• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಯಿಂದ ಎನ್‌ಸಿಸಿ ಕೆಡೆಟ್‌ಗಳ ಮಾಹಿತಿ ಸಂಗ್ರಹ : ರಾಹುಲ್ ಆರೋಪ

By Prasad
|

ಬೆಂಗಳೂರು, ಮಾರ್ಚ್ 26 : ನರೇಂದ್ರ ಮೋದಿಯವರು ಕೋಟ್ಯಂತರ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೆ ಆರೋಪಿಸಿದ್ದಾರೆ.

ಇದರ ಜೊತೆಗೆ, ನರೇಂದ್ರ ಮೋದಿಯವರು ದೇಶದ ಮಕ್ಕಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ನಮೋ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು 13 ಲಕ್ಷ ಎನ್‌ಸಿಸಿ ಕೆಡೆಟ್ ಗಳನ್ನು ಬಲವಂತ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

'ನಮೋ ಆ್ಯಪ್' ದತ್ತಾಂಶ ಸೋರಿಕೆಗೆ ರಾಹುಲ್ ಗಾಂಧಿ ಟೀಕೆ

ಮೈಸೂರಿನಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುತ್ತಿದ್ದಾಗ, ಎನ್‌ಸಿಸಿ ಸಿ ಸರ್ಟಿಫಿಕೇಟ್ ಮುಗಿಸಿದ ವಿದ್ಯಾರ್ಥಿಗಳಿಗೆ (ಒಂದು ವೇಳೆ ಪ್ರಧಾನಿಯಾದರೆ) ಯಾವ ರೀತಿ ಅನುಕೂಲ ಒದಗಿಸಲು ಬಯಸುತ್ತೀರಿ ಎಂದು ಓರ್ವ ವಿದ್ಯಾರ್ಥಿನಿ ರಾಹುಲ್ ಅವರನ್ನು ಪ್ರಶ್ನೆ ಕೇಳಿದ್ದಳು.

Modi is Big Boss, likes to spy on Indians : Rahul Gandhi

ಅದಕ್ಕೆ ರಾಹುಲ್ ಅವರು, ನನಗೆ ಎನ್‌ಸಿಸಿ ಬಗ್ಗೆ, ಅದರಲ್ಲಿ ನೀಡುವ ತರಬೇತಿ ನೀಡುವ ಬಗ್ಗೆ ಏನೂ ಮಾಹಿತಿಯಿಲ್ಲ ಎಂದು ನೇರವಾಗಿಯೇ ಉತ್ತರ ನೀಡಿದ್ದರು. ಇದು ಭಾರೀ ಟೀಕೆಗೂ ಕಾರಣವಾಗಿತ್ತು. ಇದೀಗ, ರಾಹುಲ್ ಅವರೇ ಎನ್‌ಸಿಸಿ ಕೆಡೆಟ್ ಗಳಿಗೆ ಸಂಬಂಧಿಸಿದ ಸಂಗತಿಯನ್ನು ಟ್ವಿಟ್ಟರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಅವರು (ಮೋದಿ) ಬಿಗ್ ಬಾಸ್, ಅವರಿಗೆ ಭಾರತೀಯರ ಮೇಲೆ ಬೇಹುಗಾರಿಕೆ ಮಾಡುವುದೆಂದರೆ ಎಲ್ಲಿಲ್ಲದ ಆನಂದ. ನಮೋ ಆಪ್ ರಹಸ್ಯವಾಗಿ ಆಡಿಯೋ, ವಿಡಿಯೋಗಳನ್ನು ದಾಖಲಿಸಿಕೊಳ್ಳುತ್ತಿದೆ. ಜಿಪಿಎಸ್ ಮೂಲಕ ನಿಮ್ಮ ಮಾತ್ರವಲ್ಲ, ನಿಮ್ಮ ಸ್ನೇಹಿತರ, ಬಂಧುಗಳ ವಿಳಾಸ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

22 ವೈಯಕ್ತಿಕ ಫೀಚರ್ ಗಳ ಬಳಕೆಗೆ ಅನುಮತಿ ಕೇಳುತ್ತಿದೆ 'ನಮೋ ಆ್ಯಪ್'

ಮೋದಿಯವರು ಪ್ರಧಾನಿ ಹುದ್ದೆಯನ್ನೇ ದುರ್ಬಳಿಸಿಕೊಳ್ಳುತ್ತಿದ್ದು, ನಮೋ ಆಪ್ ಮೂಲಕ ಕೋಟ್ಯಂತರ ಭಾರತೀಯರ ಮಾಹಿತಿಯನ್ನು ಸಂಗ್ರಹಿಸಿ ತಮ್ಮ ವೈಯಕ್ತಿಕ ಡೇಟಾಬೇಸ್ ರೆಡಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ರಾಹುಲ್ ಗಾಂಧಿ ಅವರ ಗಂಭೀರ ಆರೋಪ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಭಾರತೀಯರೊಡನೆ ಸಂವಹನ ನಡೆಸಲು ತಂತ್ರಜ್ಞಾನ ಬಳಸಿಕೊಳ್ಳಲು ಯಾವುದೇ ಆಕ್ಷೇಪಣೆಯಿಲ್ಲ. ಆದರೆ, ಅವರು ಇದಕ್ಕಾಗಿ ಪ್ರಧಾನ ಮಂತ್ರಿ ಕಚೇರಿಯನ್ನು ಬಳಸುತ್ತಿದ್ದಾರೆ. ಈ ಎಲ್ಲ ಡೇಟಾ ನರೇಂದ್ರ ಮೋದಿಯವರಿಗೆ ಸೇರಿದ್ದಲ್ಲ, ಅದು ಭಾರತಕ್ಕೆ ಸೇರಿದ್ದು ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rahul Gandhi says, Modi’s NaMo App secretly records audio, video, contacts of your friends & family and even tracks your location via GPS. He’s the Big Boss who likes to spy on Indians. Now he wants data on our children. 13 lakh NCC cadets are being forced to download the APP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more