• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

56 ಏರ್ಬಸ್ C295MW ವಿಮಾನಗಳ ಸ್ವಾಧೀನವನ್ನು ಅಧಿಕೃತಗೊಳಿಸಿದ ಭಾರತ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 24: ಭಾರತೀಯ ವಾಯಪಡೆಯು (IAF) AVRO ಫ್ಲೀಟ್ ಬದಲಿಗೆ 56 ಏರ್ಬಸ್ C295MW ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಭಾರತ ಅಧಿಕೃತಗೊಳಿಸಿದೆ. ಖಾಸಗಿ ಕ್ಷೇತ್ರದಲ್ಲಿ ಇದು ಮೊದಲ ಮೇಕ್ ಇನ್ ಇಂಡಿಯಾ' ಏರೋಸ್ಪೇಸ್ ಕಾರ್ಯಕ್ರಮವಾಗಿದೆ. ಇದು ಸಂಪೂರ್ಣವಾಗಿ ಕೈಗಾರಿಕಾ ಪರಿಸರ ವ್ಯವಸ್ಥೆಯ ಪರಿಪೂರ್ಣವಾದ ಅಭಿವೃದ್ಧಿ'ಯನ್ನು ಒಳಗೊಂಡಿದೆ. ಉತ್ಪಾದನೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಜೀವನಚಕ್ರದ ವಿತರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿರುತ್ತದೆ.

ಈ ಒಪ್ಪಂದದಡಿ ಏರ್‌ಬಸ್‌ ಸ್ಪೇನ್‌ನಲ್ಲಿರುವ ಸೆವಿಲ್ಲೆಯ ತನ್ನ ಅಂತಿಮ ಅಸೆಂಬ್ಲಿ ಮಾರ್ಗದ ಮೂಲಕ ಹಾರಾಟಕ್ಕೆ ಸಿದ್ಧವಾಗಿರುವ 16 ವಿಮಾನಗಳನ್ನು ಪೂರೈಕೆ ಮಾಡಲಿದೆ. ನಂತರದ 40 ವಿಮಾನಗಳನ್ನು ಭಾರತದಲ್ಲಿನ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ನಲ್ಲಿ ಉತ್ಪಾದನೆ ಮತ್ತು ಜೋಡಣೆ ಮಾಡಿ ವಿತರಣೆ ಮಾಡಲಾಗುತ್ತದೆ. ಎರಡೂ ಕಂಪನಿಗಳ ನಡುವೆ ಮಾಡಿಕೊಂಡಿರುವ ಕೈಗಾರಿಕಾ ಪಾಲುದಾರಿಕೆ ಪ್ರಕಾರ ಈ ಪ್ರಕ್ರಿಯೆ ನಡೆಯಲಿದೆ.

ಒಪ್ಪಂದ ಜಾರಿಗೆ ಬಂದ ದಿನದಿಂದ 4 ವರ್ಷಗಳ ಅವಧಿಯಲ್ಲಿ ಮೊದಲ 16 ವಿಮಾನಗಳು ವಿತರಣೆ ಮಾಡಲಾಗುತ್ತದೆ. ಎಲ್ಲಾ ಐಎಎಫ್ C295MW ವಿಮಾನಗಳನ್ನು ದೇಶೀಯವಾಗಿ ತಯಾರಿಸುವ ಎಲೆಕ್ಟ್ರಾನಿಕ್ ವಾರ್ ಫೇರ್ ಸೂಟ್‌ನೊಂದಿಗೆ ಸುಸಜ್ಜಿತಗೊಳಿಸಿ ಹಸ್ತಾಂತರ ಮಾಡಲಾಗುತ್ತದೆ.

ಈ ಬಗ್ಗೆ ಮಾತನಾಡಿದ ಏರ್ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ನ ಸಿಇಒ ಮೈಕೆಲ್ ಶೋಲ್ಹಾರ್ನ್ ಅವರು, ''ಮುಂದಿನ 10 ವರ್ಷಗಳಲ್ಲಿ ಭಾರತದ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈ ಒಪ್ಪಂದವು ಬೆಂಬಲ ನೀಡುತ್ತದೆ. ಇದರ ಜೊತೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಬರುವಂತೆ ಮಾಡುತ್ತದೆ ಮತ್ತು 15,000 ಅತ್ಯುತ್ತಮ ಕೌಶಲ್ಯಭರಿತ ನೇರ ಉದ್ಯೋಗಗಳು ಹಾಗೂ 10,000 ದಷ್ಟು ಪರೋಕ್ಷ ಉದ್ಯೋಗಗಳನ್ನು ಸೃಜಿಸುತ್ತದೆ'' ಎಂದರು.

