ಫೆ.23 ರಿಂದ ಮೋದಿ ಸರ್ಕಾರದ ಬಜೆಟ್ ಸೆಷನ್ಸ್ ಶುರು
ನವದೆಹಲಿ, ಜ.21: ನರೇಂದ್ರ ಮೋದಿ ಸರ್ಕಾರದ ಎರಡನೇ ಬಜೆಟ್ ಅಧಿವೇಶನ ಫೆ.23 ರಿಂದ ಮಾ.20ರವರೆಗೆ ನಡೆಯಲಿದೆ. ಫೆ.26 ರಂದು ರೈಲ್ವೆ ಬಜೆಟ್ ಹಾಗೂ ಫೆ.28 ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.
ಫೆ.23ರಂದು ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಮಾರ್ಚ್ 20ಕ್ಕೆ ಅಂತ್ಯಗೊಳ್ಳಲಿದೆ. ಫೆ.26ರಂದು ರೈಲ್ವೆ ಬಜೆಟ್ ಮಂಡನೆ ನಂತರ ಫೆ.27ರಂದು ಆರ್ಥಿಕ ಸಮೀಕ್ಷೆ ನಡೆಸಲಾಗುತ್ತದೆ. ಮರುದಿನ 2015-16ನೇ ಆರ್ಥಿಕ ವರ್ಷದ ಬಜೆಟ್ ಮಂಡನೆಯಾಗಲಿದೆ. [ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ಏಪ್ರಿಲ್ 19 ರ ಸದನದ ಕಲಾಪಕ್ಕೆ ವಿರಾಮವಿದ್ದು, ಏ.20 ರಿಂದ ಮೇ 8 ರ ತನಕ ಮತ್ತೊಮ್ಮೆ ಅಧಿವೇಶನ ನಡೆಯಲಿದೆ ಎಂದು ತಿಳಿದು ಬಂದಿದೆ. ಏ.1 ರಿಂದ ಹೊಸ ಆರ್ಥಿಕ ವರ್ಷ ಆರಂಭಗೊಳ್ಳಲಿದೆ. [ರೈಲ್ವೆ ಬಜೆಟ್ : ಸದಾನಂದ ಗೌಡರ ಚೊಚ್ಚಲ ಬಜೆಟ್ ]
ಮೇಕ್ ಇನ್ ಇಂಡಿಯಾಗ್ಗೆ ಒತ್ತು: ಹಣದುಬ್ಬರ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಈ ಬಾರಿಯ ಬಜೆಟ್ ನಲ್ಲಿ ಬೆಲೆ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. [ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ]

ಜಾಗತಿಕ ಮಟ್ಟದಲ್ಲಿ ಉದ್ಯಮಿಗಳನ್ನು ಆಹ್ವಾನಿಸಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಸಾಧ್ಯವಾಗಿಸಲು ಜೇಟ್ಲಿ ಚಿಂತಿಸಿದ್ದಾರೆ.
ರೈಲು ಪ್ರಯಾಣ ದರ ವ್ಯತ್ಯಯ: ತೈಲೋತ್ಪನ್ನಗಳು ಕಡಿಮೆಯಾಗಿರುವುದರಿಂದ ರೈಲು ಪ್ರಯಾಣದರದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು.ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡುವ ಸಾಧ್ಯತೆ ಇದ್ದೇ ಇದೆ.












Click it and Unblock the Notifications