"ಕಪ್ಪು ಹಣ ತರಲು ಮೋದಿಯಿಂದ ಫೇರ್ ಅಂಡ್ ಲವ್ಲಿ ಯೋಜನೆ"

Posted By:
Subscribe to Oneindia Kannada

ನವದೆಹಲಿ, ಮಾ. 02: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಸಂಸತ್ತಿನಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಾತಿನ ಮಧ್ಯೆ ಮೋದಿ ಜೀ 'ನಾವು ನಿಮ್ಮ ಶತ್ರುಗಳಲ್ಲ, ನಮ್ಮ ಮಾತು ಸ್ವಲ್ಪ ಕೇಳಿ' ಎಂದರು.

ರಾಹುಲ್ ಗಾಂಧಿ ಅವರು ತಮ್ಮ ಸಹ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಒಟ್ಟೊಟ್ಟಿಗೆ ಉಲ್ಲೇಖಿಸಿ ಕಿಚಡಿ ಮಾಡಿ ಬಿಟ್ಟರು. ಕಪ್ಪುಹಣ, ಜಮ್ಮು ಮತ್ತು ಕಾಶ್ಮೀರ, ಬಜೆಟ್, ಜೆಎನ್ ಯು, ಆರೆಸ್ಸೆಸ್, ನಾಗಾ ಶಾಂತಿ ಒಪ್ಪಂದ, ಸ್ಮೃತಿ ಇರಾನಿ ಹೇಳಿಕೆ ಹೀಗೆ ಅನೇಕ ವಿಷಯಗಳು ಕೇಳಿ ಬಂತು. ರಾಹುಲ್ ಭಾಷಣದ ಮುಖ್ಯಾಂಶ ಹೀಗಿದೆ: [ಅಮಿತ್ ಶಾ 8 ಪ್ರಶ್ನೆಗಳಿಗೆ ಕಾಂಗ್ರೆಸ್ ಒಂದೇ ವಾಕ್ಯದ ಉತ್ತರ!]

* ಕಪ್ಪು ಹಣವನ್ನು ಬಿಳಿ ಮಾಡುವುದು ಹೇಗೆ ಎಂಬುದಕ್ಕಾಗಿ ಮೋದಿ ಜೀ ಅವರು ಫೇರ್ ಅಂಡ್ ಲವ್ಲಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
* ಎಲ್ಲಿ ಯಾರಿಗೆ ಉದ್ಯೋಗ ಸಿಕ್ಕಿದೆ ಕೈ ಎತ್ತಿ ಎಂದರೆ ಯಾರು ಕೈ ಎತ್ತುತ್ತಿಲ್ಲ. ಮೋದಿ ಅವರು ಉದ್ಯೋಗ ನೀಡುವ ಭರವಸೆ ನೀಡಿದ್ದು ಏನಾಯ್ತು?
* ಮೋದಿ ಜೀ ಅವರು ಒಮ್ಮೆ ಎಂನರೇಗಾ ಯೋಜನೆ ಅತ್ಯಂತ ಕೆಟ್ಟ ಯೋಜನೆ ಎಂದಿದ್ದರು. ಯುಪಿಎ ಸರ್ಕಾರದ ದೊಡ್ಡ ಪ್ರಮಾದ ಎಂದು ಟೀಕಿಸಿದ್ದರು. ಇನ್ನಷ್ಟು ಮುಂದೆ ಓದಿ...

ಎಂನರೇಗಾ ಬಗ್ಗೆ ಮೋದಿ ತೆಗಳಿದ್ದರು.

ಎಂನರೇಗಾ ಬಗ್ಗೆ ಮೋದಿ ತೆಗಳಿದ್ದರು.

ಮೋದಿ ಅವರು ಎಂನರೇಗಾವನ್ನು ಕಟುವಾಗಿ ಟೀಕಿಸಿದ್ದರು ಈಗ ಅರುಣ್ ಜೇಟ್ಲಿ ಅವರು ನನ್ನ ಬಳಿ ಬಂದು ಇದು ಒಳ್ಳೆ ಯೋಜನೆ ಎಂದಿದ್ದಾರೆ. ಇದನ್ನು ಅವರ ಬಾಸ್ ಗೆ ಏಕೆ ಹೇಳಲಿಲ್ಲ.

ಎಂನರೇಗಾಗೆ ನೀಡಿರುವ ಅನುದಾನದ ಮೊತ್ತ ನೋಡಿ ನನ್ನ ಕಣ್ಣು ತಾನಾಗಿ ಮುಚ್ಚಲ್ಪಟ್ಟಿತು. ಚಿದಂಬರಂ ಅವರೇನಾದರೂ ಬಜೆಟ್ ಮಂಡಿಸುತ್ತಿದ್ದಾರಾ ಎಂದು ಆಲೋಚನೆ ಸುಳಿಯತೊಡಗಿತು ಎಂದು ರಾಹುಲ್ ಗಾಂಧಿ ತಮಾಷೆ ಮಾಡಿದರು

ಪ್ರಧಾನಿ ಅವರೇ ನಿಮ್ಮ ನಿಲುವು, ಅಭಿಪ್ರಾಯ ಹೇರಬೇಡಿ

ಪ್ರಧಾನಿ ಅವರೇ ನಿಮ್ಮ ನಿಲುವು, ಅಭಿಪ್ರಾಯ ಹೇರಬೇಡಿ

* ಪ್ರಧಾನಿ ಅವರು ತಮ್ಮ ನಿಲುವು, ಅಭಿಪ್ರಾಯದಂತೆ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ದೇಶದಿಂದ ಪ್ರಧಾನಿಯೇ ಹೊರತೂ ಪ್ರಧಾನಿಯಿಂದ ದೇಶವಲ್ಲ.

