• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಗಾಂಧಿಗಿಂತ ಮೋದಿಯೇ ಖಾದಿಗೆ ದೊಡ್ಡ ಬ್ರ್ಯಾಂಡ್ ನೇಮ್'

|

ಹರಿಯಾಣ, ಜನವರಿ 14: ಮಹಾತ್ಮ ಗಾಂಧಿ ಭಾವಚಿತ್ರವನ್ನು ನಿಧಾನವಾಗಿ ಕರೆನ್ಸಿ ನೋಟುಗಳಿಂದ ತೆಗೆಯಲಾಗುವುದು. ನರೇಂದ್ರ ಮೋದಿ ಅವರು ಗಾಂಧಿಗಿಂತ ದೊಡ್ಡ ಬ್ರ್ಯಾಂಡ್ ಎಂಬ ಹೇಳಿಕೆಗಳ ಮೂಲಕ ಹರಿಯಾಣದ ಸಚಿವ ಅನಿಲ್ ವಿಜ್ ಶನಿವಾರ ವಿಪರೀತ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ನೋಟುಗಳಲ್ಲಿ ಗಾಂಧಿ ಭಾವಚಿತ್ರ ಬಂದ ದಿನದಿಂದಲೇ ಅಪಮೌಲ್ಯ ಆರಂಭವಾಯಿತು. ನಿಧಾನವಾಗಿ ನೋಟುಗಳಿಂದ ಅವರ ಭಾವಚಿತ್ರ ತೆಗೆಯಲಾಗುವುದು ಎಂದಿದ್ದಾರೆ. ಆದರೆ ನಂತರ ಸಚಿವರು ತಮ್ಮ ಹೇಳಿಕೆಯನ್ನು ವಾಪಸ್ ಪದೆದಿದ್ದಾರೆ. ಖಾದಿ ಗ್ರಾಮೋದ್ಯೋಗದ ಕ್ಯಾಲೆಂಡರ್ ನಲ್ಲಿ ಮೋದಿ ಚರಕದ ಜೊತೆಗೆ ಇರುವ ಭಾವಚಿತ್ರ ಕಾಣಿಸಿಕೊಳ್ಳುವ ಜೊತೆಗೆ ವಿವಾದ ಆರಂಭವಾಯಿತು.[ಖಾದಿ ಆಯೋಗದ ಕ್ಯಾಲೆಂಡರ್ ನಿಂದ ಗಾಂಧಿ ಮಾಯ!]

ಅದರಲ್ಲಿ ಯಾವಾಗಲೂ ಗಾಂಧಿ ಭಾವಚಿತ್ರ ಇರುತ್ತಿತ್ತು. ಅಂಬಾಲದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ವಿಜ್, ಗಾಂಧಿ ಹೆಸರಿನಿಂದ ಖಾದಿ ಮಾರಾಟದಲ್ಲಿ ಕುಸಿತವಾಗಿದೆ. ರುಪಾಯಿ ನೋಟಿನಲ್ಲಿ ಗಾಂಧಿ ಭಾವಚಿತ್ರ ಕಾಣಿಸಿಕೊಂಡಾಗಿನಿಂದ ಅಪಮೌಲ್ಯ ಆರಂಭವಾಯಿತು. ಖಾದಿ ಗ್ರಾಮೋದ್ಯೋಗದ ಕ್ಯಾಲೆಂಡರ್ ನಿಂದ ಗಾಂಧಿ ಭಾವಚಿತ್ರ ತೆಗೆದು, ಮೋದಿಯದು ಹಾಕಿದ್ದು ಒಳ್ಳೆಯದಾಯಿತು ಎಂದಿದ್ದರು.

ಮೋದಿ ಖಾದಿ ಜೊತೆಗೆ ತಳಕು ಹಾಕಿಕೊಂಡ ಮೇಲೆ ಖಾದಿ ಉತ್ಪನ್ನಗಳ ಮಾರಾಟ ಶೇ 14ರಷ್ಟು ಹೆಚ್ಚಾಗಿದೆ. ಗಾಂಧಿಗಿಂತ ಮೋದಿಯೇ ಖಾದಿಗೆ ದೊಡ್ಡ ಬ್ರ್ಯಾಂಡ್ ನೇಮ್ ಎಂದಿದ್ದರು ಅನಿಲ್ ವಿಜ್.

English summary
Anil Vij, a minister from Haryana, on Saturday sparked a fresh controversy, saying Mahatma Gandhi will gradually be removed from currency notes and that Modi is a bigger brand name than Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X