ಹೊಸ ನೋಟುಗಳೊಂದಿಗೆ ಬ್ಯಾಂಕ್ ನೌಕರ ಪರಾರಿ

Posted By:
Subscribe to Oneindia Kannada

ಮೊಹಾಲಿ, ನವೆಂಬರ್, 16: ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಸಾಕಷ್ಟು ಪ್ರಮಾಣದ ಹಣದ ಪೂರೈಕೆಯಿಲ್ಲದೆ ದೇಶದಾದ್ಯಂತ ಹಲವು ಎಟಿಎಂ ಕೇಂದ್ರಗಳು ಸ್ಥಗಿತಗೊಂಡಿವೆ. ಎಟಿಎಂಗಳ ಮುಂದೆ 'ನೋ ಕ್ಯಾಶ್' ಎಂಬ ನಾಮಫಲಕಗಳನ್ನೂ ಸಹ ನೇತು ಹಾಕಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಎಟಿಎಂಗೆ ಹಣ ತುಂಬಿಸಲು ನೀಡಿದ್ದ 6.98ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಬ್ಯಾಂಕ್ ನ ನೌಕರನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ.[ಠಾಕುಠೀಕಾಲಿ ಲಾಠಿ ಹಿಡಿದು ಬಂದ ಪೇದೆ ಮಾಡಿದ್ದೇನು?]

Mohali banker flees with Rs 7 lakh meant for ATM

ತಲೆಮರೆಸಿಕೊಂಡಿರುವ ನೌಕರನನ್ನು ಪಂಬಾಬ್ ಮತ್ತು ಸಿಂದ್ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ತೇಜ್ ಪ್ರತಾಪ್ ಸಿಂಗ್ ಭಾಟಿಯಾ ಎಂದು ತಿಳಿಸಲಾಗಿದೆ.[ಯಾವ ಎಟಿಎಂ ಕೆಲಸ ಮಾಡುತ್ತಿದೆ?: ಎಟಿಎಂ ಕರೊ.ಇನ್ ನಲ್ಲಿ ಮಾಹಿತಿ]

ಜಿಲ್ಲೆಯ ಡೆರಬಾಸ್ಸಿ ತಾಲ್ಲೂಕಿನ ಬಂಕಾರ್ಪುರ್ ಹಳ್ಳಿಯಲ್ಲಿರುವ ಎಟಿಎಂ ಕೇಂದ್ರವೊಂದಕ್ಕೆ ಹಣ ತುಂಬಿಸುವಂತೆ ಸುಮಾರು 6.98ಲಕ್ಷ ಮೌಲ್ಯದ ಹಣವನ್ನು ಬ್ಯಾಂಕ್ ಆತನಿಗೆ ಒಪ್ಪಿಸಿತ್ತು.

ಅಷ್ಟೇ ಅಲ್ಲದೆ ಎಟಿಎಂಗೆ ಹಣ ತುಂಬಿಸುವ ವೇಳೆ ಖುದ್ದು ನಿಂತು ಪರಿಶೀಲನೆ ನಡೆಸುವಂತೆಯೂ ಸಹ ಬ್ಯಾಂಕ್ ಆತನಿಗೆ ಸೂಚಿಸಿತ್ತು.

ಒಬ್ಬ ಭದ್ರತಾಧಿಕಾರಿ ಮತ್ತು ಓರ್ವ ಇಂಜಿನಿಯರ್ ನೊಂದಿಗೆ ಎಟಿಎಂ ಕೇಂದ್ರಕ್ಕೆ ಬಂದ ತೇಜ್ ಪ್ರತಾಪ್ ಇಂಜಿನಿಯರ್ ಮತ್ತು ಭದ್ರತಾಧಿಕಾರಿ ಎಟಿಎಂ ಯಂತ್ರ ತೆರೆಯುವಲ್ಲಿ ಮಗ್ನರಾಗಿದ್ದ ವೇಳೆ ಹಣದ ಬಾಕ್ಸ್ ಅನ್ನು ತನ್ನ ಕಾರಿಗೆ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಪಂಬಾಬ್ ಮತ್ತು ಸಿಂಧ್ ಬ್ಯಾಂಕ್ ನ ಆಡಳಿತ ಮಂಡಳಿಯವರು ಡೆರಬಸ್ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A bank official has fled with Rs 6.98 lakh. He was given the cash to deposit it in an ATM kiosk at Bankarpur village of Derabassi in Mohali district.
Please Wait while comments are loading...