• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲ್ವೆ ಬಜೆಟ್ : ಸದಾನಂದ ಗೌಡರ ಚೊಚ್ಚಲ ಬಜೆಟ್

By Mahesh
|

ನವದೆಹಲಿ, ಜು.8: ಕರ್ನಾಟಕ ಮೂಲದ ಡಿವಿ ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಸಚಿವರಾಗಿ ಮಂಗಳವಾರ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. 27 ಏಕ್ಸ್ ಪ್ರೆಸ್ ರೈಲು, 5 ಹೊಸ ಜನ ಸಾಧಾರಣ ರೈಲ್ವೆ, 9 ಹೈ ಸ್ಪೀಡ್, ಬುಲೆಟ್ ರೈಲು ಘೋಷಣೆಯೊಂದಿಗೆ ಮೋದಿ ಸರ್ಕಾರದ ಬಜೆಟ್ ಸಮತೋಲನ ಬಜೆಟ್ ಎಂದೆನಿಸಿಕೊಳ್ಳುವ ಆಶಯ ಹೊಂದಿದೆ.

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೊಟ್ಟ ಮೊದಲ ರೈಲ್ವೆ ಬಜೆಟ್ ಮುಖ್ಯಾಂಶ, ಸದನದ ಕಲಾಪ ವಿವರ ಮುಂದಿದೆ:

1.10: ಕನ್ನಡದ ದಾರ್ಶನಿಕ ಸಾಹಿತಿ ಡಿವಿ ಗುಂಡಪ್ಪ ಅವರ ಸಾಲುಗಳನ್ನು ಹೇಳುವ ಮೂಲಕ ಗದ್ದಲ ಮಾಡುವವರಿಗೆ ಚಾಟಿ ಬೀಸಿದ ಸದಾನಂದ ಗೌಡ ಅವರು ಬಜೆಟ್ ಮಂಡನೆ ಮುಕ್ತಾಯಗೊಳಿಸಿದರು.

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ |

ಇಂದು ನಂಬಿಹುದೆ ಮುಂದೆಂದುಮೆಂದಲ್ಲ ||

ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು |

ಇಂದಿಗೀ ಮತವುಚಿತ-ಮಂಕುತಿಮ್ಮ

It is not that after reading this book, there will be no more doubts.

It is not that what we believe today will hold up forever.

If someone points at some shortcoming,

I have an open mind to correct.

But for now, I believe this is right."

- Mankutimma

1.07: 27 ಏಕ್ಸ್ ಪ್ರೆಸ್ ರೈಲು, 5 ಹೊಸ ಜನ ಸಾಧಾರಣ ರೈಲ್ವೆ, 9 ಹೈ ಸ್ಪೀಡ್ಮ್, 1 ಬುಲೆಟ್ ರೈಲು ಘೋಷಣೆ.

1.06: ಜಾಗತಿಕ ಗುಣಮಟ್ಟವಿರುವ 10 ನಿಲ್ದಾಣಗಳ ಅಭಿವೃದ್ಧಿ, ಬೆಂಗಳೂರನ್ನು ಸಬ್ ಅರ್ಬನ್ ಕೆಟಗೆರಿಗೆ ಸೇರಿಸಲು ಚಿಂತನೆ.

1.05: ಬೆಂಗಳೂರು -ಮಂಗಳೂರು ಹೊಸ ಎಕ್ಸ್ ಪ್ರೆಸ್ ರೈಲು, ಶಿವಮೊಗ್ಗ-ಶೃಂಗೇರಿ- ಮಂಗಳೂರು ಹೊಸ ರೈಲು, ಬೆಂಗಳೂರು-ಪ್ಯಾಸೆಂಜರ್ ರೈಲು ಘೋಷಣೆ.

1.03: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಾಕಿ ಇರುವ 29 ರೈಲ್ವೆ ಯೋಜನೆಗಳನ್ನ ಪೂರ್ಣಗೊಳಿಸಲು 20,680 ಕೋಟಿ ರು.

1.00: ಹೊಸ ಮಾರ್ಗ, ಗೇಜ್ ಪರಿವರ್ತನೆ, ಮಾರ್ಗ ಸಮೀಕ್ಷೆ ಬಗ್ಗೆ ಸದಾನಂದ ಗೌಡ ಅವರು ಘೋಷಿಸುತ್ತಿದ್ದಂತೆ ಸದನದಲ್ಲಿ ಗದ್ದಲ ಆರಂಭವಾಗಿದೆ.