"C295MW ಈ ವಿಭಾಗದ ಮುಂಚೂಣಿಯಲ್ಲಿರುವುದು ಮತ್ತೊಮ್ಮೆ ಸಾಬೀತಾಗಿದೆ ಮತ್ತು ಭಾರತವನ್ನು ಹೊಸ ಆಪರೇಟರ್ ಆಗಿ ಸೇರಿದ ನಂತರ, ಈ ಪ್ರಕಾರವು ತನ್ನ ಹೆಜ್ಜೆ ಗುರುತುಗಳನ್ನು ಮತ್ತಷ್ಟು ವಿಸ್ತರಣೆ ಮಾಡುತ್ತದೆ. ಇದು ಕೇವಲ ಕಾರ್ಯಾಚರಣೆಯ ಅಂಶಗಳ ಮೇಲೆ ಮಾತ್ರವಲ್ಲದೇ ತನ್ನದೇ ಕೈಗಾರಿಕಾ ಮತ್ತು ತಾಂತ್ರಿಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ'' ಎಂದು ಅವರು ಹೇಳಿದರು.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್)ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕರನ್ ಸಿಂಗ್ ಅವರು ಮಾತನಾಡಿ, ''ಇದು ಟಾಟಾಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಭಾರತೀಯ ಸೇನಾ ಉತ್ಪಾದನಾ ಕ್ಷೇತ್ರದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ಕಂಪನಿಯೊಂದು ಸ್ವದೇಶದಲ್ಲಿಯೇ ಸಂಪೂರ್ಣವಾಗಿ ವಿಮಾನವನ್ನು ತಯಾರಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಈ ಪ್ರಯತ್ನವು ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಸಂಕೀರ್ಣವಾದ ಪ್ಲಾಟ್ ಫಾರ್ಮ್ ಗಳನ್ನು ಸೃಷ್ಟಿಸಲು ರಕ್ಷಣಾ ಉತ್ಪಾದಕ ಸಂಸ್ಥೆಯಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ಗೆ ಹೆಮ್ಮೆ ಎನಿಸುತ್ತಿದೆ'' ಎಂದು ತಿಳಿಸಿದರು.

''ಮೇಕ್ ಇನ್ ಇಂಡಿಯಾ'''ಭಾರತದಲ್ಲಿ ಏರ್‌ಬಸ್‌ ಕಾರ್ಯತಂತ್ರದ ಹೃದಯಭಾಗದಂತಿದೆ, ಕಂಪನಿಯು ತನ್ನ ಜಾಗತಿಕ ಉತ್ಪನ್ನ ಬಂಡವಾಳಕ್ಕೆ ದೇಶದ ಕೊಡುಗೆಯನ್ನು ನಿರಂತರವಾಗಿ ಹೆಚ್ಚಿಸುತ್ತದೆ. C295MW ಕಾರ್ಯಕ್ರಮವು ಏರ್‌ಬಸ್‌ ತನ್ನ ಸಂಪೂರ್ಣವಾದ ವಿಶ್ವದರ್ಜೆಯ ವಿಮಾನ ತಯಾರಿಕೆ ಮತ್ತು ಸೇವೆಗಳನ್ನು ನಮ್ಮ ಕೈಗಾರಿಕಾ ಪಾಲುದಾರರ ಸಹಯೋಗದೊಂದಿಗೆ ಭಾರತಕ್ಕೆ ತರುವುದನ್ನು ಎದುರು ನೋಡುತ್ತದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಹೊರತಾಗಿ ಟಾಟಾ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಭಾರತ್ ಡೈನಾಮಿಕ್ ಲಿಮಿಟೆಡ್ ನಂತಹ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾಗಿವೆ.

ಏರ್‌ಬಸ್‌ ಕುರಿತು

ಸುರಕ್ಷಿತ ಮತ್ತು ಏಕೀಕೃತವಾದ ಜಗತ್ತಿಗಾಗಿ ಏರ್‌ಬಸ್‌ ಸುಸ್ಥಿರವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದರಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಏರೋಸ್ಪೇಸ್, ರಕ್ಷಣೆ ಮತ್ತು ಸಂಬಂಧಿತ ಸೇವೆಗಳಲ್ಲಿ ಸಮರ್ಥ ಮತ್ತು ತಾಂತ್ರಿಕವಾಗಿ ಸುಧಾರಿತ ಪರಿಹಾರಗಳನ್ನು ಒದಗಿಸುವತ್ತ ಕಂಪನಿ ನಿರಂತರವಾಗಿ ಹೊಸತನವನ್ನು ನೀಡುತ್ತಾ ಬಂದಿದೆ. ವಾಣಿಜ್ಯ ವಿಮಾನ ಕ್ಷೇತ್ರದಲ್ಲಿ ಏರ್‌ಬಸ್‌ ಅತ್ಯಾಧುನಿಕ ಮತ್ತು ಇಂಧನ ಕ್ಷಮತೆಯ ವಿಮಾನಗಳನ್ನು ಮತ್ತು ಸಂಬಂಧಿತ ಸೇವೆಗಳನ್ನು ನೀಡುತ್ತಿದೆ. ಏರ್‌ಬಸ್‌ ರಕ್ಷಣೆ ಮತ್ತು ಭದ್ರತೆ ವಿಭಾಗದಲ್ಲಿ ಯೂರೋಪಿನ ನಾಯಕನೆನಿಸಿದೆ ಮತ್ತು ವಿಶ್ವದಲ್ಲಿ ಸ್ಪೇಸ್ ವ್ಯವಹಾರಗಳಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಹೆಲಿಕಾಪ್ಟರ್ ವಿಭಾಗದಲ್ಲಿ ಏರ್‌ಬಸ್‌ ಜಗತ್ತಿನಾದ್ಯಂತ ಅತ್ಯಂತ ದಕ್ಷತೆಯ ನಾಗರಿಕ ಮತ್ತು ಮಿಲಿಟರಿ ರೋಟೋಕ್ರಾಫ್ಟ್ ಪರಿಹಾರಗಳು ಮತ್ತು ಸೇವೆಗಳನ್ನು ನೀಡುತ್ತಿದೆ.

English summary
Modi Government The Defence Ministry on September 24 signed a deal with Airbus and Space S.A., Spain, for procurement of 56 C-295MW transport aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X