ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ ಅಂತ್ಯದವರೆಗೂ ಮುಂಗಾರು ವಿಸ್ತರಣೆ: ಎಲ್ಲೆಲ್ಲಿ ಮಳೆಯಾಗುತ್ತೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 4: ಪ್ರತಿ ವರ್ಷವೂ ಸಾಮಾನ್ಯವಾಗಿ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲವಾರದಲ್ಲೇ ಮುಂಗಾರು ಪ್ರಭಾವ ರಾಜ್ಯಾದ್ಯಂ ಕಡಿಮೆಯಾಗುತ್ತಿತ್ತು.

ಆದರೆ ಈ ಬಾರಿ ಅಕ್ಟೋಬರ್ ಅಂತ್ಯದವರೆಗೂ ಮುಂಗಾರು ವಿಸ್ತರಣೆಯಾಗಿದ್ದು, ರಾಜ್ಯಾದ್ಯಂತ ಇನ್ನೂ ಸುಮಾರು 20ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬರಪರಿಹಾರ ವಿಳಂಬ: ಇದೇ ಮೊದಲ ಬಾರಿಗೆ ಕ್ಷಮೆಯಾಚಿಸಿದ ಸಚಿವ ಬರಪರಿಹಾರ ವಿಳಂಬ: ಇದೇ ಮೊದಲ ಬಾರಿಗೆ ಕ್ಷಮೆಯಾಚಿಸಿದ ಸಚಿವ

ಕಳೆದ 59 ವರ್ಷಗಳಲ್ಲೇ ಇದು ದಾಖಲೆ ಸೃಷ್ಟಿಸಿದೆ. ಅಕ್ಟೋಬರ್ ಮಧ್ಯದಲ್ಲಿ ಹಿಂಗಾರು ಪ್ರಾರಂಭವಾಗುತ್ತಿತ್ತು.

 ಅಕ್ಟೋಬರ್ 10ರವರೆಗೂ ಭಾರಿ ಮಳೆ

ಅಕ್ಟೋಬರ್ 10ರವರೆಗೂ ಭಾರಿ ಮಳೆ

ಅಕ್ಟೋಬರ್ 10ರವರೆಗೂ ಮುಂಗಾರು ಕೊನೆಗೊಳ್ಳುವ ಸೂಚನೆ ಇಲ್ಲ, ಜೂನ್‌ನಲ್ಲಿ ಕೇರಳದ ಕರಾವಳಿಯಿಂದ ಪ್ರವೇಶಿಸಿರುವ ಮುಂಗಾರು , ಸೆಪ್ಟೆಂಬರ್ ಮೊದಲ ವಾರದಲ್ಲಿ ಪಶ್ಚಿಮ ರಾಜಸ್ತಾನದಿಂದ ಮುಕ್ತಾಯವಾಗಲು ಪ್ರಾರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.

 ಮುಂಗಾರು ಎಷ್ಟು ತೀವ್ರವಾಗಲಿದೆ ಎಂದು ಅಂದಾಜಿಸಲು ಸಾಧ್ಯವಾಗಿಲ್ಲ

ಮುಂಗಾರು ಎಷ್ಟು ತೀವ್ರವಾಗಲಿದೆ ಎಂದು ಅಂದಾಜಿಸಲು ಸಾಧ್ಯವಾಗಿಲ್ಲ

ಭಾರತೀಯ ಹವಾಮಾನ ಇಲಾಖೆ ಸಂಖ್ಯಾಶಾಸ್ತ್ರೀಯ ಮಾದರಿಯ ಆಧಾರದಲ್ಲಿ ಮುಂಗಾರು ಮತ್ತು ಇತರೆ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ. ಆದರೆ ಮುಂಗಾರು ಎಷ್ಟು ಪ್ರಬಲವಾಗಿರಲಿದೆ ಎಂದು ಅಂದಾಜಿಸಲು ಸಾಧ್ಯವಾಗಿಲ್ಲ.

ಬೆಂಗಳೂರಲ್ಲಿ ಸಂಜೆ ಒಳಗೆ ಮನೆಗೆ ಸೇರ್ಕೊಳ್ಳಿ, ಭಾರಿ ಮಳೆ ಸಾಧ್ಯತೆಬೆಂಗಳೂರಲ್ಲಿ ಸಂಜೆ ಒಳಗೆ ಮನೆಗೆ ಸೇರ್ಕೊಳ್ಳಿ, ಭಾರಿ ಮಳೆ ಸಾಧ್ಯತೆ

 ಹಿಂಗಾರು ಸ್ವಲ್ಪ ತಡ

ಹಿಂಗಾರು ಸ್ವಲ್ಪ ತಡ

ಮುಂಗಾರು ಅಕ್ಟೋಬರ್ ಅಂತ್ಯದ ವರೆಗೂ ಮುಂದುವರೆಯುವುದರಿಂದ ಹಿಂಗಾರು ಆಗಮನ ತಡವಾಗಲಿದೆ. ಸಾಮಾನ್ಯವಾಗಿ ಹಿಂಗಾರು ತಮಿಳುನಾಡಿನಲ್ಲಿ ಮೊದಲು ಆರಂಭಗೊಂಡು ಬಳಿಕ ಕರ್ನಾಟಕಾದ್ಯಂತ ಮಳೆ ಬರುತ್ತಿತ್ತು. ಈಬಾರಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಅಷ್ಟಾಗಿ ಬೀಳದ ಕಾರಣ ಹಿಂಗಾರು ಮಳೆ ವಿಪರೀತವಾಗಬಹುದು ಎಂದು ಅಂದಾಜಿಸಲಾಗಿದೆ. ಕಳೆದ 59 ವರ್ಷಗಳಲ್ಲಿ ಮೊದಲ ಬಾರಿಗೆ ಮುಂಗಾರು ಅಕ್ಟೋಬರ್ ವರೆಗೆ ವಿಸ್ತರಣೆಯಾಗಿದೆ.

 ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನ ಭರ್ಜರಿ ಮಳೆ

ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನ ಭರ್ಜರಿ ಮಳೆ

ಅಕ್ಟೋಬರ್ ಅಂತ್ಯದವರೆಗೂ ಮುಂಗಾರು ಮುಂದುವರೆಯಲಿದ್ದು, ಇನ್ನೂ ನಾಲ್ಕು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 1960ರಿಂದ ಪರಿಗಣಿಸಿದರೆ , 2007ರಲ್ಲಿ ಒಮ್ಮೆ ಅಕ್ಟೋಬರ್ 1ಕ್ಕೆ ಮುಂಗಾರು ಕೊನೆಯಾಗಲು ಪ್ರಾರಂಭವಾಗಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು. ಅದಾದ ಬಳಿಕ ವರ್ಷವೇ ಮುಂಗಾರು ಇನ್ನೂ ಮುಕ್ತಾಯವಾಗಿಲ್ಲ. ಕರ್ನಾಟಕ, ಬಿಹಾರ ಸೇರಿ ಹಲವು ಭಾಗಗಳಲ್ಲಿ ಮಳೆ ಮುಂದುವರೆದಿದೆ.

English summary
The monsoon season was generally reduced by the end of August or early September each year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X