ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರ್‍ಯಾಲಿಗೆ ಹೋಗುತ್ತಿದ್ದಾಗ ಬೆಂಗಾವಲು ಪಡೆಯನ್ನು ತಡೆದ ಪ್ರಧಾನಿ ಮೋದಿ: ಕಾರಣ ಏನು ಗೊತ್ತಾ?

|
Google Oneindia Kannada News

ಶಿಮ್ಲಾ, ನವೆಂಬರ್ 10: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನೆರಡು ದಿನ ಬಾಕಿ ಇದೆ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಮಾಚಲದಲ್ಲಿ ಪ್ರಚಾರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ನಡುವೆ ಕಾಂಗ್ರಾದಲ್ಲಿ ರ್‍ಯಾಲಿಗೆ ತೆರಳುವಾಗ ಪ್ರಧಾನಿ ಮೋದಿ ಅವರು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ತಮ್ಮ ಬೆಂಗಾವಲು ಪಡೆಯನ್ನು ತಡೆದರು. ಇದರ ವಿಡಿಯೋ ಹೊರಹೊಮ್ಮಿದೆ.

ಮಾಹಿತಿಯ ಪ್ರಕಾರ, ಕಾಂಗ್ರಾ ಜಿಲ್ಲೆಯ ಚಂಬಿಯಲ್ಲಿ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಪ್ರಧಾನಿ ಮೋದಿ ಅವರು ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸಿದರು ಮತ್ತು ರೋಗಿಯನ್ನು ಹೊತ್ತೊಯ್ಯುವ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ರೋಗಿಯ ಜೀವಕ್ಕೆ ಯಾವುದೇ ರೀತಿಯ ಅಪಾಯವಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಗಾವಲು ಪಡೆ ನಿಲ್ಲಿಸುವ ಮೂಲಕ ಸೂಕ್ಷ್ಮತೆ ಪ್ರದರ್ಶಿಸಿದ್ದಾರೆ.

ಗುಜರಾತ್‌, ಹಿಮಾಚಲ ಚುನಾವಣೆ ಸಮೀಕ್ಷೆ: ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ?ಗುಜರಾತ್‌, ಹಿಮಾಚಲ ಚುನಾವಣೆ ಸಮೀಕ್ಷೆ: ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ?

ರೋಗಿಯು ಆಸ್ಪತ್ರೆಗೆ ತಲುಪುವುದು ಬಹಳ ಮುಖ್ಯ. ಆಂಬ್ಯುಲೆನ್ಸ್‌ ರಸ್ತೆಯ ಮೂಲಕ ಹಾದುಹೋದ ನಂತರ ಪಿಎಂ ಮೋದಿ ತಮ್ಮ ಬೆಂಗಾವಲು ಪಡೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ವಾಸ್ತವವಾಗಿ, ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಹಾದುಹೋಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದೇ ವೇಳೆ ವಾಹನಗಳನ್ನು ಮೋದಿ ಅವರು ಪ್ರಯಾಣಿಸುವ ಮಾರ್ಗದಲ್ಲಿ ಚಲಿಸದಂತೆ ತಡೆಯಲಾಗಿತ್ತು. ಇದೇ ಸಂದರ್ಭದಲ್ಲಿ ಆಮರ್ಗಾದಲ್ಲಿ ಚಲಿಸಲು ಅಬ್ಯುಲೆನ್ಸ್ ಹೋಗಲು ಕಾದಿರುವುದನ್ನಿ ಗಮನಿಸಿದ ಮೋದಿ ಅವರು ತಾವು ತೆರಳುವುದಕ್ಕೂ ಮುನ್ನ ತಮ್ಮ ಮಾರ್ಗದಲ್ಲಿ ಅಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಮೋದಿಯವರ ಈ ಗುಣ ಕಂಡು ನೆರೆದಿದ್ದ ಜನರು ಕೂಡ ಸಂತಸಪಟ್ಟರು.

ಪ್ರಧಾನಿ ಮೋದಿಯವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರಿನೊಳಗೆ ಪ್ರಧಾನಿ ಮೋದಿ ಕುಳಿತಿರುವುದು ಮತ್ತು ಅವರ ಬೆಂಗಾವಲು ವಾಹನವನ್ನು ನಿಲ್ಲಿಸಿ ಮುಂಭಾಗದಿಂದ ಆಂಬ್ಯುಲೆನ್ಸ್ ವೇಗವಾಗಿ ಸಾಗುತ್ತಿರುವುದನ್ನು ಕಾಣಬಹುದು.

ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ

ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ

ಹಿಮಾಚಲ ಪ್ರದೇಶದ 2022 ರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ನವೆಂಬರ್ 12 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.ಹಿಮಾಚಲ ಪ್ರದೇಶದ ಸದನದ ಅವಧಿ ಜನವರಿ 8, 2023 ರಂದು ಕೊನೆಗೊಳ್ಳಲಿದೆ. ಎಲ್ಲಾ 68 ಕ್ಷೇತ್ರಗಳಲ್ಲಿ ನವೆಂಬರ್ 12 ರಂದೇ ಮತದಾನ ನಡೆಯಲಿದೆ. 43,000 ಮಂದಿ ಹೊಸ ಮತದಾರರು ಈ ಭಾರಿ ಸೇರ್ಪಡೆಯಾಗಿದ್ದಾರೆ. ಸಾವಿರಕ್ಕೂ ಮೇಲ್ಪಟ್ಟು 100 ವರ್ಷ ಮೀರಿದ ಮತದಾರರಿದ್ದು, ಅವರ ಮನೆಗಳಿಗೇ ಹೋಗಿ ಮತದಾನ ಮಾಡಿಸಲಾಗುವುದು ಎಂದು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ತಿಳಿಸಿದ್ದಾರೆ. ರಾಜ್ಯದ ಗಡಿ ಪ್ರದೇಶಗಳಲ್ಲಿ ಹಣ, ಡ್ರಗ್ಸ್ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುವುದು ಎಂದಿದ್ದಾರೆ.

ಈ ಹಿಂದೆ ಪೈಪೋಟಿ ಹೇಗಿತ್ತು?

ಈ ಹಿಂದೆ ಪೈಪೋಟಿ ಹೇಗಿತ್ತು?

ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ದೃಷ್ಟಿಕೋನದಿಂದಾಗಿ ಹಿಮಾಚಲ ಪ್ರದೇಶದ ಚುನಾವಣೆ ಮಹತ್ವ ಪಡೆದಿದೆ. ಹಿಮಾಚಲ ಪ್ರದೇಶ 68 ಸದಸ್ಯ ಬಲ ಹೊಂದಿದ್ದು, ಬಹುಮತಕ್ಕೆ 35 ಸ್ಥಾನಗಳ ಅಗತ್ಯ ಇದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 44 ಸ್ಥಾನಗಳಲ್ಲಿ ಗೆಲುವು ಗಳಿಸಿ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸಿತ್ತು.

ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರು ನವೆಂಬರ್ 6ರಂದು ಶಿಮ್ಲಾದಲ್ಲಿ ಪಕ್ಷದ 'ಮಿಷನ್ ಡಾಕ್ಯುಮೆಂಟ್' (ಪ್ರಣಾಳಿಕೆ) ಬಿಡುಗಡೆ ಮಾಡಿದರು. ಈ ನಿರ್ಣಯ ಪತ್ರದಲ್ಲಿ 11 ಭರವಸೆಗಳಿವೆ. ಈ ಭರವಸೆಗಳು ಸಮಾಜದಲ್ಲಿ ಸಮಾನತೆಯನ್ನು ತರುತ್ತವೆ. ಈ ಭರವಸೆಗಳು ನಮ್ಮ ಯುವಕರು ಮತ್ತು ರೈತರಿಗೆ ಬಲವನ್ನು ನೀಡುತ್ತವೆ, ತೋಟಗಾರಿಕೆಯನ್ನು ಬಲಪಡಿಸುತ್ತವೆ, ಸರ್ಕಾರಿ ನೌಕರರಿಗೆ ನ್ಯಾಯವನ್ನು ತರುತ್ತವೆ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ. ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ದೊರೆಯಲಿದೆ ಎಂದು ಹೇಳಿದರು. ಇದಲ್ಲದೇ 6-12ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಸೈಕಲ್ ಹಾಗೂ ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಬಿಜೆಪಿಗೆ ಗೆಲುವು

ಬಿಜೆಪಿಗೆ ಗೆಲುವು

ರಿಪಬ್ಲಿಕ್ ಪಿ-ಮಾರ್ಕ್ ಒಪಿನಿಯನ್ ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ. ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಪ್ರಮುಖ ಹಣಾಹಣಿ ಏರ್ಪಟ್ಟಿದೆ. ಇತರೆ ಪಕ್ಷಗಳು ಮತ್ತು ಪಕ್ಷೇತರರು ಸೇರಿ ಒಟ್ಟು 412 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು ಅಭ್ಯರ್ಥಿಗಳ ಪೈಕಿ 24 ಮಹಿಳೆಯರು ಮತ್ತು 388 ಪುರುಷರು. ಈ ಅಭ್ಯರ್ಥಿಗಳ ಭವಿಷ್ಯವನ್ನು 55,92,828 ಮತದಾರರು ನಿರ್ಧರಿಸಲಿದ್ದು, ಅವರು ಭಾರತೀಯ ಚುನಾವಣಾ ಆಯೋಗ ಸ್ಥಾಪಿಸಿರುವ 7,881 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ.

English summary
Modi, who is involved in the Himachal Pradesh assembly election campaign, has been appreciated by the people by giving way to an ambulance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X