• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರಾಂತ್ಯದಲ್ಲಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಳೆ

|

ಮುಂಬೈ, ಜೂನ್ 13: ಮಹಾರಾಷ್ಟ್ರಕ್ಕೆ ಮುಂಗಾರು ಪ್ರವೇಶವಾಗಿದ್ದು, ವಾರಾಂತ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

   Haveri people neglect all the rules and participate in Bandi Run | Haveri | Oneindia Kannada

   ಹಾಗೆಯೇ ಉತ್ತರ ಪ್ರದೇಶದ ಬಿಜ್ನೋರ್, ಮೊರದಾಬಾದ್, ಪಿಲಿಭಿಟ್, ಆಮ್ರೋಹಾ, ರಾಮ್‌ಪುರ್, ಬರೇಲಿ, ಶಹಜಹಾನ್‌ಪುರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ.

   ಮಹಾರಾಷ್ಟ್ರದ ಸೋಲಾರ್‌ಪುರ, ರತ್ನಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಮುಂಗಾರು ಜೂನ್ 13 ಹಾಗೂ 14ರಂದು ಮುಂಬೈ, ಥಾನೆ, ಪಾಲ್ಘರ್‌ನಲ್ಲಿ ಮಳೆ ಬೀಳಲಿದೆ.

   ಬೆಂಗಳೂರಿನಲ್ಲಿ ಗಾಳಿ ಸಮೇತ ಭಾರಿ ಮಳೆ: ರಾಜ್ಯಾದ್ಯಂತ ಮುಂಗಾರು ಚುರುಕು

   ಗಾಳಿಯು ಗಂಟೆಗೆ 30-40 ಕಿ,ಮೀ ವೇಗದಲ್ಲಿ ಬೀಸಲಿದೆ. ಮುಂದಿನ 48 ಗಂಟೆಯಲ್ಲಿ ವಿಪರೀತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೇರಳ, ಆಂಧ್ರಪ್ರದೇಶದಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

   ಶನಿವಾರ ಜೋರು ಮಳೆ, ಭಾನುವಾರಕ್ಕೆ ಯೆಲ್ಲೋ ಅಲರ್ಟ್

   ಶನಿವಾರ ಜೋರು ಮಳೆ, ಭಾನುವಾರಕ್ಕೆ ಯೆಲ್ಲೋ ಅಲರ್ಟ್

   ಮುಂಬೈನಲ್ಲಿ ಶನಿವಾರ ಜೋರು ಮಳೆಯಾಗಲಿದ್ದು, ಭಾನುವಾರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

   ಕರ್ನಾಟಕದ ಕರಾವಳಿಯಲ್ಲಿ ಆರೆಂಜ್ ಅಲರ್ಟ್

   ಕರ್ನಾಟಕದ ಕರಾವಳಿಯಲ್ಲಿ ಆರೆಂಜ್ ಅಲರ್ಟ್

   ನೈಋುತ್ಯ ಮುಂಗಾರು ಕರಾವಳಿ, ಮಲೆನಾಡು ಭಾಗದಲ್ಲಿ ಚುರುಕಾಗಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲೂ ಮಳೆ ಆರಂಭವಾಗಿದೆ. ರಾಜ್ಯದ ಬಹುತೇಕ ಭಾಗಗಳನ್ನು ಮುಂಗಾರು ಆವರಿಸಿರುವುದರಿಂದ ಮಳೆ ಜೋರಾಗಿದೆ. ಕರಾವಳಿಯಲ್ಲಿ ಜೂ.14ರ ವರೆಗೆ ಆರೆಂಜ್‌ ಅಲರ್ಟ್‌ ಮತ್ತು ಜೂ.15 ರಂದು ಯೆಲ್ಲೋ ಅಲರ್ಟ್‌ ಘೋಷಿಸ­ಲಾಗಿದೆ.

   ವಾಡಿಕೆಗಿಂತ ಅಧಿಕ ಮಳೆ

   ವಾಡಿಕೆಗಿಂತ ಅಧಿಕ ಮಳೆ

   ಮುಂಗಾರು ಅವಧಿಯಲ್ಲಿ ಈವರೆಗೆ ರಾಜ್ಯದಲ್ಲಿ ಒಟ್ಟು 66.5 ಮಿ.ಮೀ. ಮಳೆ­ಯಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 57 ಮಿ.ಮೀ. ಮಳೆಯಾಗುತ್ತದೆ. ಈ ಬಾರಿ ಮುಂಗಾರು ರಾಜ್ಯಕ್ಕೆ ಆಗಮಿಸಿದ ಕೆಲವೇ ದಿನಗಳಲ್ಲಿ ಉತ್ತಮ ಮಳೆ ಆರಂಭವಾಗಿದೆ.

   ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ

   ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ

   ಕರ್ನಾಟಕದ ಹೊನ್ನಾವರ, ಕಾರವಾರ, ಗೋಕರ್ಣ, ಅಂಕೋಲಾ, ಮಂಕಿಯಲ್ಲಿ ಅಧಿಕ ಮಳೆಯಾಗಿದೆ. ಬಸವನ ಬಾಗೇವಾಡಿ, ಗೇರುಸೊಪ್ಪ, ಶಿರಾಲಿ, ಪಣಂಬೂರ್, ಸುಬ್ರಹ್ಮಣ್ಯ, ಕುಂದಾಪುರ, ಸಿದ್ದಾಪುರ, ಹೊಸನಗರ, ಯಲಬುರ್ಗಾ, ಬನವಾಸಿ, ಲಿಂಗನಮಕ್ಕಿ, ತಾಳಗುಪ್ಪ, ಸಕಲೇಶಪುರ, ವಿಜಯಪುರ, ಬೀದರ್, ಚಿತ್ರದುರ್ಗ, ತ್ಯಾಗರ್ತಿ, ಆನವಟ್ಟಿ, ಹೊಸಪೇಟೆ, ಕಂಪ್ಲಿಯಲ್ಲಿ ಸಾಧಾರಣ ಮಳೆಯಾಗಿದೆ. ಬಾಗಲಕೋಟೆ, ಗದಗ, ಹಾವೇರಿಯಲ್ಲಿ ಜೂನ್ 14 ರಂದು ಭಾರಿ ಮಳೆಯಾಗಲಿದೆ. ಜೂನ್ 15 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ಮಳೆ ಸುರಿಯಲಿದೆ.

   English summary
   he India Meteorological Department (IMD) on Thursday afternoon announced the arrival of southwest monsoon in Maharashtra with its onset over Harnai in Ratnagiri and Solapur districts. And it will bring havy Rain For Karnataka and Uttar pradesh also.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X