
ಸುಕೇಶ್‌ಗೆ ಜಾಕ್ವೆಲಿನ್ ಅನ್ನು ಪರಿಚಯಿಸಿದ ಮಹಿಳೆ ಬಂಧಿಸಿದ ದೆಹಲಿ ಪೊಲೀಸ್
ದೆಹಲಿ ನವೆಂಬರ್ 30: ಅಕ್ರಮ ಹಣ ವರ್ಗಾವಣೆ ಪ್ರಕರಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಜೈಲುಪಾಲಾಗಿರುವ ಸುಕೇಶ್ ಚಂದ್ರಶೇಕರ್ ಅವರಿಗೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಪರಿಚಯಿಸಿದ್ದ ಮುಂಬೈ ಮೂಲದ ಮಹಿಳೆ ಪಿಂಕಿ ಇರಾನಿ ಅವರನ್ನು ದೆಹಲಿ ಪೊಲೀಸರ ಬಂಧಿಸಿದ್ದಾರೆ.
ದೆಹಲಿ ಪೊಲೀಸರು ಇಂದು ಮಹಿಳೆಯನ್ನು ಬಂಧಿಸಿದೆ. ಈಕೆಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಸಂಗ್ರಹವಾಗಿವೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಪಿಂಕಿ ಇರಾನಿಯನ್ನು ಬಂಧಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ ಆಕೆಗೆ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
video: ವೈಎಸ್ಆರ್ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಸಹಿತ ಕಾರನ್ನು ಎಳೆದೊಯ್ದ ಪೊಲೀಸರು
ಸುಕೇಶ್ ಚಂದ್ರಶೇಖರ್ ಯಾರು?
ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದ ವಂಚಕ. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿರುವ ಉದ್ಯಮಿ ಖೈದಿಯನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ ಉದ್ಯಮಿ ಪತ್ನಿಯನ್ನು ನಂಬಿಸಿ 215 ಕೋಟಿ ರೂಪಾಯಿಯನ್ನು ವಸೂಲಿ ಮಾಡಿದ್ದನು. ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದ ಉದ್ಯಮಿ ಮಾನವೀಂದರ್ ಸಿಂಗ್ ಪತ್ನಿ ಆದಿತಿಗೆ ಪೋನ್ ಕಾಲ್ ಗಳನ್ನು ಮಾಡಿ ತನ್ನನ್ನು ತಾನು ಕೇಂದ್ರ ಗೃಹ ಇಲಾಖೆಯ ಅಧಿಕಾರಿ, ಕಾನೂನು ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಪತಿಯನ್ನು ಜೈಲಿನಲ್ಲಿ ಬಿಡುಗಡೆ ಮಾಡಿಸಲು ಹಣ ನೀಡಬೇಕೆಂದು ಹೇಳಿದ್ದ.
ವಾಯ್ಸ್ ಮಾಡ್ಯುಲೇಷನ್ ಸಾಫ್ಟ್‌ವೇರ್ ಮತ್ತು ಸ್ಪೂಫಿಂಗ್ ಕರೆಗಳನ್ನು ಬಳಸಿ ಸುಕೇಶ್ ಚಂದ್ರಶೇಖರ್ 215 ಕೋಟಿ ರೂ. ವಂಚನೆ ಮಾಡಿದ್ದನು. ಬಳಿಕ ಉದ್ಯಮಿ ಪತ್ನಿಗೆ ತಾನು ಮೋಸ ಹೋಗಿರುವುದು ಗೊತ್ತಾಯಿತು. ಆಗ ಪ್ರಕರಣ ಬೆಳಕಿಗೆ ಬಂದಿದೆ. ವಂಚಕ ಸುಕೇಶ್ ಈ 215 ಕೋಟಿ ರೂಪಾಯಿ ಹಣದಲ್ಲಿ ಹತ್ತು ಕೋಟಿ ರೂಪಾಯಿ ಹಣವನ್ನು ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಗಿಫ್ಟ್ ನೀಡಿದ್ದ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಫರ್ನಾಂಡೀಸ್ ರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ವಿಚಾರಣೆ ನಡೆಸಿದೆ. ಸದ್ಯ ಜಾಕ್ವೆಲಿನ್ ಜಾಮೀನು ಪಡೆದಿದ್ದಾರೆ.
ಜಾಕ್ವೆಲಿನ್ 2021 ರ ಜನವರಿಯಲ್ಲಿ ಮೊದಲ ಬಾರಿಗೆ ಸದ್ಯ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಸುಕೇಶ್ ಚಂದ್ರಶೇಖರ್ ಬಗ್ಗೆ ಎಲ್ಲವನ್ನೂ ತಿಳಿದ ಆಕೆ ಆತನನ್ನು ಭೇಟಿಯಾಗಿ ದುಬಾರಿ ಉಡುಗೊರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು ಎನ್ನುವ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಪಾಲುದಾರರಾಗಿದ್ದಾರೆ ಎಂದು ಇಡಿ ಆರೋಪ ಮಾಡಿತ್ತು.

ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ನಡುವೆ ಉತ್ತಮ ಸಂಬಂಧವಿತ್ತು. ಜಾಕ್ವೆಲಿನ್ ಸುಕೇಶ್‌ನೊಂದಿಗೆ ಎಷ್ಟು ವ್ಯಾಮೋಹ ಹೊಂದಿದ್ದನೆಂದರೆ, ಅವನ ಅಪರಾಧಗಳು ಬಹಿರಂಗವಾದ ನಂತರವೂ ಅವಳು ಅವನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಜಾಕ್ವೆಲಿನ್ ಸುಕೇಶ್ ಅವರನ್ನು ಮದುವೆಯಾಗಲು ಬಯಸಿದ್ದರು ಎನ್ನಲಾಗುತ್ತಿದೆ.