* ಜೆಎನ್​ಯುು ಪ್ರಕರಣ ಬಗ್ಗೆ ಮಾತನಾಡುತ್ತಾ ಶಿಕ್ಷಕರು ಮತ್ತು ಮಾಧ್ಯಮದ ಮೇಲೆ ದಾಳಿಯಾದಾಗ ಪ್ರಧಾನಿ ಒಂದೇ ಒಂದು ಶಬ್ದವನ್ನೂ ಆಡಲಿಲ್ಲ ಏಕೆ?'

ಪ್ರಧಾನಿ ಯಾರ ಮಾತನ್ನೂ ಕೇಳುವುದಿಲ್ಲ

ಪ್ರಧಾನಿ ಯಾರ ಮಾತನ್ನೂ ಕೇಳುವುದಿಲ್ಲ

* ‘ಪ್ರಧಾನಿ ಯಾರ ಮಾತನ್ನೂ ಕೇಳುವುದಿಲ್ಲ, ಪ್ರಧಾನಿಯವರು ಸಹಿ ಮಾಡಿದ ನಾಗಾ ಒಪ್ಪಂದದ ಬಗ್ಗೆ ಗೃಹಸಚಿವರಿಗೆ ಕೂಡಾ ಯಾವುದೇ ಅರಿವು ಇರಲಿಲ್ಲ'
* ಪ್ರಧಾನಿ ಅವರು ಮೊದಲು ದೇಶದ ಮಾತು ಕೇಳುವುದನ್ನು ಕಲಿಯಲಿ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಸುಷ್ಮಾ ನಿಮ್ಮ ಎಂಪಿಗಳ ಮಾತನ್ನಾದರೂ ಕೇಳಿ

ಕಾಂಗ್ರೆಸ್ ಕಾಲದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು

ಕಾಂಗ್ರೆಸ್ ಕಾಲದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು

* ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ.
* ಮೋದಿ ಅವರು ಏನು ಮಾಡಿದರು? ಪಾಕಿಸ್ತಾನ ಪಿಎಂ ನವಾಜ್ ಷರೀಫ್ ಅವರ ಜೊತೆ ಚಹಾ ಕುಡಿದು ಬಂದರು.
* ದೇಶದ ಅಧಿಕಾರಿಗಳು, ತಜ್ಞರ ಅಭಿಪ್ರಾಯ ಕೇಳಲಿಲ್ಲ. ಬಾವುಟಕ್ಕೆ ಅಪಮಾನ ಮಾಡಿದರು. ದೇಶಕ್ಕೆ ಅವಮಾನ ಮಾಡಿದರು.

ಮಾಧ್ಯಮಗಳ ಹೆಡ್ ಲೈನ್ ಅಲಂಕರಿಸುವುದು ಖಯಾಲಿ

ಮಾಧ್ಯಮಗಳ ಹೆಡ್ ಲೈನ್ ಅಲಂಕರಿಸುವುದು ಖಯಾಲಿ

* ಪಾಕಿಸ್ತಾನದಿಂದ ಸಶಸ್ತ್ರಧಾರಿ ಹತ್ಯೆಗಾರರ ತಂಡ ಮುಂಬೈಗೆ ಕಾಲಿಟ್ಟು 200 ಜನರನ್ನು ಕೊಲ್ಲುತ್ತಾರೆ. ಇದು ಘೋರ ದುರಂತ.
* ದುರಂತದ ಸಂದರ್ಭದಲ್ಲಿ ಮುಂಬೈಗೆ ಕಾಲಿಡಬೇಡಿ ಎಂದು ಅಂದಿನ ಗುಜರಾತ್ ಸಿಎಂ ಅವರನ್ನು ಕಾಂಗ್ರೆಸ್ ಕೇಳಿಕೊಂಡಿತ್ತು.
* ಆದರೆ, ಅಲ್ಲಿಗೆ ಹೋದ ಗುಜರಾತಿನ ಸಿಎಂ ಎಲ್ಲಾ ಮಾಧ್ಯಮಗಳ ಹೆಡ್ ಲೈನ್ ಅಲಂಕರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress vice-president Rahul Gandhi addressed fellow MPs in Lok Sabha today and attacked the Modi government over the issue of black money. Modiji brought a 'Fair and Lovely Yojna' to convert black money into white, he said.
Please Wait while comments are loading...