Monalisa: 'ನನ್ನ ಮಗಳು ಸುರಕ್ಷಿತವಾಗಿದ್ದಾಳೆ' ಅಘಾತಕಾರಿ ಹೇಳಿಕೆ ನೀಡಿದ ಮೊನಾಲಿಸ ದೊಡ್ಡಪ್ಪ
ಖ್ಯಾತ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಈ ವಿಷಯ ಇಡೀ ಬಾಲಿವುಡ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಆದರೀಗ ಮೊನಾಲಿಸಾಳ ದೊಡ್ಡಪ್ಪ ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ.
'ನನ್ನ ಮಗಳು ಸುರಕ್ಷಿತವಾಗಿದ್ದಾಳೆ' ಎಂದು ಮೊನಾಲಿಸಾಳ ದೊಡ್ಡಪ್ಪ ವಿಜಯ್ ಭೋಸಲೆ ಹೇಳಿಕೆ ನೀಡಿದ್ದಾರೆ. ಬಡತನದಿಂದ ಬಂದ ಹುಡುಗಿ ಮೊನಾಲಿಸಾ ತನ್ನ ಜೀವನ ನಡೆಸಲು ರುದ್ರಾಕ್ಷಿ ಮಾಲೆ ಮಾರಿಕೊಂಡು ತನ್ನ ಪಾಡಿಗೆ ತಾನಿದ್ದಳು. ಆದರೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ಹುಡುಗಿಯ ವಿಡಿಯೋವನ್ನು ವೈರಲ್ ಮಾಡಲಾಯಿತು. ಈ ಹುಡುಗಿಯ ಕಣ್ಣು ಆಕರ್ಷಕವಾಗಿವೆ ಎಂದು ವಿಡಿಯೋ ಸೆರೆ ಹಿಡಿದು ವೈರಲ್ ಮಾಡಲಾಗಿತ್ತು. ಈ ವಿಡಿಯೋದಿಂದಾಗಿ ಮೊನಾಲಿಸಾ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಮೊನಾಲಿಸಾ ವಿಡಿಯೋ ವೈರಲ್ ಆದ ಬಳಿಕ ಆಕೆಗೆ ಸಿನಿಮಾದಲ್ಲಿ ನಟಿಸುವ ಚಾನ್ಸ್ ಕೊಡಿಸುವುದಾಗಿ ಹೇಳಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮೊನಾಲಿಸ ದೊಡ್ಡಪ್ಪ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಿನಿಮಾದಲ್ಲಿ ಮೊನಾಲಿಸಾ?
ಮಹಾಕುಂಭ 2025ರ ವೈರಲ್ ಹುಡುಗಿ ಮೊನಾಲಿಸಾ ಶೀಘ್ರದಲ್ಲೇ ಸನೋಜ್ ಮಿಶ್ರಾ ಅವರ ಮುಂಬರುವ ಚಿತ್ರ 'ದಿ ಡೈರಿ ಆಫ್ ಮಣಿಪುರ'ದಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎಂದು ಸುದ್ದಿ ಹರಿದಾಡಿತ್ತು. ಈ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು.

ಆದರೆ ಈಗ ಮೊನಾಲಿಸಾ ಅವರ ಕುಟುಂಬ ಸದಸ್ಯರು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮೊನಾಲಿಸಾ ಅವರ ದೊಡ್ಡಪ್ಪ ವಿಜಯ್ ಭೋಸಲೆ ಮಾಧ್ಯಮಗಳೊಂದಿಗೆ ಮಾತನಾಡಿ, 'ತಮ್ಮ ಮಗಳು ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾಳೆ. ಮೊನಾಲಿಸಾ ಇಂದೋರ್‌ನಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ಅವಳು ಮುಂಬೈಗೆ ಸ್ಥಳಾಂತರಗೊಂಡಿಲ್ಲ. ಮೊನಾಲಿಸಾ ಇಂದೋರ್‌ನಲ್ಲಿಯೇ ತನ್ನ ಅಧ್ಯಯನವನ್ನು ಪೂರ್ಣಗೊಳಿಸುತ್ತಿದ್ದಾಳೆ ಮತ್ತು ನಟನಾ ತರಬೇತಿಯನ್ನೂ ಪಡೆಯುತ್ತಿದ್ದಾಳೆ. ಸನೋಜ್ ಮಿಶ್ರಾ ಅವರಿಗೆ ಸಂಬಂಧಿಸಿದ ಯಾವುದೇ ವಿವಾದದ ಬಗ್ಗೆ ತನಗೆ ತಿಳಿದಿಲ್ಲ' ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
'ನಮಗೆ ಇದರ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿದ್ದರೆ ಅಥವಾ ತೊಂದರೆ ಆಗಿದ್ದರೆ ನಾವು ಖಂಡಿತವಾಗಿಯೂ ಸರ್ಕಾರ ಮತ್ತು ಮಾಧ್ಯಮಗಳಿಗೆ ತಿಳಿಸುತ್ತಿದ್ದೆವು. ನಮ್ಮ ಮಗಳು ತನ್ನ ತಂದೆಯೊಂದಿಗೆ ಇದ್ದಾಳೆ. ಆಕೆಗೆ ಯಾವುದೇ ಅಪಾಯ ಆಗಿಲ್ಲ. ಸನೋಜ್ ಮಿಶ್ರಾ ಇಲ್ಲಿಯವರೆಗೆ ತಮ್ಮ ಕುಟುಂಬಕ್ಕೆ ಯಾವುದೇ ರೀತಿಯ ವಂಚನೆ ಮಾಡಿಲ್ಲ' ಎಂದು ಹೇಳಿದ್ದಾರೆ.
