ಮೋದಿ ಬಳಗದ ಕೊನೆಯ ನಾಟಕ: ಬಜೆಟ್ ಬಗ್ಗೆ ರಾಹುಲ್ ವ್ಯಂಗ್ಯ
ನವದೆಹಲಿ, ಫೆಬ್ರವರಿ 01: ಮೋದಿ ಬಳಗದ ಕೊನೆಯ ನಾಟಕ (ಜುಮ್ಲಾ) ಈ ಮಧ್ಯಂತರ ಬಜೆಟ್ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಧ್ಯಂತರ ಬಜೆಟ್ ಅನ್ನು ವ್ಯಂಗ್ಯ ಮಾಡಿದ್ದಾರೆ.
ಕಳೆದ ಐದು ವರ್ಷದಲ್ಲಿ ನಿಮ್ಮ ಅಸಮರ್ಥತೆ ಮತ್ತು ಅಹಂಕಾರದ ಆಡಳಿತ ರೈತರ ಜೀವನವನ್ನು ಹಾಳು ಮಾಡಿದೆ. ಈಗ ಕೇವಲ ದಿನಕ್ಕೆ 17 ರೂಪಾಯಿ ನೀಡುವ ಮೂಲಕ ಅವರನ್ನು ಅವಮಾನಗೊಳಿಸಿದ್ದೀರಿ ಎಂದು ಅವರು ರಾಹುಲ್ ಗಾಂಧಿ ಹೇಳಿದ್ದಾರೆ.
ಬಜೆಟ್ ಮಂಡನೆ ಬಳಿಕ ಪಿಯೂಷ್ ನೀಡಿದ ವಿವರಣೆಗಳೇನು?
Dear NoMo,
— Rahul Gandhi (@RahulGandhi) February 1, 2019
5 years of your incompetence and arrogance has destroyed the lives of our farmers.
Giving them Rs. 17 a day is an insult to everything they stand and work for. #AakhriJumlaBudget
ಮಧ್ಯಂತರ ಬಜೆಟ್ ಬಗ್ಗೆ ಟ್ವೀಟ್ ಮಾಡಿ ತಮ್ಮ ಅಸಮ್ಮತಿಯನ್ನು ರಾಹುಲ್ ಗಾಂಧಿ ಹೊರಹಾಕಿದ್ದು, ಬಜೆಟ್ ಕೇವಲ ಚುನಾವಣೆ ದೃಷ್ಠಿಕೋನವನ್ನು ಹೊಂದಿದೆ ಎಂದು ತೆಗಳಿದ್ದಾರೆ.

ಈ ಬಜೆಟ್ ಮೋದಿ ಅವರ ಕೊನೆಯ ಬಜೆಟ್ ಆಗಲಿದೆ ಎಂದು ಹೇಳಿರುವ ಅವರು, ಮುಂದಿನ ಚುನಾವಣೆಯಲ್ಲಿ ತಮ್ಮ ಸರ್ಕಾರ
ಅಸ್ತಿತ್ವಕ್ಕೆ ಬರಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.












Click it and Unblock the Notifications