12.59: ಮುಂದಿನ ಐದು ವರ್ಷಗಳಲ್ಲಿ ಕಾಗದ ರಹಿತ ಕಚೇರಿಯಾಗಿ ಪರಿವರ್ತನೆ.

12.58: ಕರ್ನಾಟಕ: ಬೀರೂರು-ಅಜ್ಜಂಪುರ ಜೋಡಿ ಮಾರ್ಗ, ಬೆಳಗಾವಿ-ಹುಬ್ಬಳ್ಳಿ ವಯಾ ಕಿತ್ತೂರು ಹೊಸ ಮಾರ್ಗ, ಬೀದರ್-ಯಶವಂತಪುರ ಪ್ರತಿದಿನ, ತಿಪಟೂರು-ದುದ್ದ ಹೊಸ ಮಾರ್ಗ(ಹುಳಿಯೂರು, ಕೆಬಿಕ್ರಾಸ್)

12.56: ದೇಶದ 50 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹೊರಗುತ್ತಿಗೆ ವ್ಯವಸ್ಥೆ ತರಲಾಗುವುದು. ಎಲ್ಲಾ ನಿಲ್ದಾಣಗಳಲ್ಲೂ ವಿಶ್ರಾಂತಿ ಕೊಠಡಿ ಸೌಲಭ್ಯ.

12.55: ಎಲ್ಲಾ ಎ1, ಎ ಕೆಟಗೆರಿ ಸ್ಟೇಷನ್ ಗಳಲ್ಲಿ ವೈ ಫೈ ಸೌಲಭ್ಯ ನೀಡಲಾಗುವುದು

12.54: ಮಾನವ ರಹಿತ ಲೆವೆಲ್ ಕ್ರಾಸಿಂಗ್ ನಿರ್ಮೂಲನೆಗೆ 1,780 ಕೋಟಿ ರು ವೆಚ್ಚದ ಯೋಜನೆ ರೂಪಿಸಲಾಗಿದೆ.

12.53: ಪದವಿಪೂರ್ವ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ internship ಪ್ರಾಜೆಕ್ಟ್ ಮಾಡಲು ಅವಕಾಶ. ರೈಲ್ವೆ ಸಿಬ್ಬಂದಿ ಮಕ್ಕಳಿಗೆ ವಿಶೇಷ ವಿದ್ಯಾಭ್ಯಾಸ ಸೌಲಭ್ಯ.

12.52 : ವಾಜಪೇಯಿ ಕನಸಾದ Diamond Quadrilateral network ಜಾರಿಗೆ ತರಲು ಬದ್ಧ. ಪ್ರಮುಖ ಮೆಟ್ರೋ ನಗರಗಳನ್ನು ಹೈಸ್ಪೀಡ್ ರೈಲು ಮೂಲಕ ಹೆಣೆಯಲಾಗುವುದು.

12.51: ಬೆಂಗಳೂರು -ವಾರಣಾಸಿ ಮಾರ್ಗವಾಗಿ ಹರಿದ್ವಾರಕ್ಕೆ ರೈಲು, ಪ್ರಮುಖ ಧಾರ್ಮಿಕ ತಾಣಗಳಿಗೆ ಪ್ಯಾಕೇಜ್ ಟೂರ್ ವ್ಯವಸ್ಥೆ.

12.50: ಯಶವಂತಪುರ-ಜೈಪುರ ನಡುವೆ ಎಸಿ ಎಕ್ಸ್ ಪ್ರೆಸ್, ಬಾಗಲಕೋಟೆಯಿಂದ ಪಂಡರಾಪುರಕ್ಕೆ ರೈಲು

12.49: ದೇಶದ 9 ಕಡೆ ಹೈಸ್ಪೀಡ್ ರೈಲು ಓಡಲಿದೆ., ರೈಲಿನ ವೇಗ 160 ರಿಂದ 200ಕ್ಕೇರಿಸಲು ಚಿಂತನೆ

12.48:ಇ ಟಿಕೆಟಿಂಗ್ ವ್ಯವಸ್ಥೆ ಇನ್ನಷ್ಟು ವಿಸ್ತರಣೆಗೊಳ್ಳಲಿದೆ. ಐಆರ್ ಸಿಟಿಸಿ ವೆಬ್ ತಾಣವಲ್ಲದೆ ಅಂಚೆ ಕಚೇರಿ, ಮೊಬೈಲ್ ಫೋನ್ ನಲ್ಲೂ ಟಿಕೆಟ್ ಲಭ್ಯವಾಗಲಿದೆ [ವಿವರ ಇಲ್ಲಿ ಓದಿ]

