ನರೇಂದ್ರ ಮೋದಿ ಜೀವನಗಾಥೆ ಪಠ್ಯಕ್ಕೆ?
ಭೋಪಾಲ್, ಮೇ 26: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇನ್ನೂ ಪ್ರಮಾಣ ವಚನ ಸ್ವೀಕರಿಸಲ್ಲ. ಆಗಲೇ ಅವರು ಹತ್ತುಹಲವು ದಾಖಲೆಗಳನ್ನು ಮಾಡುತ್ತಾ ಪ್ರದಾನಿ ಮಟ್ಟದತ್ತ ಸಾಗುತ್ತಿದ್ದಾರೆ. ಈ ಮಧ್ಯೆ, ನರೇಂದ್ರ ಮೋದಿ ಅವರ ಜೀವನದ ಯಶಸ್ಸಿನ ಕಥೆ ಶಾಲಾ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಮಧ್ಯಪ್ರದೇಶದ ಸರಕಾರ ಆಶಿಸಿದೆ.
ಮಧ್ಯಪ್ರದೇಶದ ಸರಕಾರದ ಬಿಜೆಪಿ ಸರಕಾರವು ಈ ಬಗ್ಗೆ ಗಂಭೀರ ಆಲೋಚನೆ ನಡೆಸಿದ್ದು, ಚಿಕ್ಕ ವಯಸ್ಸಿನಲ್ಲೇ ನರೇಂದ್ರ ಮೋದಿ ಅವರಂತಹ ಜೀವನಕಥೆಗಳನ್ನು ಮಕ್ಕಳು ಆಲಿಸಬೇಕು. ಈ ಬಗ್ಗೆ ನಾನಾ ಕ್ಷೇತ್ರಗಳಿಂದ ಸಲಹೆಗಳು ಬರುತ್ತಿವೆ ಎಂದು ಶಿಕ್ಷಣ ಸಚಿವ ಪರಾಸ್ ಜೈನ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಮೋದಿ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. (PTI)












Click it and Unblock the Notifications