ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ವಿರುದ್ಧ ಕಿಡಿಕಾರಿದ ಕ್ರಿಕೆಟಿಗ ಮೊಹಮ್ಮದ್ ಕೈಫ್

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಅಲ್ಪಸಂಖ್ಯಾತರ ವಿಚಾರದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, 'ಪಾಕಿಸ್ತಾನವು ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಬೇರೆ ದೇಶಗಳಿಗೆ ಉಪದೇಶ ನೀಡುವ ಕೊನೆಯ ದೇಶವಾಗಲಿ' ಎಂದು ಹೇಳಿದ್ದಾರೆ.

ಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ನಾವು ಮೋದಿ ಸರಕಾರಕ್ಕೆ ತೋರಿಸಿಕೊಡುತ್ತೇವೆ. ಅಲ್ಪಸಂಖ್ಯಾತರನ್ನು ಸಮಾನವಾಗಿ ಕಾಣುತ್ತಿಲ್ಲ ಭಾರತದಲ್ಲಿ ಕೂಡ ಜನರು ಹೇಳುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದರು.

ಇಮ್ರಾನ್ ಖಾನ್, ನಿಮ್ಮ ದೇಶ ನೀವು ನೋಡ್ಕಳಿ: ನಾಸಿರುದ್ದೀನ್ ತಿರುಗೇಟುಇಮ್ರಾನ್ ಖಾನ್, ನಿಮ್ಮ ದೇಶ ನೀವು ನೋಡ್ಕಳಿ: ನಾಸಿರುದ್ದೀನ್ ತಿರುಗೇಟು

ಭಾರತದಲ್ಲಿ ಪೊಲೀಸ್ ಅಧಿಕಾರಿಯ ಸಾವಿಗಿಂತ ಗೋವುಗಳ ಹತ್ಯೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದಿದೆ ಎಂಬ ನಟ ನಾಸಿರುದ್ದೀನ್ ಶಾ ಹೇಳಿಕೆಯನ್ನು ಉಲ್ಲೇಖಿಸಿ ಇಮ್ರಾನ್ ಖಾನ್ ಹೇಳಿದ್ದರು.

mohammad Kaif hit out at imran khan pakistan should be the last country lecture minorities

ಬಲಪಂಥೀಯ ಸಂಘಟನೆಗಳ ವಿರೋಧ: ನಾಸಿರುದ್ದೀನ್ ಶಾ ಕಾರ್ಯಕ್ರಮ ರದ್ದುಬಲಪಂಥೀಯ ಸಂಘಟನೆಗಳ ವಿರೋಧ: ನಾಸಿರುದ್ದೀನ್ ಶಾ ಕಾರ್ಯಕ್ರಮ ರದ್ದು

ಇದಕ್ಕೆ ಟ್ವಿಟ್ಟರ್‌ನಲ್ಲಿ ಇಮ್ರಾನ್ ಖಾನ್ ವಿರುದ್ಧ ಕಿಡಿ ಕಾರಿರುವ ಮೊಹಮ್ಮದ್ ಕೈಫ್, 'ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಶೇ 20ರಷ್ಟು ಅಲ್ಪಸಂಖ್ಯಾತರಿದ್ದರು. ಆದರೆ ಈಗ ಅವರ ಪ್ರಮಾಣ ಶೇ 2ಕ್ಕಿಂತಲೂ ಕಡಿಮೆ ಇದೆ. ಇನ್ನೊಂದೆಡೆ ಭಾರತದಲ್ಲಿ ಸ್ವಾತಂತ್ರ್ಯ ಬಂದ ಬಳಿಕದಿಂದಲೂ ಅಲ್ಪಸಂಖ್ಯಾತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪಾಕಿಸ್ತಾನವು ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಯಾವುದೇ ದೇಶಕ್ಕೆ ಪಾಠ ಮಾಡುವ ಕೊನೆಯ ದೇಶವಾಗಲಿ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

'ಇನ್ನೆಷ್ಟು ಸ್ವಾತಂತ್ರ್ಯ ಬೇಕು?' ನಾಸಿರುದ್ದೀನ್ ಗೆ ಅನುಪಮ್ ಪ್ರಶ್ನೆ'ಇನ್ನೆಷ್ಟು ಸ್ವಾತಂತ್ರ್ಯ ಬೇಕು?' ನಾಸಿರುದ್ದೀನ್ ಗೆ ಅನುಪಮ್ ಪ್ರಶ್ನೆ

ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ಭಾನುವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮುಖ್ಯವಾಗಿ 'ಒಳಗೊಳ್ಳುವ ರಾಜಕಾರಣ ಮತ್ತು ಅಲ್ಪಸಂಖ್ಯಾತರ ಹಕ್ಕುಗಳು' ಸೇರಿದಂತೆ ಭಾರತದಿಂದ ಸ್ವಲ್ಪ ವಿವೇಕವನ್ನು ಪಡೆದುಕೊಳ್ಳಲಿ ಎಂದು ಸಲಹೆ ನೀಡಿದ್ದರು.

English summary
Former Indian Cricketer Mohammad Kaif hits out at Pakistan Prime Minister Imran Khan in Tuesday that Pakistan is the last country that should be lecturing any country on how to treat minorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X