12.47: ಮುಂಬೈ-ಅಹಮದಾಬಾದಿನ ಸೆಕ್ಟರ್ ಗೆ ಮೊದಲ ಬುಲೆಟ್ ರೈಲು ಓಡಿಸಲು ಇಲಾಖೆ ಚಿಂತಿಸಿದೆ.

12.45: ಈ ವರ್ಷದ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಗೆ ಬಂದಿರುವ ವರಮಾನ 1.39 ಲಕ್ಷ ಕೋಟಿ ರು

12.42: ರೈಲ್ವೆ ವಿವಿ ಸ್ಥಾಪನೆ ತಾಂತ್ರಿಕ ಹಾಗೂ ತಾಂತ್ರಿಕೇತರ ಕೋರ್ಸ್ ಬೋಧನೆಗೆ ಒತ್ತು.

12.41: 4000 ಮಹಿಳಾ ಆರ್ ಪಿಎಫ್ ಸಿಬ್ಬಂದಿ ನೇಮಕಾತಿ, ನಿಯೋಜನೆ [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

12.40: ಜೈವಿಕ ಶೌಚಾಲಯಗಳನ್ನು ಬಳಸಲು ಯೋಜಿಸಲಾಗಿದೆ. ಇದರಿಂದ ಸ್ಟೇಷನ್ ಹಾಗೂ ರೈಲ್ವೆ ಹಳಿ ಸ್ವಚ್ಛತೆ ಕಾಯ್ದುಕೊಳ್ಳಲಾಗುವುದು.

12.37: ಶುದ್ಧ ನೀರು RO ಕುಡಿಯುವ ನೀರು ನೀಡಲು ನಿರ್ದೇಶಿಸಲಾಗಿದೆ., ಎಲ್ಲಾ ಸ್ಟೇಷನ್ ಗಳಲ್ಲು ಸಿಸಿಟಿವಿ ಅಳವಡಿಕೆ ಕಡ್ಡಾಯ.

12.36 : ರೆಡಿ ಟು ಈಟ್ ಮಾದರಿ ಊಟ. ಶುದ್ಧ ಆಹಾರ ನೀಡಲು ಇಲಾಖೆ ಬದ್ಧವಾಗಿದೆ.

12.35 : ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳು ಪಿಪಿಪಿ ಮಾದರಿಯಲ್ಲಿ ನಡೆಯಲಿವೆ. ಹಿರಿಯ ನಾಗರಿಕರಿಗೆ ಸ್ಟೇಷನ್ನಲ್ಲಿ ಸಂಚಾರ ಸುಗುಮಗೊಳಿಸಲಾಗುತ್ತದೆ.

12.32 : ವಿತ್ತ ಸಚಿವಾಲಯದಿಂದ ಹೆಚ್ಚುವರಿಯಾಗಿ 1100 ಕೋಟಿ ರು ಅನುದಾನ ಇಲಾಖೆಗೆ ಸಿಕ್ಕಿದೆ.

12.30 : ಕಳೆದ 10 ವರ್ಷಗಳಿಂದ ರೈಲ್ವೆ ಪ್ರಯಾಣದರ ಏರಿಕೆ ಕಂಡಿರಲಿಲ್ಲ. ದರ ಏರಿಕೆಯಿಂದ ಶೇ 130 ರಷ್ಟು ನಷ್ಟ

12.29 : ಬುಲೆಟ್ ರೈಲು ಸಾಗಲು 60 ಸಾವಿರ ಕೋಟಿ ರು ಬೇಕು. ಕಾರ್ಯಗತಗೊಳ್ಳಲು 5-7 ವರ್ಷ ಬೇಕಾಗುತ್ತದೆ.

