ಮೋಹನ್ ಭಾಗ್ವತ್ ವಿವಾದಿತ ಹೇಳಿಕೆ, ತಿರುಗಿಬಿದ್ದ ಕಾಂಗ್ರೆಸ್ಸಿಗರು

Posted By:
Subscribe to Oneindia Kannada
   ಮೋಹನ್ ಭಾಗವತ್ ಭಾಷಣದಿಂದ ರಾಹುಲ್ ಗಾಂಧಿ ಕೆಂಡಾಮಂಡಲ | Oneindia Kananda

   ಪಾಟ್ನ, ಫೆಬ್ರವರಿ 12: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಇಲ್ಲಿನ ಮುಝಫರ್ ಪುರದಲ್ಲಿ ಮಾಡಿದ ಭಾಷಣ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಸೇನೆ ಹಾಗೂ ಆರೆಸ್ಸೆಸ್ ಬಗ್ಗೆ ಮೋಹನ್ ಭಾಗ್ವತ್ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಖಂಡಿಸಿದ್ದಾರೆ. ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

   ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸದ್ಯ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಆದರೆ, ಅವರ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ವಿರುದ್ಧ ಟ್ವೀಟ್ ಗಳು ಬರುತ್ತಿವೆ. ಸೇನೆಗಿಂತ ಆರೆಸ್ಸೆಸ್ ಶಕ್ತಿಯುತ ವ್ಯವಸ್ಥೆ ಹೊಂದಿದೆ ಎಂಬರ್ಥದಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಲಾಗಿದೆ.

   ಏನಿದು ವಿವಾದ: ಸದ್ಯ 10 ದಿನಗಳ ಕಾಲ ಬಿಹಾರ ರಾಜ್ಯದಲ್ಲಿ ಪ್ರವಾಸದಲ್ಲಿರುವ ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಅವರು ಮುಝಫರ್ ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಅಗತ್ಯ ಬಿದ್ದರೆ ಮೂರು ದಿನಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಸೇನೆ ಸಿದ್ಧವಾಗಲಿದೆ. ಇಂಥ ಪಡೆ ತಯಾರು ಮಾಡಲು ಭಾರತೀಯ ಸೇನೆಗೆ ಕನಿಷ್ಟ ಆರೇಳು ತಿಂಗಳುಗಳು ಬೇಕಾಗಬಹುದು ಎಂದಿದ್ದರು.

   ನಿಜಕ್ಕೂ ಭಾಗ್ವತ್ ಭಾಷಣದಲ್ಲಿ ಏನಿದೆ?

   ನಿಜಕ್ಕೂ ಭಾಗ್ವತ್ ಭಾಷಣದಲ್ಲಿ ಏನಿದೆ?

   ಅಗತ್ಯ ಬಿದ್ದರೆ ಮೂರು ದಿನಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಸೇನೆ ಸಿದ್ಧವಾಗಲಿದೆ. ಇಂಥ ಪಡೆ ತಯಾರು ಮಾಡಲು ಭಾರತೀಯ ಸೇನೆಗೆ ಕನಿಷ್ಟ ಆರೇಳು ತಿಂಗಳುಗಳು ಬೇಕಾಗಬಹುದು, ಸಂವಿಧಾನದ ಬೆಂಬಲ ಸಿಕ್ಕರೆ ನಮ್ಮ ಕಾರ್ಯಕರ್ತರು ದೇಶ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂದಿರುತ್ತಾರೆ.

   ನಮ್ಮದು ಕೌಟುಂಬಿಕ ಸಂಸ್ಥೆಯಿದ್ದಂತೆ, ನಾವು ಮಿಲಿಟರಿಯಲ್ಲ ನಿಜ, ಆದರೆ, ನಮ್ಮಲ್ಲೂ ಶಿಸ್ತಿದೆ, ತುರ್ತು ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಬಲಿದಾನ ನೀಡಬಲ್ಲ ಕಾರ್ಯಕರ್ತರಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.

   ಕ್ಷಮೆಯಾಚನೆಗೆ ಆಗ್ರಹಿಸಿದ ರಾಹುಲ್ ಗಾಂಧಿ

   ಮೋಹನ್ ಭಾಗ್ವತ್ ಅವರಿಂದ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿದ ರಾಹುಲ್ ಗಾಂಧಿ ಅವರ ಕಚೇರಿಯಿಂದ ಟ್ವೀಟ್ ಮೂಲಕ ಅಭಿಯಾನ ನಡೆಸಲಾಗುತ್ತಿದೆ.

   ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಪ್ರತಿಕ್ರಿಯೆ

   ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಪ್ರತಿಕ್ರಿಯೆ ನೀಡಿ, ಮೋಹನ್ ಭಾಗ್ವತ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

   ಆರೆಸ್ಸೆಸ್ ನಿಂದ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ.

   ಬ್ರಿಟಿಷರ ವಿರುದ್ಧ ಹೋರಾಡದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳದ, 52 ವರ್ಷಗಳಿಂದ ಭಾರತದ ಧ್ವಜಕ್ಕೆ ಅವಮಾನ ಮಾಡುತ್ತಿರುವ ಆರೆಸ್ಸೆಸ್ ನಿಂದ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ಸಿಗರಿಂದ ಟ್ವೀಟ್ ಗಳು ಬಂದಿವೆ.

   ಈ ಬಗ್ಗೆ ಸ್ಪಷ್ಟನೆ ನೀಡಿದ ಆರೆಸ್ಸೆಸ್

   ‘ಭಾರತ ಶಕ್ತಿಶಾಲಿ ಹಿಂದೂ ರಾಷ್ಟ್ರವಾಗುವ ದಿನ ಆರೆಸ್ಸೆಸ್ ನ ಅವಶ್ಯಕತೆ ಇರುವುದಿಲ್ಲ. ನಂತರ ಸಂಘದ ಸದಸ್ಯರು ಸಾಮಾನ್ಯ ಸಭೆಗಳನ್ನು ನಡೆಸಲಿದ್ದಾರೆ. ಪ್ರತಿದಿನ ನಡೆಯುವ ಶಾಖೆಗಳಿಗೆ ಪ್ರತಿಯೊಬ್ಬ ಭಾರತೀಯನೂ ಹಾಜರಾಗಬೇಕು. ಸಂಘಟನೆಯ ಆರು ಮೂಲಭೂತ ತತ್ವಗಳನ್ನು ಅನುಸರಿಸಬಹುದು' ಎಂದು ಭಾಗ್ವತ್ ಹೇಳಿದ್ದರು. ಆದರೆ, ವಿವಾದ ತಾರಕಕ್ಕೇರುತ್ತಿದ್ದಂತೆ ಈ ಬಗ್ಗೆ ಆರೆಸ್ಸೆಸ್ ಸ್ಪಷ್ಟನೆ ನೀಡಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The RSS Chief Mohan Bhagwat speech is an insult to every Indian, because it disrespects those who have died for our nation. It is an insult to our flag because it insults every soldier who ever saluted it. Shame on you Mr Bhagwat, for disrespecting our martyrs and our Army said Office of Rahul Gandi, AICC president.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