿಯವಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸಿತು.

Monsoon Rain Active in Same day in Mumbai and New Delhi After 62 years, Says IMD

ವಾಡಿಕೆಯಂತೆ ಮುಂಬೈ ನಗರಕ್ಕೆ ಮುಂಗಾರು 14 ದಿನ ವಿಳಂಬವಾದರೆ, ದೆಹಲಿಗೆ ಎರಡು ದಿನ ಮುಂಚಿತ ಸುರಿದಿದೆ. 1961 ರಿಂದ 2019ವರೆಗಿನ ನಿರಂತರ ಅಂಕಿ ಅಂಶ ನೋಡಿದರೆ ಮುಂಬೈಗೆ ಮುಂಗಾರು ಮಳೆ ಜೂನ್ 11ಕ್ಕೆ ಆಗಮಿಸಿದರೆ, ದೆಹಲಿಗೆ ಇದೇ ಜೂನ್ 27ರಂದು ಆಗಮಿಸಬೇಕಿತ್ತು. ಇದೀಗ ಇವೆರಡು ನಗರಗಳಲ್ಲಿ ಒಂದೇ ದಿನ ಮಳೆ ಅಬ್ಬರಿಸಲು ಪ್ರಾರಂಭಿಸಿವೆ. ಈ ಹಿಂದೆ 1961ರ ಜೂನ್ ಜೂನ್ 21 ರಂದು ಮುಂಬೈ-ದೆಹಲಿಯಲ್ಲಿ ಒಟ್ಟೊಟ್ಟಿಗೆ ಮಳೆ ಆರಂಭವಾಗಿತ್ತು. ಅದನ್ನು ಬಿಟ್ಟರೆ ಸುಮಾರು 62 ವರ್ಷಗಳ ಬಳಿಕ ಮತ್ತೆ ಒಂದೇ ದಿನ ಅಧಿಕ ಮಳೆ ಬಿದ್ದಿವೆ.

ಸೋಮವಾರವೂ ಅಧಿಕ ಮಳೆ: ಆರೇಂಜ್ ಅಲರ್ಟ್

ಈ ನಗರಗಳಿಗೆ ನಿರಂತರ ಮಳೆ ಮುನ್ಸೂಚನೆ ಇದೆ. ಸೋಮವಾರ ಹೆಚ್ಚಿನ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುಂಬೈ-ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ನಂತರ ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಭಾನುವಾರ ದೆಹಲಿಯಾದ್ಯಂತ ಮಳೆ ಆಗಿದ್ದರಲ್ಲಿ ಲೋಧಿ ರಸ್ತೆಯಲ್ಲಿ 59.6 ಮಿಮೀ, ಅಯನಗರ 54 ಮಿಮೀ, ರಿಡ್ಜ್ 27.4 ಮಿಮೀ ಮತ್ತು ಪಾಲಂ 29.6 ಮಿಮೀ ಮಳೆ ದಾಖಳಾಗಿದೆ. ಜೂನ್‌ನಲ್ಲಿ ದೆಹಲಿಯಲ್ಲಿ ವಾಡಿಕೆ 74.1 ಮಿಮೀ ನಷ್ಟು ಮಳೆ ಆಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತಲೂ ಹೆಚ್ಚು ಮಳೆ ಮುಂದಿನ ದಿನಗಳಲ್ಲಿ ಆಗಲಿದೆ.

Monsoon Rain Active in Same day in Mumbai and New Delhi After 62 years, Says IMD

ಒಂದು ದಿನದದಲ್ಲಿ ಆಗುವ ಮಳೆಯ (24-ಗಂಟೆ) ವಿವರ ನೋಡುವದಾದರೆ 0- 2.4 ಮಿಮೀ ನಷ್ಟು ಮಳೆ ಆದರೆ ಅದನ್ನು 'ಅತ್ಯಂತ ಲಘು' ಮಳೆ ಎಂದು ವರ್ಗೀಕರಿಸಲಾಗುತ್ತದೆ. 2.5 ಮಿಮೀ -15.5 ಮಿಮೀ ನಡುವಿನ ಮಳೆಗೆ ಹಗುರ ಮಳೆ ಅಂತಲೂ, 15.6 ಮಿಮಿ ಯಿಂದ 64.4ಮಿಮೀ ಮಧ್ಯದ ಮಳೆಗೆ 'ಸಾಧಾರಣ' ಮತ್ತು 64.4 ಮಿಮಿಗಿಂತ ಅಧಿಕ ಮಳೆಯಾದರೆ ಅದನ್ನು ಭಾರೀ ಮಳೆ ಎಂದು ಐಎಂಡಿ ಗುರುತಿಸುತ್ತದೆ.

ದೆಹಲಿಯಲ್ಲಿ ನಾಳೆ ಸೋಮವಾರ ಭಾರೀ ಮಳೆ ಆಗಲಿದೆ. ನಂತರ ಮಂಗಳವಾರ ಮತ್ತು ಬುಧವಾರವೂ ಲಘು ಮಳೆ ಆಗುವ ಸಾಧ್ಯತೆ ಇದೆ. ಕೆಲವೆಡೆ ತುಂತುರು ಮಳೆ ಶುಕ್ರವಾರದವರೆಗೆ ಮುಂದುವರಿಯಬಹುದು. ಕಳೆದ ವರ್ಷ ಜೂನ್ 30 ರಂದು ದೆಹಲಿಯಲ್ಲಿ ಮಳೆ ಅತ್ಯಧಿಕ ಮಳೆ ದಾಖಲಾಗಿತ್ತು.

ದೆಹಲಿ ತಾಪಮಾನ- ಗಾಳಿ ಗುಣಮಟ್ಟ ಹೇಗಿದೆ?

ಮಳೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ 23.1° ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ ಐದು ಡಿಗ್ರಿ ಕಡಿಮೆ ಎನ್ನಲಾಗಿದೆ. ಒಂದು ದಿನದ ಹಿಂದೆ ಇದು 30.4°C ಆಗಿತ್ತು. ಶನಿವಾರ ದೆಹಲಿಯಲ್ಲಿ 37.4 ಡಿಸೆ ಗರಿಷ್ಠ ತಾಪಮಾನ ದಾಖಲಾಗಿತ್ತು. ಭಾನುವಾರದ ಮುನ್ಸೂಚನೆ ಪ್ರಕಾರ, ಗರಿಷ್ಠ ತಾಪಾಮನ 32° ಡಿಸೆ ದಾಖಲಾಗಬಹುದು ಎನ್ನಲಾಗಿದೆ.

ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಭಾನುವಾರ ಬೆಳಗ್ಗೆ 10 ಗಂಟೆಗೆ 162 AQI ಇತ್ತು. ಶನಿವಾರ ಸಂಜೆ 4 ಗಂಟೆಗೆ 169 AQI ನಷ್ಟಿತ್ತು. ಈ ಸೂಚ್ಯಂಕವು ಸೋಮವಾರ ತೃಪ್ತಿದಾಯಕ (100 AQI) ಶ್ರೇಣಿಗಿಂತ ಕಡಿಮೆಯಾಗುವ ಲಕ್ಷಣಗಳು ಇವೆ ಎಂದು ಮುನ್ಸೂಚನೆ ದೊರೆತಿದೆ.

ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದ ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ್ ಜಮ್ಮು ಮತ್ತು ಕಾಶ್ಮೀರದ ಹಾಗೂ ಇನ್ನಿತರ ರಾಜ್ಯಗಳಲ್ಲಿ ಮುಂಗಾರು ಸಕ್ರಿಯಗೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+