ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ
Recommended Video

ನವದೆಹಲಿ, ಆಗಸ್ಟ್ 15: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ಬುಧವಾರ ಸಂಜೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದರು.
ವಾಜಪೇಯಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅವರಿಗೆ ಜೀವರಕ್ಷಕ ಒದಗಿಸಲಾಗಿದೆ ಎಂದು ಏಮ್ಸ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ವಾಜಪೇಯಿ ಅವರು ಮೂತ್ರಪಿಂಡ ಸೋಂಕಿಗೆ ತುತ್ತಾಗಿರುವುದು ಜೂನ್ 11ರಂದು ಪತ್ತೆಯಾಗಿತ್ತು. ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವ ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೋದಿ ಅವರ ಭೇಟಿಗೂ ಮುನ್ನ ಜವಳಿ ಸಚಿವೆ ಸ್ಮೃತಿ ಇರಾನಿ ಕೂಡ ಏಮ್ಸ್‌ಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.
Prime Minister Narendra Modi reaches All India Institutes of Medical Sciences (AIIMS) to meet Former Prime Minister Atal Bihari Vajpayee. #Delhi pic.twitter.com/BeGhqVh0z2
— ANI (@ANI) 15 August 2018
93 ವರ್ಷದ ವಾಜಪೇಯಿ ಅವರು ಮದುಮೇಹದಿಂದ ಬಳಲುತ್ತಿದ್ದು, ಅವರ ಒಂದು ಮೂತ್ರಪಿಂಡ ಮಾತ್ರ ಕೆಲಸ ಮಾಡುತ್ತಿದೆ. 2009ರಲ್ಲಿ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು.












Click it and Unblock the Notifications