• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಲಾರರು ಮೋದಿಜೀ: ರಾಹುಲ್ ಗಾಂಧಿ

|
   ರಾಜಸ್ಥಾನದಲ್ಲಿ ನರೇಂದ್ರ ಮೋದಿಯನ್ನ ಲೇವಡಿ ಮಾಡಿದ ರಾಹುಲ್ ಗಾಂಧಿ | Oneindia Kannada

   ಜೈಪುರ, ಅಕ್ಟೋಬರ್ 09: 'ನಾನು ಪ್ರಧಾನಿ ಮೋದಿಜೀ ಅವರ ಕಣ್ಣಿನಲ್ಲಿ ಕಣ್ಣನಿಟ್ಟು ನೋಡಿದರೆ, ಅವರು ಇನ್ನೆಲ್ಲೋ ನೋಡಿ ದೃಷ್ಟಿ ತಪ್ಪಿಸುತ್ತಾರೆ. ಈ ದೇಶದ ಯುವಕರ ಕಣ್ಣಿನಲ್ಲಿ ಕಣ್ಣನಿಟ್ಟು ನೋಡಲಾರರು ಮೋದಿಜೀ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

   ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ನಿಮಿತ್ತ ಮಂಗಳವಾರ ಪ್ರಚಾರ rally ಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ಎಂದಿನಂತೆ ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.

   ನಿಮ್ಮ ಆಯ್ಕೆಯ ನಾಯಕ ಯಾರು? ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ?

   ತಮ್ಮ ಮಾತಿನ ನಡುವಲ್ಲಿ ರಿಲಯನ್ಸ್ ಚೇರ್ ಮನ್ ಅನಿಲ್ ಅಂಬಾನಿಯವರನ್ನೂ ರಾಹುಲ್ ಗಾಂಧಿ ಎಳೆದು ತಂದರು. ರಾಜಸ್ಥಾನದ ದೋಲ್ಪುರದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.

   ನನ್ನ ಕಣ್ಣನ್ನು ನೋಡಲಾರರು ಮೋದಿಜೀ!

   ನನ್ನ ಕಣ್ಣನ್ನು ನೋಡಲಾರರು ಮೋದಿಜೀ!

   "ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 45,000 ಕೋಟಿ ರೂಪಾಯಿಯಷ್ಟು ಹಣವನ್ನು ಬಡವರ, ರೈತರ ಜೇಬಿನಿಂದ ತೆಗೆದು ಅನಿಲ್ ಅಂಬಾನಿ ಅವರಿಗೆ ನೀಡಿದರು. ಈ ಬಗ್ಗೆ ನಾನು ಅವರಲ್ಲಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದೆ. ನಾನು ಅವರ ಕಣ್ಣನ್ನೇ ನೋಡಿದೆ. ಆದರೆ ಅವರು ದೃಷ್ಟಿ ತಪ್ಪಿಸಿದರು. ಈ ದೇಶದ ಯುವಕರ ಕಣ್ಣಿನಲ್ಲಿ ಕಣ್ಣನಿಟ್ಟು ನೋಡುವ ಸಾಮರ್ಥ್ಯ ಮೋದಿಯವರಿಗಿಲ್ಲ" ಎಂದು ಅವರು ಹೇಳಿದರು.

   ಮಾಯಾ ಮೈತ್ರಿಯನ್ನು ರಾಹುಲ್ ಅವರೇ ತಿರಸ್ಕರಿಸಿದರೆ? 7 ಕಾರಣ ಇಲ್ಲಿವೆ

   'ಮೇಡ್ ಇನ್ ರಾಜಸ್ಥಾನ ್'

   'ಮೇಡ್ ಇನ್ ರಾಜಸ್ಥಾನ ್'

   "ನೀವು ಸೆಲ್ಫಿ ತೆಗೆದುಕೊಳ್ಳುತ್ತೀರಿ. ಸೆಲ್ಫಿ ತೆಗೆದುಕೊಂಡು ನಿಮ್ಮ ಫೋನನ್ನು ತಿರುಗಿಸಿದರೆ ಅಲ್ಲಿ, 'ಮೇಡ್ ಇನ್ ಚೀನಾ' ಎಂಬ ಸಾಲು ಕಾಣಿಸುತ್ತದೆ. ಅದರೆ ಆ ಸಾಲಿನ ಬದಲಾಗಿ, 'ಮೇಡ್ ಇನ್ ದೋಲ್ಪುರ್, ಮೇಡ್ ಇನ್ ರಾಜಸ್ಥಾನ್' ಎಂಬ ಸಾಲುಗಳನ್ನು ನೋಡಲು ನಾನುಬಯಸುತ್ತೇನೆ" - ರಾಹುಲ್ ಗಾಂಧಿ

   ಡೇಲಿಹಂಟ್ ನಿಂದ ದೇಶದ ಅತೀದೊಡ್ಡ ಚುನಾವಣಾ ಸಮೀಕ್ಷೆ!