ಮೊನಾಲಿಸಾ ಸಿನಿಮಾ ವೃತ್ತಿಜೀವನದಲ್ಲಿ ಈಗ ಏನಾಗುತ್ತದೆ?
ಈ ವಿವಾದ ಅವರ ಮಗಳ ಚಲನಚಿತ್ರ ವೃತ್ತಿಜೀವನದ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೇ ಎಂದು ಮೊನಾಲಿಸಾ ಅವರ ಕುಟುಂಬವನ್ನು ಕೇಳಿದಾಗ, ಮೊನಾಲಿಸಾ ಇನ್ನೂ ತನ್ನ ಅಧ್ಯಯನವನ್ನು ಮುಂದುವರಿಸುತ್ತಿದ್ದಾಳೆ. ಅವರು ನಟನಾ ತರಬೇತಿಯತ್ತಲೂ ಗಮನ ಹರಿಸುತ್ತಿದ್ದಾರೆ. ಈ ವಿವಾದ ತಮ್ಮ ಮಗಳ ಭವಿಷ್ಯದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದನ್ನು ನಾವು ಬಯಸುವುದಿಲ್ಲ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.
ಮೊನಾಲಿಸಾ ಪ್ರಸ್ತುತ ಯಾವುದೇ ಚಲನಚಿತ್ರ ಯೋಜನೆಯಲ್ಲಿ ಇಲ್ಲ. ಅವಳು ಈಗಷ್ಟೇ ಕಲಿಯುತ್ತಿದ್ದಾಳೆ. ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದ್ದಾಳೆ. ಅವರು ಇನ್ನೂ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಚಿತ್ರದಲ್ಲಿ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳುವ ಬಗ್ಗೆ ಮಾತ್ರ ಮಾತುಕತೆ ನಡೆದಿತ್ತು. ಸನೋಜ್ ಮಿಶ್ರಾ ಅವರಿಗೆ ಸಂಬಂಧಿಸಿದ ವಿವಾದದ ಬಗ್ಗೆ ನಾವು ಎಚ್ಚರವಾಗಿದ್ದೇವೆ. ನಮಗೆ ಏನಾದರೂ ತಪ್ಪು ಅನಿಸಿದರೆ, ನಾವು ಖಂಡಿತವಾಗಿಯೂ ಸರ್ಕಾರ ಮತ್ತು ಪೊಲೀಸರಿಗೆ ತಿಳಿಸುತ್ತೇವೆ ಎಂದು ವಿಜಯ್ ಭೋಸಲೆ ಹೇಳಿದ್ದಾರೆ.
ಸನೋಜ್ ಮಿಶ್ರಾ ವಿರುದ್ಧದ ಆರೋಪಗಳೇನು?
ದೆಹಲಿ ಪೊಲೀಸರ ಪ್ರಕಾರ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಯುವತಿಯೊಬ್ಬಳನ್ನು ಚಲನಚಿತ್ರಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನಬಿ ಕರೀಂ ಪೊಲೀಸ್ ಠಾಣೆ ತಕ್ಷಣ ಕ್ರಮ ಕೈಗೊಂಡು ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ಬಂಧನದ ನಂತರ ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ಸಂಚಲನ ಹರಡಿದೆ. ಹಲವು ಚಿತ್ರಗಳ ನಿರ್ದೇಶಕರಾಗಿದ್ದ ಸನೋಜ್ ಮಿಶ್ರಾ ಈಗ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.












Click it and Unblock the Notifications