'ಮೋದಿ ಶಿಮ್ಲಾ ಭೇಟಿ ಸೋಲಿನ ಭಯ ಹೋಗಲಾಡಿಸುವ ವಿಫಲ ಯತ್ನ'
ಶಿಮ್ಲಾ, ಜೂ. 1: ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕಿ ಮತ್ತು ಮಂಡಿ ಸಂಸದೆಯಾಗಿರುವ ಪ್ರತಿಭಾ ಸಿಂಗ್ ಮಂಗಳವಾರದ ಬಿಜೆಪಿಯ ಪ್ರಧಾನ ಮಂತಿ ನರೇಂದ್ರ ಮೋದಿ ಅವರ ಶಿಮ್ಲಾ ರ‍್ಯಾಲಿಗಾಗಿ ಸರಕಾರಿ ಮತ್ತು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಈ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಕೋಟಿಗಟ್ಟಲೆ ಖರ್ಚು ಮಾಡಿದ ಸಂದರ್ಭದಲ್ಲಿ ಪ್ರಧಾನಿ ಅವರು ಹಿಮಾಚಲ ಪ್ರದೇಶದ ಜನತೆಗೆ ಏನನ್ನೂ ಘೋಷಿಸದ ಕಾರಣ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಸರಕಾರದ ಯೋಜನೆಗಳ ಫಲಾನುಭವಿಗಳನ್ನು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಬಲವಂತಗೊಳಿಸಲಾಗಿದೆ ಎಂದು ಅವರು ಟೀಕೆ ಮಾಡಿದ್ದಾರೆ.

ನೋವು ಮತ್ತು ದುಃಖದಂತೆ ಅರ್ಥ
ಸರಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಬದಲು ಅವರು ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಿಂದ ಕೆಟ್ಟದಾಗಿ ಹಾನಿಗೊಳಗಾದ ಜನರೊಂದಿಗೆ ಪ್ರಧಾನಿ ಮೋದಿ ಮಾತನಾಡಬೇಕಿತ್ತು. ಆದರೆ ಇದು ಪ್ರಧಾನಿ ಮೋದಿ ಅವರ ಸರಕಾರದಿಂದ ಈ ಜನರಿಗೆ ಉಂಟಾದ ನೋವು ಮತ್ತು ದುಃಖದಂತೆ ಅರ್ಥ ಎಂದು ಕಾಣಿಸುತ್ತದೆ. ಪ್ರಧಾನಿಯವರ ಈ ಕಾರ್ಯಕ್ರಮವು ಬಿಜೆಪಿಯ ಸೋಲಿನ ಭಯ ಮತ್ತು ಹತಾಶೆಯನ್ನು ಹೋಗಲಾಡಿಸುವ ವಿಫಲ ಪ್ರಯತ್ನ ಎಂದು ಸಂಸದೆಯಾಗಿರುವ ಪ್ರತಿಭಾ ಸಿಂಗ್ ಹೆಳಿದ್ದಾರೆ.

ಹಿಮಾಚಲ ಪ್ರದೇಶಕ್ಕೆ ಏನನ್ನೂ ಘೋಷಿಸದೆ ಭೇಟಿ
ಇದೇ ಸಮಯದಲ್ಲಿ ಸಿಎಲ್‌ಪಿ ನಾಯಕರಾದ ಮುಖೇಶ್ ಅಗ್ನಿಹೋತ್ರಿ ಅವರು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರನ್ನು ಪ್ರಧಾನಿಯಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವನ್ನು ಪಡೆಯಲು ವಿಫಲವಾಗಿದ್ದಾರೆ ಎಂದು ಟೀಕಿಸಿದ್ದಾರೆ. ಉನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಅಗ್ನಿಹೋತ್ರಿ ಹಿಮಾಚಲ ಪ್ರದೇಶಕ್ಕೆ ಏನನ್ನೂ ಘೋಷಿಸದೆ ರಾಜ್ಯಕ್ಕೆ ಪ್ರಧಾನಿ ಮೂರನೇ ಬಾರಿ ಭೇಟಿ ಕೊಟ್ಟಂತೆ ಆಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಧಾನಿ ಮುಂದೆ ಹೇಳುವುದು ಮತ್ತು ಅದಕ್ಕೆ ಸರಿಯಾದ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದು ಮುಖ್ಯಮಂತ್ರಿ ಅವರ ಕೆಲಸವಾಗಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಭರವಸೆಗಳನ್ನು ಸುಳ್ಳು ಮಾಡಿದ್ದಾರೆ
ಇನ್ನೂ ಆಮ್ ಆದ್ಮಿ ಪಕ್ಷ ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮೋದಿ ರಾಜ್ಯಕ್ಕೆ ಏನನ್ನೂ ನೀಡದ ಹಿಮಾಚಲ ಜನರು ದ್ರೋಹ ಬಗೆದಿದ್ದಾರೆ ಎಂದು ಹೇಳಿದೆ. "ರಾಜ್ಯಕ್ಕೆ ಕೆಲವು ದೊಡ್ಡ ದೊಡ್ಡ ಯೋಜನೆಗಳು ಸಿಗಬಹುದು ಎಂದು ಜನರು ನಿರೀಕ್ಷಿಸುತ್ತಿದ್ದರು. ಆದರೆ ಅವರ ಎಲ್ಲಾ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಮಾಡಿದ್ದಾರೆ" ಎಂದು ಪಕ್ಷದ ವಕ್ತಾರ ಗೌರವ್ ಶರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಮ್ಯೂನಿಸ್ಟ್ ಪಾರ್ಟಿ ಆಪ್ ಇಂಡಿಯಾ (ಮಾಕ್ಸ್‌ವಾದಿ) ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏನನ್ನೂ ಭರವಸೆ ನೀಡದೆ ಹೋಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.

ಹಿಮಾಚಲದ ಟೋಪಿ, ಶಾಲು ಮತ್ತು ಪೇಟಿಂಗ್ ನೀಡಿ ಸ್ವಾಗತ
ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಎಂಟು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಯೋಜನೆಗೊಂಡಿದ್ದ ಗರೀಬ್ ಕಲ್ಯಾಣ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಭಾಗವಹಿಸಿದ್ದರು. ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಸಾಂಪ್ರದಾಯಿಕ ಹಿಮಾಚಲದ ಟೋಪಿ, ಶಾಲು ಮತ್ತು ಪೇಟಿಂಗ್ ನೀಡಿ ಸ್ವಾಗತಿಸಿದ್ದರು. ಮೋದಿ ಅವರ ಸರಕಾರದ ವರ್ಷಾಚರಣೆ ಕೂಡ ಹಿಮಾಚಲ ಪ್ರದೇಶದ ಮಂಡಿ ಎಂಬಲ್ಲಿ ಆಗಿತ್ತು.
(ಒನ್ಇಂಡಿಯಾ ಸುದ್ದಿ)












Click it and Unblock the Notifications