12.28 : ಭಾರತೀಯ ರೈಲ್ವೆ ಪ್ರತೀ ದಿನ 2.3 ಕೋಟಿ ಪ್ರಯಾಣಿಕರನ್ನ ಸಾಗಿಸುತ್ತದೆ; ಪ್ರತೀ ವರ್ಷ 100 ಕೋಟಿ ಟನ್ ಗಳಿಗೂ ಹೆಚ್ಚು ಸರಕುಗಳನ್ನ ಸಾಗಿಸುತ್ತದೆ.

12.27: ರೈಲ್ವೆ ಇಲಾಖೆಯಲ್ಲಿ ನಾವು ಒಂದು ರುಪಾಯಿ ಗಳಿಸಿದರೆ, 94 ಪೈಸೆ ಖರ್ಚು ಮಾಡುತ್ತೇವೆ

12.26: ಆಸ್ಟ್ರೇಲಿಯಾದ ಇಡೀ ಜನಸಂಖ್ಯೆಯನ್ನ ಒಂದೇ ದಿನ ಸಾಗಿಸುವಷ್ಟು ಸಮರ್ಥ ಭಾರತೀಯ ರೈಲ್ವೆಗಿದೆ

12.25: ರೈಲ್ವೆ ಇಲಾಖೆಗೆ ಮುಂದಿನ 10 ವರ್ಷ ಕಾರ್ಯ ನಿರ್ವಹಣೆಗೆ ಸುಮಾರು 50,000 ಕೋಟಿ ರು ಪ್ರತಿ ವರ್ಷಬೇಕಾಗುತ್ತದೆ.

12.24: 'ಔಷಧಿ ಆರಂಭದಲ್ಲಿ ಕಹಿಯಾಗಿ ಕಂಡರೂ ಅಂತಿಮವಾಗಿ ಅದೇ ಅಮೃತವಾಗುತ್ತದೆ'

12.22: ನಾಲ್ಕೈದು ಯೋಜನೆಗಳು ಕಳೆದ 30 ವರ್ಷಗಳಿಂದ ಪೂರ್ಣಗೊಳ್ಳದೆ ಉಳಿದಿರುವುದನ್ನು ಗಮನಿಸಿದ್ದೇನೆ.

12.20: ಯೋಜನೆ ಘೋಷಣೆಗಿಂತ ಯೋಜನೆ ಅನುಷ್ಠಾನ, ಪೂರ್ಣಗೊಳಿಸುವಿಕೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ.

12.17: ವಿಶ್ವದ ಅತಿದೊಡ್ಡ ಸಾರಿಗೆ ಇಲಾಖೆಯಾಗುವುದು ನಮ್ಮ ಗುರಿ, ಸಾಮಾಜಿಕ ಹಾಗೂ ವಾಣಿಜ್ಯ ಆಶೋತ್ತರಗಳ ಸಮತೋಲನ ಕಾಯ್ದುಕೊಳ್ಳಬೇಕಿದೆ.

12.15: ರೈಲ್ವೆ ಇಲಾಖೆ ಭಾರತದ ಆರ್ಥಿಕತೆಯ ಆತ್ಮವಿದ್ದಂತೆ, ಸದಾನಂದ ಗೌಡ

12.11: ಇಂಗ್ಲೀಷ್ ಭಾಷೆ ಭಾಷಣದ ಜತೆಗೆ ಚಾಣಕ್ಯನ ನೀತಿಯುಳ್ಳ ಸಂಸ್ಕೃತ ಶ್ಲೋಕ ಉಲ್ಲೇಖಿಸಿದ ಡಿವಿಎಸ್.

12.10: ಬಜೆಟ್ ಮಂಡನೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಪಕ್ಷಕ್ಕೆ ನಾನು ಋಣಿ ಎಂದ ಡಿವಿಎಸ್.

12.07: ಡಿವಿ ಸದಾನಂದ ಗೌಡರಿಂದ ಚೊಚ್ಚಲ ರೈಲ್ವೆ ಬಜೆಟ್ ಮಂಡನೆ ಆರಂಭ.

11.15: ಸಂಸತ್ತಿನಲ್ಲಿ ಪ್ರಶ್ನೋತ್ತರ ವೇಳೆ ಜಾರಿಯಲ್ಲಿದ್ದು, ನಂತರ ಸದಾನಂದ ಗೌಡ ಅವರು ರೈಲ್ವೆ ಬಜೆಟ್ ಮಂಡಿಸಲಿದ್ದಾರೆ

11.10: ಭಾರತೀಯ ರೈಲ್ವೆ ಇಲಾಖೆ ಸುಮಾರು 26,000 ಕೋಟಿ ಸಾಲದ ಹೊರೆ ಹೊತ್ತಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಸಮರ್ಥನೆ ನೀಡಲಾಗಿದೆ.

11.00: ಲೋಕಸಭೆಯಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದೆ. ಸ್ಪೀಕರ್ ಸ್ಥಾನದಲ್ಲಿ ಸುಮಿತ್ರಾ ಮಹಾಜನ್ ಇದ್ದಾರೆ. [ಬಜೆಟ್ ಅಧಿವೇಶನ ಅವಧಿ]

10.45: ಪ್ರಧಾನಿ ಮೋದಿಯವರ ಆಶಯದಂತೆ ಬಜೆ ಟ್ ನ ಸಂಪೂರ್ಣ ವಿವರಗಳು ಜನ ಸಾಮಾನ್ಯರ ಕೈ ತಲುಪಲು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. [ಈ ಬಗ್ಗೆ ವಿವರ ಇಲ್ಲಿದೆ]

10.30:ಕರ್ನಾಟಕದ ದಕ್ಷಿಣ ಕನ್ನಡದಕುಗ್ರಾಮ ದೇವರಗುಂಡದಿಂದ ಬೆಳೆದು ಬಂದಿರುವ ಡಿವಿ ಸದಾನಂದ ಗೌಡ ಅವರು ರೈಲ್ವೆ ಸಚಿವರಾಗಿದ್ದರೆ ಅವರ ಸೋದರ ಸುರೇಶ್ ಉಡುಪಿ ಬಳಿ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿದ್ದಾರೆ. ಸದಾನಂದ ಗೌಡ ಅವರು ವೃತ್ತಿ ಬದುಕನ್ನು ವಕೀಲಿಕೆ ಮೂಲಕ ಆರಂಭಿಸಿದ್ದರು [ಸದಾನಂದ ಗೌಡರ ವ್ಯಕ್ತಿ ಚಿತ್ರ ಓದಿ]

10.25: ಸದಾನಂದ ಗೌಡ ಅವರು ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾಗಿದ್ದು, ಕರ್ನಾಟಕದ ಜನರ ಆಶೋತ್ತರಗಳನ್ನು ಈಡೇರಿಸುತ್ತಾರೆ ಎಂಬ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

10.15: ರೈಲ್ವೆ ಬಜೆಟ್ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 26,190.44 ಅಂಶ ಮುಟ್ಟಿ ಷೇರುಪೇಟೆಯಲ್ಲಿ ಹರ್ಷ ಮೂಡಿಸಿದೆ.

ರೈಲ್ವೆ ನಿಲ್ದಾಣಗಳ ಆಧುನೀಕರಣ, ಸಾವಿರಾರು ಹೊಸ ರೈಲ್ವೆ ಬೋಗಿಗಳ ನಿರ್ಮಾಣ, ಸ್ವಚ್ಛತೆ, ಸುರಕ್ಷ್ತತೆ, ರೈಲು ಮತ್ತು ರೈಲ್ವೇ ಹಳಿಗಳ ದೋಷ ಪತ್ತೆಗೆ ಎಕ್ಸ್ ರೇ ಸಿಸ್ಟಮ್​ ಅಳವಡಿಸಲು ಚಿಂತನೆ, ಮಹಿಳಾ ದೌರ್ಜನ್ಯ, ಕ್ರೈಂಗಳನ್ನು ತಡೆಯಲು ಕ್ರಮ ಮುಂತಾದವು ಚೊಚ್ಚಲ ಬಜೆಟ್ ನ ಆದ್ಯತೆಯಾಗಲಿದೆ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ.ಆದರೆ, ಸಂಸತ್ ಪ್ರವೇಶಿಸುತ್ತಿದ್ದಂತೆ ಮೌನಕ್ಕೆ ಶರಣಾಗಿ ಮುಗುಳ್ನಗೆಗೆ ಶರಣಾದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rail Budget 2014 Live Updates In Kannada: Railway Minister Sadananda Gowda goes social with maiden budget. He turned up at the Lok Sabha but continued to remain mum over what to expect from his maiden railway budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more