   ಉದ್ಯಮಿಗಳ ಸಾಲಮನ್ನಾ ಮಾಡುವ ಮೋದಿ!

   ಉದ್ಯಮಿಗಳ ಸಾಲಮನ್ನಾ ಮಾಡುವ ಮೋದಿ!

   "ರೈತರು ಬ್ಯಾಂಕುಗಳಿಂದ ಸೌಲಭ್ಯ ಕೇಳುತ್ತಿದ್ದಾರೆ. ಆದರೆ ಅವರಿಗೆ ಸಾಲವಿರುವುದಕ್ಕಾಗಿ ಯಾವ ಸೌಲಭ್ಯವನ್ನೂ ಕೊಡಲಾಗುತ್ತಿಲ್ಲ. 15-20 ಉದ್ಯಮಿಗಳ 3 ಲಕ್ಷ ಕೋಟಿಗೂ ಹೆಚ್ಚು ಸಾಲಮನ್ನಾ ಮಾಡಿರುವ ಮೋದಿ ರೈತರ ಸಾಲಮನ್ನಾ ಮಾಡುವುದಕ್ಕೇಕೆ ಹಿಂದೇಟು ಹಾಕುತ್ತಿದ್ದಾರೆ"- ರಾಹುಲ್ ಗಾಂಧಿ

   ಆರು ತಿಂಗಳ ಒಟ್ಟಾರೆ ಚುನಾವಣಾ ಸಮೀಕ್ಷೆ: ಏನು ಹೇಳುತ್ತೆ ಮೋದಿ ಭವಿಷ್ಯ?

   ಲಲಿತ್ ಮೋದಿಯಿಂದ ರಾಜೆ ಪುತ್ರನಿಗೆ ಹಣ?

   ಲಲಿತ್ ಮೋದಿಯಿಂದ ರಾಜೆ ಪುತ್ರನಿಗೆ ಹಣ?

   "ರಾಜಸ್ಥಾನದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.ಲಲಿತ್ ಮೋದಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಪುತ್ರನಿಗೆ ಕೋಟಿಗಟ್ಟಲೆ ದುಡ್ಡು ಕೊಟ್ಟಿದ್ದಾರೆ. ಆದರೂ ಇವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ ಎನ್ನುತ್ತಾರೆ. ಲಲಿತ್ ಮೋದಿ ಲಂಡನ್ನಿನಲ್ಲಿ ಹಾಯಾಗಿದ್ದಾರೆ"- ರಾಹುಲ್ ಗಾಂಧಿ

   ನಾಲ್ಕೂವರೆ ವರ್ಷದಿಂದ ರಾಜೆ ಏನು ಮಾಡುತ್ತಿದ್ದರು?

   ನಾಲ್ಕೂವರೆ ವರ್ಷದಿಂದ ರಾಜೆ ಏನು ಮಾಡುತ್ತಿದ್ದರು?

   "ಜನರಿಗೆ ಉಚಿತ ವಿದ್ಯುತ್ ನೀಡುವುದಾಗಿ ಒಂದು ತಿಂಗಳ ಹಿಂದೆ ವಸುಂಧರಾ ರಾಜೆ ಹೇಳಿದ್ದಾರೆ. 4.5 ವರ್ಷದಿಂದ ಅವರು ಏನು ಮಾಡುತ್ತಿದ್ದರು? ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರ ಮೇಲೆ ಅತ್ಯಾಚಾರದ ಆರೋಪವಿದ್ದರೂ ಬಿಜೆಪಿ ಅವರನ್ನು ರಕ್ಷಿಸುತ್ತಿದೆ. ಗುಜರಾತಿನಲ್ಲಿ ಬೇರೆ ರಾಜ್ಯದ ಜನರ ಮೇಲೆ ಹಲ್ಲೆ ನಡೆಯುತ್ತಿದೆ" - ರಾಹುಲ್ ಗಾಂಧಿ

   English summary
   Congress president Rahul gandhi speaks in a rally in Rajasthan: Modi ji took out Rs 45,000 Cr from pockets of farmers&poor & gave to Anil Ambani. I asked him in Parliament why did he give the contract to him? I looked him in the eye but he looked here and there, he said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X